News Kannada
Friday, December 02 2022

ಕರಾವಳಿ

ಗೌಡ ಸಮುದಾಯ ಕಡೆಗಣನೆ ಆರೋಪ: ಮುನಿಸಿಕೊಂಡ ನಾಯಕರೊಂದಿಗೆ ಎಐಸಿಸಿ ಕಾರ್ಯದರ್ಶಿ ಚರ್ಚೆ

Photo Credit :

ಗೌಡ ಸಮುದಾಯ ಕಡೆಗಣನೆ ಆರೋಪ: ಮುನಿಸಿಕೊಂಡ ನಾಯಕರೊಂದಿಗೆ ಎಐಸಿಸಿ ಕಾರ್ಯದರ್ಶಿ ಚರ್ಚೆ

ಸುಳ್ಯ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮತ್ತು ಇತರ ಸ್ಥಾನಗಳನ್ನು ನೀಡುವ ಸಂದರ್ಭದಲ್ಲಿ ಸುಳ್ಯದಲ್ಲಿ ಬಹುಸಂಖ್ಯಾತರಾಗಿರುವ ಗೌಡ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಮುನಿಸಿಕೊಂಡಿರುವ ಕಾಂಗ್ರೆಸ್ನ ಗೌಡ ಸಮುದಾಯ ನಾಯಕರನ್ನು ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್ ಭೇಟಿಯಾಗಿ ಮಾತುಕತೆ ನಡೆಸಿದರು.

ಸುಳ್ಯ ನಿರೀಕ್ಷಣಾ ಮಂದಿರಲ್ಲಿ ಪ್ರಮುಖರಾದ ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ಸೋಮಶೇಖರ ಕೊಂಗಾಜೆ, ಪಿ.ಸಿ.ಜಯರಾಮ, ಪಿ.ಎಸ್.ಗಂಗಾಧರ, ಸತೀಶ್ ಕೂಜುಗೋಡು, ಸದಾನಂದ ಮಾವಜಿ, ಪಿ.ಎಸ್.ಕಾರ್ಯಪ್ಪ ಮತ್ತಿತರರ ಜೊತೆ ಚರ್ಚೆ ನಡೆಸಿದರು. ಬಹುಸಂಖ್ಯಾತರಾಗಿರುವ ಗೌಡ ಸಮುದಾಯಕ್ಕೆ ಕಾಂಗ್ರೆಸ್ ನಲ್ಲಿ ಯಾವುದೇ ಸ್ಥಾನಮಾನ ನೀಡುತ್ತಿಲ್ಲ. ಮಾತ್ರವಲ್ಲದೆ ಇದ್ದಂತಹ ಸ್ಥಾನಗಳನ್ನೂ ತೆಗೆಯಲಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡು ಕೊಳ್ಳಬೇಕು ಎಂದು ನಾಯಕರು ಮನವಿ ಸಲ್ಲಿಸಿದರು.

ಬಹುಸಂಖ್ಯಾತರಾಗಿರುವ ಗೌಡ ಸಮುದಾಯದ ಪ್ರಮುಖರಿಗೆ ಕಾಂಗ್ರೆಸ್ನಲ್ಲಿ ಯಾವುದೇ ಸ್ಥಾನಗಳನ್ನೂ ನೀಡುತ್ತಿಲ್ಲ. ಆದರೆ ಬಿಜೆಪಿಯಲ್ಲಿ ಗೌಡ ಸಮುದಾಯಕ್ಕೆ ಬಹಳಷ್ಟು ಸ್ಥಾನಗಳನ್ನು ನೀಡಿದೆ. ಇದರಿಂದ ಕಾಂಗ್ರೆಸ್ ಗೆ ಪಕ್ಷ ಸಂಘಟನೆಗೆ ಭಾರೀ ಹಿನ್ನಡೆಯಾಗುತ್ತಿದೆ ಎಂದು ನೇತಾರರು ಎಐಸಿಸಿ ಕಾರ್ಯದರ್ಶಿಗೆ ವಿವರಿಸಿದರು. ಆದ್ದರಿಂದ ಗೌಡ ಸಮುದಾಯದ ಪ್ರಮುಖರಿಗೆ ಸೂಕ್ತ ಸ್ಥಾನವನ್ನು ನೀಡಿ ಸುಳ್ಯದಲ್ಲಿ ಕಾಂಗ್ರೆಸನ್ನು ಬಲಿಷ್ಠವಾಗಿಸಬೇಕು ಎಂದು ಒತ್ತಾಯಿಸಿದರು.

