ಕಾಸರಗೋಡು: ಬಂದಡ್ಕ ನಿವಾಸಿಯಾಗಿರುವ ಹೋಟೆಲ್ ಮಾಲಕ ಗುಜರಾತ್ ನಲ್ಲಿ ವಿದ್ಯುತ್ ಶಾಕ್ ತಗಲಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಮಾಣಿಮೂಲೆ ಬೈತಳದ ವಿನೋದ್ ರೈ(25) ಎಂದು ಗುರುತಿಸಲಾಗಿದೆ. ಕಳೆದ ಏಳು ವರ್ಷಗಳಿಂದ ಸಹೋದರನ ಜೊತೆ ಗುಜರಾತ್ ನಲ್ಲಿ ಹೋಟೆಲ್ ನಡೆಸುತ್ತಿದ್ದನು. ಹೋಟೆಲನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ದತೆ ನಡೆಯುತ್ತಿತ್ತು. ಹೊಸ ಕಟ್ಟಡ ದೊಳಗೆ ಕಾರ್ಮಿಕರು ಮತ್ತು ವಿನೋದ್ ರಿಗೆ ವಿದ್ಯುತ್ ಶಾಕ್ ತಗಲಿದ್ದು, ಕಾರ್ಮಿಕರು ಮತ್ತು ವಿನೋದ್ ರನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ಮೃತದೇಹವನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.