ಸುಳ್ಯ: ಭಾರೀ ಗಾತ್ರದ ಮರ ಬಿದ್ದು ಸುಳ್ಯ ತಹಶೀಲ್ದಾರ್ ವಸತಿ ಗೃಹಕ್ಕೆ ಹಾನಿ ಸಂಭವಿಸಿದ ಘಟನೆ ಬುಧವಾರ ನಡೆದಿದೆ. ಭಾರೀ ಮಳೆ ಮತ್ತು ಗಾಳಿಗೆ ಸುಳ್ಯ ತಾಲೂಕು ಕಚೇರಿ ಬಳಿಯಲ್ಲಿರುವ ಬೃಹತ್ ಗಾತ್ರದ ಎರಡು ಮರಗಳು ಧರಾಶಾಹಿಯಾಗಿದೆ. ಮರ ಬಿದ್ದು ತಹಶೀಲ್ದಾರ್ ವಸತಿ ಗೃಹದ ಒಂದು ಭಾಗದ ಮೇಲ್ಚಾವಣಿಗೆ ಹಾನಿಯಾಗಿದೆ ಮತ್ತು ವಸತಿ ಗೃಹದ ಸುತ್ತಲಿನ ಕಾಂಪೌಂಡ್ ಗೋಡೆ ಜರಿದು ಬಿದ್ದಿದೆ.
ಭಾರೀ ಗಾತ್ರದ ಎರಡು ಮರ ಮುರಿದು ಬಿದ್ದ ಕಾರಣ ಈ ಭಾಗದಲ್ಲಿ ರಸ್ತೆ ತಡೆಯೂ ಉಂಟಾಯಿತು. ಗೃಹರಕ್ಷಕ ದಳ ಮತ್ತು ನಗರ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಮರಗಳನ್ನು ತುಂಡರಿಸಲಾಯಿತು.
ಸುಳ್ಯ ನಗರದಲ್ಲಿ ವಿವಿಧ ಕಡೆಗಳಲ್ಲಿ ಅಲ್ಲಲ್ಲಿ ಮರ ಮುರಿದು ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿಯಾಗಿ ತಂತಿಗಳು ತುಂಡಾಗಿ ವಿದ್ಯುತ್ ಕಡಿತ ಉಂಟಾಗಿದೆ. ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಸುಳ್ಯದಲ್ಲಿ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆ ಬುಧವಾರವೂ ಮುಂದುವರಿಯಿತು