News Kannada
Friday, December 02 2022

ಕರಾವಳಿ

ಸುಳ್ಯ: ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

Photo Credit :

ಸುಳ್ಯ: ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಸುಳ್ಯ: ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕನನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಪಂಜ ಹೋಬಳಿಯ ಕಂದಾಯ ನಿರೀಕ್ಷಕ ಡಿ.ಟಿ.ದಯಾನಂದ ಬಂಧಿತ.

94ಸಿ ಯೋಜನೆಯಡಿಯಲ್ಲಿ ಹಕ್ಕು ಪತ್ರ ನೀಡುವುದಕ್ಕೆ ಸಂಬಂಧಪಟ್ಟು ಎಂಟು ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಕಂದಾಯ ನಿರೀಕ್ಷಕನನ್ನು ಬಂಧಿಸಿದ್ದಾರೆ. ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹರೀಶ್ ಕುಮಾರ್ ಎಂಬವರ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ತಂಡ ಸೋಮವಾರ ಸಂಜೆ ಸುಳ್ಯದಲ್ಲಿ ಹರೀಶ್ ಕುಮಾರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಂದಾಯ ನಿರೀಕ್ಷಕನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. 94ಸಿ ಯೋಜನೆಯಡಿಯಲ್ಲಿ ಹರೀಶ್ ಕುಮಾರ್ ಅವರ ಪತ್ನಿ ಸವಿತ ಎಂಬವರ ಹೆಸರಿನಲ್ಲಿ ಒಂಭತ್ತು ಸೆಂಟ್ಸ್ ಭೂಮಿ ಮಂಜೂರು ಮಾಡಲು ಅರ್ಜಿ ಸಲ್ಲಿಸಲಾಗಿತ್ತು. ಭೂಮಿ ಮಂಜೂರು ಮಾಡಲು ಆರಂಭದಲ್ಲಿ 15 ಸಾವಿರ ರೂ ಬೇಡಿಕೆಯಿಡಲಾಗಿದ್ದು ಬಳಿಕ ಎಂಟು ಸಾವಿರ ರೂ ನೀಡುವಂತೆ ಪಟ್ಟು ಹಿಡಿದಿದ್ದ. ಅದರಂತೆ ಸೋಮವಾರ ಸಂಜೆ ಸುಳ್ಯ ನಗರದ ಶ್ರೀರಾಮ ಪೇಟೆಯಲ್ಲಿ ಕಾರಿನಲ್ಲಿ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ತಂಡ ಕಾರನ್ನು ಸುತ್ತಿವರಿದು ದಯಾನಂದರನ್ನು ನಗದು ಸಮೇತ ಬಂಧಿಸಿ ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ವಿಚಾರಣೆ ನಡೆಸಲಾಯಿತು ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸುಧೀರ್ ಹೆಗ್ಡೆ ತಿಳಿಸಿದ್ದಾರೆ.

ಹಣ ಪಡೆದುಕೊಳ್ಳುತ್ತಿದ್ದ ಕಾರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದ್ದು ಆರೋಪಿಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸುಧೀರ್ ಹೆಗ್ಡೆ   ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಸಿಬಿ ಮಂಗಳೂರು ಘಟಕದ ಎಸ್ಪಿ ಶ್ರುತಿ ಎನ್.ಎಸ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್, ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ ಡಿ.ಎ., ಉಮೇಶ್, ರಾಧಾಕೃಷ್ಣ.ಕೆ, ಪ್ರಶಾಂತ್, ವೈಶಾಲಿ, ರಾಕೇಶ್, ಗಣೇಶ್ ಭಾಗವಹಿಸಿದ್ದರು.

 94ಸಿ ಲಂಚದ ಕೂಪ: 94ಸಿ ಯೋಜನೆಯಡಿಯಲ್ಲಿ ಬಡವರಿಗೆ ಹಕ್ಕುಪತ್ರ ನೀಡುವುದಕ್ಕೆ ವ್ಯಾಪಕವಾಗಿ ಲಂಚ ಸ್ವೀಕರಿಸಲಾಗುತ್ತಿದೆ ಎಂಬ ಆರೋಪ ಸಾಕಷ್ಟು ಹಿಂದೆಯೇ ಕೇಳಿ ಬಂದಿತ್ತು. ಸುಳ್ಯ ತಾಲೂಕಿನಲ್ಲಿ ನಡೆದ ಹಲವು ಸಭೆಗಳಲ್ಲಿ ಈ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬಂದಿತ್ತು. ಇದೀಗ ಅಧಿಕಾರಿಯೊಬ್ಬ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಮೂಲಕ 94ಸಿ ಲಂಚದ ಕೂಪವಾಗುತಿದೆ ಎಂಬ ಆಕ್ರೋಶವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. 94ಸಿ ಯೋಜನೆಯ ಮಂಜೂರಾತಿಗೆ ಇತರ ಕೆಲವು ಅಧಿಕಾರಿಗಳಿಗೂ ಲಂಚ ನೀಡಬೇಕಾಗಿದೆ ಎಂಬ ಬೇಡಿಕೆ ಬಂದಿರುವ ಮಾಹಿತಿಯನ್ನು ದೂರುದಾರರು ತಮಗೆ ನೀಡಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

 

See also  ಮಕ್ಕಳ ವಿಭಿನ್ನ ಪ್ರತಿಭೆಗೆ ವೇದಿಕೆಯಾದ ಕಲ್ಲಡ್ಕ ಶ್ರೀರಾಮ ಶಾಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು