News Kannada
Tuesday, September 27 2022

ಕರಾವಳಿ

ದಿ| ಶರತ್ ಮಡಿವಾಳ ಮನೆಗೆ ಶಕುಂತಳಾ ಶೆಟ್ಟಿ ಭೇಟಿ - 1 min read

Photo Credit :

ದಿ| ಶರತ್ ಮಡಿವಾಳ ಮನೆಗೆ ಶಕುಂತಳಾ ಶೆಟ್ಟಿ ಭೇಟಿ

ಬಂಟ್ವಾಳ: ಪುತ್ತೂರು ಶಾಸಕಿ ಶಕುಂತಲಾ ಶೆಟ್ಡಿ ಗುರುವಾರ ಸಂಜೆ ಅರ್.ಎಸ್.ಎಸ್ ಕಾರ್ಯಕರ್ತ ಶರತ್ ಅವರ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು. ಶರತ್ ತಾಯಿ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಾಗ, ಶಾಸಕಿಯವರ ಕಣ್ಣಲ್ಲೂ ನೀರು ಜಿನುಗಿತ್ತು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಕುಂತಲಾ ಶೆಟ್ಟಿ, ಶರತ್ ಅಂತ್ಯಸಂಸ್ಕಾರ ವೇಳೆ ದೃಶ್ಯಮಾಧ್ಯಮದಲ್ಲಿ ತನ್ನ ಪತಿಯ ಊರಿನ ಪರಿಚಯಸ್ಥರನ್ನು ಕಂಡಿದ್ದೆ. ಮತ್ತೆ ವಿಚಾರಿಸಿದಾಗ ಶರತ್ ತಾಯಿ ನಮ್ಮೂರಿನವರೇ ಎಂದು ಗೊತ್ತಾಯಿತು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ಧಿವಂತರ, ವಿದ್ಯಾವಂತರ ಸುಸಂಸ್ಕೃತರ ಜಿಲ್ಲೆಯಲ್ಲಿ ಶೇ.2ರಷ್ಟು ಕಿಡಿಗೇಡಿಗಳಿಂದ ನಡೆಯುವ ಹಿಂಸಾಕೃತ್ಯ ಜಿಲ್ಲೆಗೆ ಅಪಮಾನಕರ ವಿಚಾರ ಎಂದು ಹೇಳಿದರು. ಸಾಕಷ್ಟು ಪೊಲೀಸ್ ಬಂದೋಬಸ್ತ್ ಇದ್ದಾಗಲೂ ಕೊಲೆಯಂತ ದುಷ್ಕೃತ್ಯಗಳು ನಡೆಯುತ್ತಿವೆ ಎಂದಾದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃತ್ಯವನ್ನು ಯಾರೇ ಮಾಡಿರಲಿ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೊಳಗಾಗದೆ ಆರೋಪಿಗಳನ್ನು ಬಂಧಿಸಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಕಾನೂನಿನ ಭಯ ಮೂಡಿಸುವ ಕೆಲಸವಾಗಬೇಕು ಮುಂದಿನ ದಿನಗಳಲ್ಲಾದರೂ ಸಮಾಜದಲ್ಲಿ ಪರಸ್ಪರ ಹೃದಯ ಬೆಸೆಯುವ ಕಾರ್ಯವಾಗಬೇಕು ತನ್ಮೂಲಕ ಎಲ್ಲರೂ ಒಟ್ಟಾಗಿ ಬಾಳವಂತಾಬೇಕು, ಜಿಲ್ಲೆಯಲ್ಲಿ ಮರಳಿ ಶಾಂತಿ ವಾತಾವರಣ ನೆಲೆಯಾಗಬೇಕು ಎಂದ ಅವರು ಮಗನನ್ನು ಕಳಕೊಂಡ ನೊಂದ ಜೀವಗಳಿಗೆ ದು:ಖವನ್ನು ಸಹಿಸುವ ಶಕ್ತಿ ಭಗವಂತನ ನೀಡಲಿ ಎಂದು ಆಶಿಸಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ರಮಾನಾಥ ವಿಟ್ಲ, ಮಹೇಶ್ ನಾಯ್ಕ್ ಉಪಸ್ಥಿತರಿದ್ದರು.

1

See also  ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ವಾರ್ಷಿಕ ಮಹೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು