News Kannada
Sunday, December 04 2022

ಕರಾವಳಿ

ಉಜಿರೆ-ಬೆಳಾಲು ಹದಗೆಟ್ಟ ರಸ್ತೆ: ಪ್ರಧಾನಮಂತ್ರಿಗೆ ಮನವಿ

Photo Credit :

ಉಜಿರೆ-ಬೆಳಾಲು ಹದಗೆಟ್ಟ ರಸ್ತೆ: ಪ್ರಧಾನಮಂತ್ರಿಗೆ ಮನವಿ

ಬೆಳ್ತಂಗಡಿ: ಶೈಕ್ಷಣಿಕ ಕೇಂದ್ರ, ವ್ಯಾಪಾರೀಕೇಂದ್ರವೆಂದು ಹೆಸರುವಾಸಿಯಾಗಿರುವ ಉಜಿರೆ ಪೇಟೆಯ ಸನಿಹವೇ ಬೆಳಾಲು ಎಂಬಲ್ಲಿಗೆ ಹಾದು ಹೋಗುವ ಹದಗೆಟ್ಟರಸ್ತೆಯ ಬಗ್ಗೆ ಉಜಿರೆ ನಿವಾಸಿ, ವೃತ್ತಿಯಲ್ಲಿಎಂಜಿನಿಯರ್ ಆಗಿರುವ ಜಗದೀಶ್ ಪ್ರಸಾದ್ ಅವರು ಪ್ರಧಾನ ಮಂತ್ರಿಯವರ ಕಾರ್ಯಾಲಯಕ್ಕೆ ವಿವರಿಸಿ ಮೈಲ್ ಮೂಲಕ ಮನವಿ ಮಾಡಿದ್ದಾರೆ.

ಇವರು ಮಾಡಿದ ಮೈಲ್ ಗೆ ಸ್ಪಂದನೆ ನೀಡಿದ ಪ್ರಧಾನಮಂತ್ರಿಯವರ ಕಾರ್ಯಾಲಯ ಅದನ್ನು ರಾಜ್ಯ ಸರಕಾರಕ್ಕೆ ರವಾನಿಸಿದ್ದಾರೆ.

ಪ್ರಧಾನ ಮಂತ್ರಿಯವರಿಗೆ ಕಳುಹಿಸಿದ ಮೈಲ್ ನಲ್ಲಿ ಉಜಿರೆಯಿಂದ ಬೆಳಾಲು ರಸ್ತೆಯಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು, ವಾಹನಗಳ ಸಂಚಾರವಿದೆ. ಜನವಸತಿ ಇರುವ ಪ್ರದೇಶವಾಗಿದೆ. ಉಜಿರೆಯಿಂದ ಬೆಳಾಲು ರಸ್ತೆಯಲ್ಲಿ 3 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಉಂಡ್ಯಾಪು ನಗರ, ಶಿವಾಜಿ ನಗರ, ಮಯೂರ ನಗರ, ಕುವೆಂಪು ನಗರ, ಓಡಲ, ಮಾಚಾರು, ಬೆಳಾಲು ಮೊದಲಾದ ಕಡೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಈ ರಸ್ತೆಯ ನಾದುರಸ್ತಿಯಿಂದ ಕಷ್ಟಕರವಾಗಿದೆ. ಇದನ್ನು ಸರಿಪಡಿಸಿಕೊಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಜು. 17 ರಂದು ಅವರು ಮನವಿ ಮಾಡಿದ್ದರು. ಅದಕ್ಕೆ ಸ್ಪಂದನೆ ನೀಡಿರುವ ಕಾರ್ಯಾಲಯ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಗೆ ರವಾನಿಸಿದ್ದಾರೆ. ಇನ್ನು ಲೋಕೋಪಯೋಗಿ ಇಲಾಖೆ ಏನು ಮಾಡುತ್ತೋ ಕಾದು ನೋಡಬೇಕಾಗಿದೆ.

See also  ಅಬುದಾಬಿಯಲ್ಲಿ ಅನಿಲ ಸೋರಿಕೆ: ಮೂವರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು