News Kannada
Wednesday, December 07 2022

ಕರಾವಳಿ

ನಾಲ್ಕು ಮನೆಗಳ ಚಿನ್ನಾಭರಣ, ನಗದು ಕಳವು: ಆರೋಪಿಯ ಬಂಧನ

Photo Credit :

ನಾಲ್ಕು ಮನೆಗಳ ಚಿನ್ನಾಭರಣ, ನಗದು ಕಳವು: ಆರೋಪಿಯ ಬಂಧನ

ಕಾಸರಗೋಡು: ನಾಲ್ಕು ಮನೆಗಳಿಗೆ ನುಗ್ಗಿ ಬಾರಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕುಂಬಳೆ ಆರಿಕ್ಕಾಡಿ ಬನ್ನಂಗಳದ ಸಿದ್ದಿಕ್ (45) ಎಂದು ಗುರುತಿಸಲಾಗಿದೆ ಈತನ ಮೂವರು ಸಹಚರನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಫೆಬ್ರವರಿ 25 ರಂದು ಪಚ್ಚoಬಳ ಎಂಬಲ್ಲಿ ಕಳವು ನಡೆದಿತ್ತು. ಮನೆಯವರೆಲ್ಲರೂ ಸಮೀಪದ ಮಸೀದಿಗೆ ತೆರಳಿದ್ದ ಸಂದರ್ಭದಲ್ಲಿ ನಾಲ್ಕು ಮನೆಗಳಿಗೆ ನುಗ್ಗಿ ಕಳವು ಮಾಡಲಾಗಿತ್ತು.

ಒಟ್ಟು 26 ಪವನ್ ಚಿನ್ನಾಭರಣ ಮತ್ತು ಮೂರು ಲಕ್ಷ ರೂ. ವನ್ನು ಕಳವು ಮಾಡಲಾಗಿತ್ತು.

ಅಲಿಕುoಞ ಯವರ ಮನೆಯಿಂದ 12 ಪವನ್ ಚಿನ್ನಾಭರಣ, 1.15 ಲಕ್ಷ ರೂ. ನಗದು, ನಬಿಸಾರವರ ಮನೆಗೆ ನುಗ್ಗಿ ಏಳು ಪವನ್ ಚಿನ್ನಾಭರಣ ಮತ್ತು 75 ಸಾವಿರ ರೂ, ಅಬ್ದುಲ್ ರಹಮಾನ್ ರವರ ಮನೆಯಿಂದ 15 ಪವನ್, 90 ಸಾವಿರ ರೂ, ಅಹಮ್ಮದ್ ರವರ ಮನೆಗೆ ನುಗ್ಗಿ ಮೂರು ಪವನ್ ಚಿನ್ನಾಭರಣ ಮತ್ತು 19 ಸಾವಿರ ರೂ, ನಗದನ್ನು ಕಳವು ಮಾಡಲಾಗಿತ್ತು.

ಕಳವು ನಡೆಸುತ್ತಿದ್ದ ಸಂದರ್ಭದಲ್ಲಿ ಅಲಿಕುoಞ ಯವರಿಗೆ ತಲವಾರು ತೋರಿಸಿ ಬೆದರಿಸಿ ಸೊತ್ತು ಸಹಿತ ತಂಡವು ಪರಾರಿಯಾಗಿತ್ತು.

ಸಿದ್ದಿಕ್ಕೂ 20ಕ್ಕೂ ಅಧಿಕ ಕಳವು ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಐದು, ಮಂಜೇಶ್ವರ, ಬದಿಯಡ್ಕ, ಆದೂರು ಪೊಲೀಸ್ ಠಾಣೆಯಲ್ಲೂ ಕಳವು ಪ್ರಕರಣಗಳಿವೆ.

2003 ರಲ್ಲಿ ಕಾಸರಗೋಡಿನಲ್ಲಿ ಮನೆಯೊಂದಕ್ಕೆ ನುಗ್ಗಿ ಮನೆ ಮಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯಾಗಿದ್ದಾನೆ.

See also  ಕಾರ್ ಪಲ್ಟಿಯಾಗಿ ಟೆಂಪೋಗೆ ಡಿಕ್ಕಿ: ಇಬ್ಬರ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು