News Kannada
Tuesday, November 29 2022

ಕರಾವಳಿ

ಉದ್ಘಾಟನೆಗೊಂಡು ಎರಡೇ ತಿಂಗಳಲ್ಲಿ ಕುಸಿದು ಬಿದ್ದ ತೂಗು ಸೇತುವೆ: ದೋಣಿಯನ್ನೇ ಅವಲಂಭಿಸಿರುವ ಪರಿಸರವಾಸಿಗಳು - 1 min read

Photo Credit :

ಉದ್ಘಾಟನೆಗೊಂಡು ಎರಡೇ ತಿಂಗಳಲ್ಲಿ ಕುಸಿದು ಬಿದ್ದ ತೂಗು ಸೇತುವೆ: ದೋಣಿಯನ್ನೇ ಅವಲಂಭಿಸಿರುವ ಪರಿಸರವಾಸಿಗಳು

ಕಾಸರಗೋಡು: ಉದ್ಘಾಟನೆಗೊಂಡು ಎರಡೇ ತಿಂಗಳಲ್ಲಿ ತೂಗು ಸೇತುವೆ ಕುಸಿದು ಬಿದ್ದು ನಾಲ್ಕು ವರ್ಷಗಳು ಕಳೆದರೂ ಇನ್ನೂ ಮರು ನಿರ್ಮಿಸಿಲ್ಲ.

ಕಳೆಪೆ ಕಾಮಗಾರಿ ಹಿನ್ನಲೆಯಲ್ಲಿ ತ್ರಿಕ್ಕರಿಪುರ ಮಾಡಕಲ್ಲ್ ಹೊಳೆಗೆ ಕೋಟ್ಯಾ೦ತರ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತೂಗು ಸೇತುವೆ 2013 ರ ಜೂನ್ ತಿಂಗಳಲ್ಲಿ ಕುಸಿದು ಬಿದ್ದಿತ್ತು. ಏಪ್ರಿಲ್ 28 ರಂದು ತೂಗು ಸೇತುವೆಯನ್ನು ಅಂದು ರಾಜ್ಯದ ಕಂದಾಯ ಸಚಿವರಾಗಿದ್ದ ಅಡೂರು ಪ್ರಕಾಶ್ ಉದ್ಘಾಟಿಸಿದ್ದರು. ಉದ್ಘಾಟನೆ ಬಳಿಕ ಎರಡೇ ತಿಂಗಳು ಈ ಸೇತುವೆಗೆ ಆಯುಷ್ಯ ಇತ್ತು.

ಜೂನ್ 28 ರಂದು ಸೇತುವೆ ಕುಸಿದು ಹೊಳೆ ಪಾಲಾಗಿತ್ತು. ಈಗ ಅದರ ಅವಶೇಷಗಳು ಮಾತ್ರ ಗೋಚರಿಸುತ್ತಿದ್ದು, ಪರಿಸರವಾಸಿಗಳು ದೋಣಿಯನ್ನೇ ಮತ್ತೆ ಅವಲಂಭಿಸಬೇಕಿದೆ.

2013 ರಲ್ಲಿ ಮಲಪ್ಪುರಂನಲ್ಲಿ ಹೊಳೆಯಲ್ಲಿ ದೋಣಿ ಮಗುಚಿ ಹಲವು ವಿದ್ಯಾರ್ಥಿಗಳು ಮೃತಪಟ್ಟ ಹಿನ್ನಲೆಯಲ್ಲಿ ರಾಜ್ಯದ 33 ಹೊಳೆಗೆ ತೂಗು ಸೇತುವೆ ನಿರ್ಮಾಣಕ್ಕೆ ಅಂದಿನ ಸರಕಾರ ಅನುಮತಿ ನೀಡಿತ್ತು, ಇದರಂತೆ ಕಾಸರಗೋಡು ಜಿಲ್ಲೆಗೆ ಮಾಡಕಲ್ಲ್ ಮತ್ತು ಪಡನ್ನ ಕಡಪ್ಪುರ ಹೊಳೆಗೆ ತೂಗು ಸೇತುವೆ ಮಂಜೂರಾಗಿತ್ತು. ಮಾಡಕಲ್ಲ್ 320 ಮೀಟರ್ ಉದ್ದದ ಸೇತುವೆಗೆ 3.96 ಕೋಟಿ ರೂ, ಮತ್ತು ಪಡನ್ನ ಕಡಪ್ಪುರ 280 ಮೀಟರ್ ಸೇತುವೆಗೆ 2.85 ಕೋಟಿ ರೂ ಒದಗಿಸಲಾಗಿತ್ತು. ಇದರಂತೆ ನಿರ್ಮಿಸಲಾದ ತೂಗು ಸೇತುವೆ ಉದ್ಘಾಟನೆಯಾಗಿ 58ನೇ ದಿನದಲ್ಲೇ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿ ಇದಕ್ಕೆ ಕಾರಣವಾಗಿತ್ತು ಎಂದು ತನಿಖೆ ನಡೆಸಿದ ವಿಜಿಲೆನ್ಸ್ ಪತ್ತೆ ಹಚ್ಚಿತ್ತು.

ಕುಸಿದ ಸೇತುವೆ ಬದಲು ಬದಲಿ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಇನ್ನೂ ಭರವಸೆ ಈಡೇರಿಸಿಲ್ಲ. ಸೇತುವೆಯ ಕಂಬವನ್ನು 25 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿತ್ತು .ನಿರ್ಮಾಣಕ್ಕೆ ಬಳಸಿದ್ದ ಕಬ್ಬಿಣ ಸರಳುಗಳು ಕಳಪೆ ಗುಣಮಟ್ಟ ಕೊರತೆ ಕುಸಿಯಲು ಕಾರಣ ಎನ್ನಲಾಗಿದೆ.

ಇದೀಗ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಭಯದ ವಾತಾವರಣದಲ್ಲಿ ದೋಣಿಯಲ್ಲೇ ಹೊಳೆ ದಾಟಬೇಕಿದೆ. ಗಾಳಿ, ಮಳೆ ಸಂದರ್ಭದಲ್ಲೂ ಕೊಡೆ ಹಿಡಿದು, ಒದ್ದೆಯಾಗಿ ದೋಣಿಯಲ್ಲಿ ಭೀತಿಯ ವಾತಾವರಣದಲ್ಲಿ ಹೊಳೆ ದಾಟಬೇಕಾಗಿ ಬರುತ್ತಿದ್ದು, ಮಾತ್ರವಲ್ಲ ಮೀನುಗಾರಿಕಾ ದೋಣಿಯಾದುದರಿಂದ ಎಲ್ಲಾ ಸಮಯದಲ್ಲೂ ದೋಣಿ ಲಭ್ಯವಾಗದು. ಅದಕ್ಕಾಗಿ ಕಾಯಬೇಕಿದೆ. ಇದರಿಂದ ಹೊಳೆದಾಟಲು ಸಮಸ್ಯೆ ಎದುರಿಸುತ್ತಿದ್ದು, ದಿನಂಪ್ರತಿ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ರಾಜ್ಯದ ಅತೀ ಉದ್ದದ ಸೇತುವೆಯಾಗಿದ್ದ ಮಾಡಕಲ್ಲ್ ಸೇತುವೆ ದಿನಗಳಿಗೆ ಮಾತ್ರ ಸೀಮಿತವಾಗಿದ್ದು, ಕಳಪೆ ಕಾಮಗಾರಿ ಕಾರಣವಾಗಿದ್ದು, ಪರಿಸರವಾಸಿಗಳಿಗೆ ಸವಾಲಾಗಿ ಪರಿಣಮಿಸಿದೆ.

See also  ತೆಂಗಿನ ಮರ ಬಿದ್ದು ಮನೆಗೆ ಹಾನಿ; ಇಬ್ಬರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು