ಕಾರ್ಕಳ: ದಾರಿಹೋಕ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದ ತಂಡವು ಬಂಧಿಸಿದೆ.
ಬೆಳ್ಮಣ್ ಸಮೀಪದ ಮುಲ್ಲಡ್ಕ ಎಂಬಲ್ಲಿ ಜೂನ್ 30ರ ಮಧ್ಯಾಹ್ನ 12.30ಕ್ಕೆ ಈ ಕೃತ್ಯ ನಡೆದಿದೆ. ಈ ಕುರಿತು ಕಮಲಮ್ಮ(70) ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ತನಿಖೆ ನಡೆಸಿದ ಪೊಲೀಸರು ಕಟೀಲ್ ಕೊಂಡೆಮೂಲ ಎಸ್ಟಿ ಕಾಲೋನಿಯ ಶ್ರೀನಿಧಿ ಯಾನೆ ಶೀನು(21), ಕಟೀಲು ಎಕ್ಕಾರು ದೇವರಗುಡ್ಡೆ ನಿವಾಸಿ ನಿತಿನ್ ಪೂಜಾರಿ(20), ಕಂದಾವರ ಕಿನ್ನಿಕಂಬಳದ ಪುರುಷೋತ್ತಮ ಪೂಜಾರಿ ಯಾನೆ ರವಿ(27) ಎಂಬವರು ಬಂಧಿಸಿ ಕಳವು ಸೊತ್ತುಗಳನ್ನು ವಶಪಡಿಸಿದ್ದಾರೆ.
ಆರೋಪಿಗಳಿಂದ ಒಂದುವರೆ ಪವನ್ ಚಿನ್ನದ ಚೈನ್, 2 ಚಿನ್ನ ಲೇಪಿತವಾಗಿರುವ ರೋಲ್ಡ್ ಗೋಲ್ಡ್ ಚೈನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹೋಂಡಾ ಹಾರ್ನೆಟ್ ಬೈಕ್ ನ್ನು ವಶಪಡಿಲಾಗಿದೆ. ಒಟ್ಟು ಇದರ ಮೌಲ್ಯ 1,33,00 ಆಗಿರುತ್ತದೆ.
ಗ್ರಾಮಾಂತರ ಠಾಣಾಧಿಕಾರಿ ಪುರುಷೋತ್ತಮ, ಸಿಬ್ಬಂದಿಗಳಾದ ರಾಜೇಶ್, ಪ್ರಶಾಂತ್, ರಾಘವೇಂದ್ರ, ಗುರುರಾಜ್, ರಾಮ, ಗಿರೀಶ್, ಘನ ಶ್ಯಾಮ, ಚಾಲಕ ಜಗದೀಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.