News Kannada
Friday, September 30 2022

ಕರಾವಳಿ

ಕುಶಾಲನಗರ ಕೈಗಾರಿಕೋದ್ಯಮಿಗಳ ಸಹಕಾರ ಸಂಘಕ್ಕೆ ರಾಷ್ಟ್ರ ಪ್ರಶಸ್ತಿ - 1 min read

Photo Credit :

ಕುಶಾಲನಗರ ಕೈಗಾರಿಕೋದ್ಯಮಿಗಳ ಸಹಕಾರ ಸಂಘಕ್ಕೆ ರಾಷ್ಟ್ರ ಪ್ರಶಸ್ತಿ

ಮಡಿಕೇರಿ: ಪ್ರತಿವರ್ಷ ಸಹಕಾರ ಸಂಘಗಳ ಕಾರ್ಯನಿರ್ವಹಣೆಯನ್ನು ಗುರುತಿಸಿ ಗೌರವಿಸುತ್ತಿರುವ ದೆಹಲಿಯ ಫ್ರಾಂಟಿಯನ್ಸ್ ಇನ್ ಕೋ ಆಪರೇಟೀವ್ ಬ್ಯಾಂಕ್ ಮತ್ತು ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕಿಂಗ್ ಸಮಿತಿ ಈ ಬಾರಿ ಕುಶಾಲನಗರದ ಕೈಗಾರಿಕೋದ್ಯಮಿ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡಿದೆ.

ಉತ್ತಮ ಬ್ಯಾಂಕಿಂಗ್, ವಿವಿಧ ರೀತಿಯ ಸಾಲ ನೀಡುವಿಕೆ, ವಿವಿಧ ರೀತಿಯ ಠೇವಣಿಗಳಿಗೆ ಆಕರ್ಷಕ ಬಡ್ಡಿ, ಗ್ರಾಹಕರಿಗೆ ಉತ್ತಮ ಸೇವೆ, ಸಾಲ ಮರುಪಾವತಿ, ಮುಂದಿನ ಅಭಿವೃದ್ಧಿ ಯೋಜನೆ, ಸಾಲ ವಸೂಲಾತಿಯ ಉತ್ತಮ ಸಾಧನೆಯನ್ನು ಗುರುತಿಸಿ ರಾಜಸ್ಥಾನದ ಜೈಪುರದ ಮೇರಿಯಾಟ್ ಹೋಟೆಲ್ನಲ್ಲಿ ನಡೆದ ರಾಷ್ಟ್ರೀಯ ಕಾಯರ್ಾಗಾರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಗುಜರಾತಿನ ಸಹಕಾರ ಮಹಾಮಂಡಲದ ಸುಜಿಗಾರ ಮತ್ತು ವಿ.ಎಸ್. ದಾಸ್ ಅವರಿಂದ ಕುಶಾಲನಗರ ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣ ಕುಮಾರ್, ನಿದರ್ೆಶಕರಾದ ಎನ್. ಕೆ. ಮೋಹನ್ ಕುಮಾರ್, ಎಂ.ಎಂ. ಶಾಹಿಕ್, ಕೆ.ಎಸ್. ಮಹೇಶ್ ಪ್ರಶಸ್ತಿ ಸ್ವೀಕರಿಸಿದರು.

ಕಳೆದ ಬಾರಿಯೂ ಸಹ ಈ ಸಂಸ್ಥೆ ದೆಹಲಿ ಏರೋ ಸೇವೆಯಲ್ಲಿರುವ ಡ್ರೈಡ್ ಪ್ಲಾಜಾದಲ್ಲಿ ಆರ್.ಬಿ.ಐ. ಅಧಿಕಾರಿಗಳಾದ ಕೆ.ಎಸ್. ಮನೋಜ್ ಕುಮಾರ್ ಕುಶಾಲನಗರ ಸಂಘಕ್ಕೆ ಪ್ರಶಸ್ತಿ ನೀಡಿದ್ದನ್ನು ಮತ್ತು 2017-18 ನೇ ಸಾಲಿನಲ್ಲಿ ಅತೀ ಹೆಚ್ಚು ಛಾಪಾಕಾಗದ ಮಾರಾಟಕ್ಕಾಗಿ ಕನರ್ಾಟಕ ಸಹಕಾರ ಮಹಾಮಂಡಳ ಇತ್ತೀಚಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. 

See also  ಹಿಂದೂ ನಾಯಕರ  ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು