ಪುತ್ತೂರು: ಉತ್ತರ ಭಾರತದ ಹಿಮಾಲಯ ಪರ್ವತ ಪ್ರದೆಶಕ್ಕೆ ಚಾರಣ ಹೋಗಿದ್ದ ಪುತ್ತೂರು ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ. ಪುತ್ತೂರಿನ ಪರ್ಲಡ್ಕದ ನಿವಾಸಿ ಚಂದ್ರಕಾಂತ ಭಟ್(47) ಮೃತಪಟ್ಟ ದುರ್ದೈವಿ.
ಮಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೂನ್ 19 ರಂದು ಒಟ್ಟು 20 ಮಂದಿಯ ತಂಡದೊಂದಿಗೆ ಹಿಮಾಲಯದ ಕ್ಷೇತ್ರ ದರ್ಶನಕ್ಕೆ ತೆರಳಿದ್ದರು ಎನ್ನಲಾಗಿದೆ. ಇವರ ಜೊತೆ ಪುತ್ತೂರಿನ ಐವರು ಇದ್ದರು ಎಂದು ತಿಳಿದು ಬಂದಿದೆ.