ಇವರ ಮನವಿಯನ್ನು ಸ್ವೀಕರಿಸಿದ ವಿಷ್ಣುನಾಥ್ ಬೇಡಿಕೆ ನ್ಯಾಯಯುತವಾಗಿದೆ. ಎಐಸಿಸಿ ವರಿಷ್ಠರೊಂದಿಗೆ ಮತ್ತು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಸೂಕ್ತ ಸ್ಥಾನವನ್ನು ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೂಡ ಚರ್ಚೆಯಲ್ಲಿ ಭಾಗವಹಿಸಿ ಸೂಕ್ತ ಸ್ಥಾನವನ್ನು ನೀಡುವುದಾಗಿ ಭರವಸೆಯಿತ್ತರು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಬೆನ್ನಲ್ಲೇ ಸುಳ್ಯ ಕಾಂಗ್ರೆಸ್ನಲ್ಲಿ ಅತೃಪ್ತಿ ಭುಗಿಲೆದ್ದು ಗೌಡ ಸಮುದಾಯದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಭೆ ನಡೆಸಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದರು. ವರಿಷ್ಠರಿಂದ ಭರವಸೆ ದೊರೆತ ಹಿನ್ನಲೆಯಲ್ಲಿ ನಾಯಕರು ತಮ್ಮ ನಿರ್ಧಾರವನ್ನು ಬದಲಿಸಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ಪ್ರಮುಖರಾದ ಡಾ.ಬಿ.ರಘು, ದಿವ್ಯಪ್ರಭಾ ಚಿಲ್ತಡ್ಕ, ಟಿ.ಎಂ.ಶಹೀದ್, ಚಂದ್ರಶೇಖರ ಕಾಮತ್, ಸರಸ್ವತಿ ಕಾಮತ್, ಪಿ.ಎ.ಮಹಮ್ಮದ್, ಮಹಮ್ಮದ್ ಕುಞಿ ಗೂನಡ್ಕ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಚಿವರೇ ವೇದಿಕೆಗೆ ಕರೆತಂದರು:
ಲಯನ್ಸ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮತ್ತು ಭರತ್ ಮುಂಡೋಡಿ ಅವರನ್ನು ವೇದಿಕೆಗೆ ಆಹ್ವಾನಿಸಿದರೂ ಅವರು ವೇದಿಕೆ ಏರಲಿಲ್ಲ. ಸಮಾವೇಶ ಮುಂದುವರಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಭೆಗೆ ಆಗಮಿಸಿದರು. ಎಂ.ವೆಂಕಪ್ಪ ಗೌಡರು ಸಭಾಂಗಣದಲ್ಲಿ ಕುಳಿತಿರುವುದನ್ನು ಗಮನಿಸಿದ ಸಚಿವರು ವೇದಿಕೆಯಿಂದ ಇಳಿದು ಬಂದು ವೆಂಕಪ್ಪ ಗೌಡರನ್ನು ಕೈ ಹಿಡಿದು ಕರೆದೊಯ್ದು ವೇದಿಕೆಯಲ್ಲಿ ಕುಳ್ಳಿರಿಸಿದರು.

See also  ಧರ್ಮಸ್ಥಳಕ್ಕೆ ನೀರಿನ ದೇಣಿಗೆ ನೀಡಿದ ಬೆಂಗಳೂರಿನ ಭಕ್ತರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು