News Kannada
Sunday, November 27 2022

ಕರಾವಳಿ

ಹಿಂದೂ ನಾಯಕರ  ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಿ - 1 min read

Photo Credit :

ಹಿಂದೂ ನಾಯಕರ  ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಿ

ಬೆಳ್ತಂಗಡಿ: ಶರತ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಹಿಂದೂ ನಾಯಕರ ಹತ್ಯಾ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಮತ್ತು ವಿಶೇಷ ತುರ್ತು ಕೋರ್ಟ್ ಸ್ಥಾಪಿಸಿ, ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಅಗ್ರಹಿಸಿತು. ಅಲ್ಲದೆ ಅಮರನಾಥ ಯಾತ್ರಿಕರ ಮೇಲೆ ಆಕ್ರಮಣ ನಡೆಸಿದ ಉಗ್ರರ ಮೇಲೆ ಕ್ರಮ ಕೈಗೊಳ್ಳಬೇಕು, ಬಂಗಾಳವು ಬಾಂಗ್ಲಾದೇಶವಾಗುವುದರ ಮುನ್ನ ಅಲ್ಲಿ ರಾಷ್ಟ್ರಪತಿ ಶಾಸನವನ್ನು ಅನ್ವಯಿಸುವ ಬಗ್ಗೆ, ಚೈನಾ ಡ್ರಾಗನ್ ಅನ್ನು ತಡೆಯಲು ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಮತ್ತು ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಸುಳ್ಳು ಆರೋಪ ಹೊರೆಸಿ 8 ವರ್ಷ ಕಾರಾಗೃಹದಲ್ಲಿಟ್ಟು ಅವರ ಮೇಲೆ ಭೀಕರ ಚಿತ್ರಹಿಂಸೆ ನೀಡಿದ ಪೋಲೀಸ್ ಅಧಿಕಾರಿಗಳ ಹಾಗೂ ಷಡ್ಯಂತ್ರ ರಚಿಸಿದ ಆಡಳಿತಗಾರರ ಮೇಲೆ ಕಾರ್ಯಚರಣೆ ಮಾಡಬೇಕು  ಹಾಗೂ ಇತ್ಯಾದಿ ಬೇಡಿಕೆಯನ್ನು ಬೆಳ್ತಂಗಡಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಹಿಂದೂ ಜನಹಜಾಗೃತಿ ಸಮಿತಿ ಮನವಿ ಸಲ್ಲಿಸಿತು.

ವಿಶ್ವಹಿಂದೂ ಪರಿಷತ್ ಬೆಳಂಗಡಿ ನಗರ ಅಧ್ಯಕ್ಷ ಮೋಹನ್ ಕೆ., ಕಾರ್ಯದರ್ಶಿ ಪ್ರೇಮಚಂದ್ರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀನಿವಾಸ ರಾವ್, ಹರೀಶ್, ಸನಾತನ ಸಂಸ್ಥೆ ಆನಂದಗೌಡ, ಕರುಣಾಕರ ಅಭ್ಯಂಕರ್ ಮೊದಲಾದವರು ಇದ್ದರು.

See also  ಕುಕ್ಕೆ ದೇವಸ್ಥಾನ: ಇಂದಿನಿಂದ ವಿವಿಧ ಸೇವೆಗಳು ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು