News Kannada
Tuesday, December 06 2022

ಕರಾವಳಿ

ಕಳವು ಪ್ರಕರಣ: ಮೂವರ ಬಂಧನ

Photo Credit :

ಕಳವು ಪ್ರಕರಣ: ಮೂವರ ಬಂಧನ

ಕಾಸರಗೋಡು: ಮಂಜೇಶ್ವರ, ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮೂವರನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಜೇಶ್ವರ ಕುಂಡುಕೊಳಯ ಮುಹಮ್ಮದ್ ಹಮ್ಮದ್ ಶಿಹಾಬ್(೨೫), ಮಂಗಳೂರು ಮಂಜನಾಡಿಯ ಮುದಶಿರ್ ಅಲಿ ಯಾನೆ ಮುದ (೨೬), ಅನ್ಸಾಫ್ (೨೦) ಎಂದು ಗುರುತಿಸಲಾಗಿದೆ.

ಇವರಿಂದ ಒಂದು ಮೊಬೈಲ್, ಒಂದು ವಾಚ್ ವಶಪಡಿಸಿಕೊಳ್ಳಲಾಗಿದೆ. ಕುಂಬಳೆ ಕಟ್ಟತ್ತಡ್ಕ ಹಾಗೂ ಮಂಡೆಕಾಪುನಲ್ಲಿ ನಡೆದ ಮನೆ ಗೆ ನುಗ್ಗಿ ಕಳ್ಳತನ ನಡೆಸಿದ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.

ಕಟ್ಟತ್ತಡ್ಕ ಮಹಮ್ಮದ್ ನಗರದಲ್ಲಿ ಅಬ್ದುಲ್ಲ ಕುಂಞಿ ಎಂಬವರ ಮನೆಯಿಂದ ಜುಲೈ ೨ರಂದು ಕಳವು ಮಾಡಲಾಗಿತ್ತು. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ೧೫ ಪವನ್ ಚಿನ್ನಾಭರಣ, ೨ ಮೊಬೈಲ್ ಫೋನ್, ಒಂದು ವಾಚ್ ನ್ನು ಕಳವು ಮಾಡಿದ್ದರು.

ಜುಲೈ ೨೩ರಂದು ಮಂಡೆಕಾಪುವಿನ ಅಬ್ದುಲ್ ರಹ್ಮಾನ್‌ರ ಮನೆಯಿಂದ ಹದಿನೆಂಟೂವರೆ ಪವನ್ ಚಿನ್ನಾಭರಣ, ೭,೫೦೦ ರೂ. ನಗದು ಕಳವು ನಡೆದಿತ್ತು. ಅಂದು ರಾತ್ರಿ ಮನೆಯ ಟೆರೇಸ್ ಮೇಲೇರಿದ ಕಳ್ಳರು ಆ ಮೂಲಕ ಒಳಗಿಳಿದು ಕಳ್ಳತನ ನಡೆಸಿದ್ದರು. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ತನಿಖೆ ನಡೆಸುತ್ತಿದ್ದರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

See also  ಎಸ್ ಎಸ್ ಎಲ್ ಸಿ ಮೌಲ್ಯಮಾಪಕರ ವಜಾಗೊಳಿಸಲು ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು