News Kannada
Tuesday, November 29 2022

ಕರಾವಳಿ

ಹದಿನಾರರ ಬಾಲಕಿ ಮೇಲೆ ಅತ್ಯಾಚಾರ: ಬಂಧನ - 1 min read

Photo Credit :

ಹದಿನಾರರ ಬಾಲಕಿ ಮೇಲೆ ಅತ್ಯಾಚಾರ: ಬಂಧನ

ಕಾಸರಗೋಡು: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬದಿಯಡ್ಕ ನಿವಾಸಿಯೋರ್ವನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬದಿಯಡ್ಕ ಚುಳ್ಳಿಕ್ಕಾನದ ಸಿ.ಎಚ್ ಬಶೀರ್ (29) ಎಂದು ಗುರುತಿಸಲಾಗಿದೆ.

ಪೊಯಿನಾಚಿಯ ಹದಿನಾರರ ಬಾಲಕಿ ಮೇಲೆ ಹಲವು ಸ್ಥಳಗಳಿಗೆ ಕೊಂಡೊಯ್ದು ಅತ್ಯಾಚಾರ ನಡೆಸಿದ್ದು, ವಿವಾಹಿತನಾಗಿರುವ ಈತ ಬಾಲಕಿಗೆ ವಿವಾಹ ಭರವಸೆ ನೀಡಿ ಅತ್ಯಾಚಾರ ನಡೆಸಿರುವುದಾಗಿ ದೂರು ನೀಡಲಾಗಿತ್ತು.

ಚುಳ್ಳಿಕ್ಕಾನದ ನಿರ್ಜನ ಪ್ರದೇಶದಲ್ಲಿ ಹಾಗೂ ಮಣಿಯಂಪಾರೆಯ ಮನೆಯೊಂದರಲ್ಲಿ ಈತ ಕೃತ್ಯ ನಡೆಸಿದ್ದನು. ಬಾಲಕಿ ನಾಪತ್ತೆಯಾದುದರಿಂದ ತಾಯಿ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ತನಿಖೆ ನಡೆಸಿದಾಗ ಕಾರವಾರದಿಂದ ಬಾಲಕಿಯನ್ನು ಪತ್ತೆಹಚ್ಚಲಾಗಿತ್ತು.ಬಾಲಕಿಯಿಂದ ಮಾಹಿತಿ ಕಲೆ ಹಾಕಿದಾಗ ಅತ್ಯಾಚಾರ ಬೆಳಕಿಗೆ ಬಂದಿದೆ.

ಮಾರ್ಕೆಟಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಬದಿಯಡ್ಕದಲ್ಲಿ ವ್ಯಾಪಾರಿಯಾಗಿದ್ದ ಬಶೀರ್ ನ ಪರಿಚಯವಾಗಿ ಬಳಿಕ ವಿವಾಹ ಭರವಸೆ ನೀಡಿ ಕೃತ್ಯ ನಡೆಸಿರುವುದಾಗಿ ದೂರು ನೀಡಲಾಗಿದೆ.

See also  ಪ್ರಥಮ ದರ್ಜೆ ಸಹಾಯಕರ ಮನೆಗೆ ದಾಳಿ ಎಸಿಬಿ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು