News Kannada
Monday, October 03 2022

ಕರಾವಳಿ

ಸೆ.12, ಗೌರಿಲಂಕೇಶ್ ಹತ್ಯೆ ಖಂಡಿಸಿ ಬೃಹತ್ ಸಮಾವೇಶ - 1 min read

Photo Credit :

ಸೆ.12, ಗೌರಿಲಂಕೇಶ್ ಹತ್ಯೆ ಖಂಡಿಸಿ ಬೃಹತ್ ಸಮಾವೇಶ

ಹಾಸನ: ಹೋರಾಟಗಾರ್ತಿ ಹಾಗು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಗೌರಿಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯ ವತಿಯಿಂದ ಸೆಪ್ಟೆಂಬರ್ 12 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಭಾನು ಮುಸ್ತಾಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿ ಮತು ಸೌಹಾರ್ದತೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದ ಗೌರಿಯ ವಿಚಾರಗಳನ್ನು, ಜೀವಪರವಾದ ನಿಲುವನ್ನು ವಿಚಾರದ ಮೂಲಕ ಎದುರಿಸಲಾಗದ ಶಕ್ತಿಗಳು ಬಂದೂಕಿನ ಮೊರೆ ಹೋಗಿರುವುದು ಅವರ ಹೇಡಿತನದ ಮತ್ತು ಸೋಲಿನ ಲಕ್ಷಣವಾಗಿದೆ.

ತಲೆಗೆ ಗುಂಡಿಟ್ಟರೆ ವಿಚಾರವನ್ನು ಮತ್ತು ಎದೆಗೆ ಗುಂಡಿಟ್ಟರೆ ಹೃದಯವಂತಿಕೆಯನ್ನು ಕೊಲ್ಲಬಹುದು ಎಂದು ಹಂತಕರು ಯೋಚಿಸಿದ್ದಾರೆ. ಅದು ಅವರ ಮೂರ್ಖತನ ಹಾಗೂ ಹತಾಶೆ. ಮಾತನಾಡುವ ನಾಲಿಗೆಗೆ ಮತ್ತು ವಿಚಾರ ಮಾಡುವ ಮೆದುಳಿಗೆ ಉರುಳು ಹಾಕುವ ಪ್ರವೃತ್ತಿ ಹಿಂದಿನಿಂದಲೂ ಸಾಗಿಬಂದಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ. ಗೌರಿ ಹತ್ಯೆಯಿಂದ ರಾಜ್ಯದಲ್ಲಿ ಬೃಹತ್ತಾದ ನಿರ್ವಾತ ಏರ್ಪಟ್ಟಿದೆ. ರಾಜಧಾನಿಯ ಹೃದಯ ಭಾಗದಲ್ಲಿ ನಡೆದಿರುವ ಈ ಕೊಲೆಯ ಬಗ್ಗೆ ಸೂಕ್ತ ತನಿಖೆಯಾಗಲೇ ಬೇಕಾಗಿದೆ. ಇದೇ ಸಂದರ್ಭದಲ್ಲಿ ತನಿಖೆಯ ದಿಕ್ಕುತಪ್ಪಿಸುವ ಸಲುವಾಗಿ ಅನೇಕ ನೆಪಗಳನ್ನು ಕೆಲವರು ಹಾಗೂ ಮಾಧ್ಯಮಗಳು ಹರಡುತ್ತಿವೆ. ಇದು ಆರೋಗ್ಯಕರವಾದ ಬೆಳವಣಿಗೆಯಲ್ಲಿ ತನಿಖಾ ತಂಡವು ಯಾವುದೇ ಇಸಂಗಳಿಗೆ ಜೋತು ಬೀಳದೆ, ತಮ್ಮದೇ ಆದ ದೃಷ್ಠಿಯಲ್ಲಿ ತನಿಖೆ ಮಾಡಿ ವರದಿ ನೀಡಲಿ. ಇದಕ್ಕೆ ಯಾವುದೇ ಕಾಲಮಿತಿಯನ್ನು ಹೇರಬಾರದು ಎಂದು ತಿಳಿಸಿದರು.

ಸಾಹಿತಿ ರೂಪಹಾಸನ್ ಮಾತನಾಡಿ ಇತ್ತೀಚೆಗೆ ಯುವಜನತೆಯಲ್ಲಿ ಪ್ರತಿಕಾರದ ಮನೋಭಾವನೆ ಮೂಡುತ್ತಿದೆ. ಇದು ಒಳ್ಳೆಯ ಲಕ್ಷಣವಲ್ಲ. ಗೌರಿ ಹತ್ಯೆಯು ಸಂವಿಧಾನದ ಆಶಯಗಳ ಹತ್ಯೆಯಾದಂತೆ. ಸಕರ್ಾರವು ಪ್ರಗತಿಪರರಿಗೆ ರಕ್ಷಣೆಕೊಡಬೇಕು ಎಂದು ಆಗ್ರಹಿಸಿದರು.
ಕೋಮುವಾದ ಮತ್ತು ಮೂಲಭೂತವಾದವು ಫ್ಯಾಸಿಸಂನ ಲಕ್ಷಣವಾಗಿದೆ. ಇದನ್ನು ಹೀಗೆಯೇ ಬಿಟ್ಟರೆ ಭವಿಷ್ಯದಲ್ಲಿ ಬೆಳಕನ್ನೆ ಕಸಿಯುತ್ತದೆ. ದೇಶಕ್ಕೆ ಭವಿಷ್ಯವೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಎಸ್ಐಟಿ ಮೂಲಕ ನಡೆಯುತ್ತಿರುವ ತನಿಖೆಯನ್ನು ತೀವ್ರಗೊಳಿಸಬೇಕು. ಅತ್ಯಂತ ಶೀಘ್ರವಾಗಿ ಹಂತಕರನ್ನು ಹಾಗೂ ಹತ್ಯೆಯ ಹಿಂದಿನ ಶಕ್ತಿಗಳನ್ನು ಪತ್ತೆಮಾಡಬೇಕು.

ಕಲ್ಬುರ್ಗಿ ಹತ್ಯೆಯ ತನಿಖೆಯನ್ನು ತೀವ್ರಗೊಳಿಸಬೇಕು. ಈ ಹತ್ಯಾಸಂಸ್ಕೃತಿ ಮತ್ತು ಅಸಹಿಷ್ಣುತೆಗೆ ಕೊನೆಹಾಡುವಲ್ಲಿ ರಾಜ್ಯ ಸರ್ಕಾರವು ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿರೋಧ ಸಮಾವೇಶವನ್ನು ನಡೆಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡ ನಾರಾಯಣದಾಸ್, ರೈತಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಸಿಪಿಐ ಜಿಲ್ಲಾಧ್ಯಕ್ಷ ಧರ್ಮೇಶ್ ಉಪಸ್ಥಿತರಿದ್ದರು.

See also  ರಾಜ್ಯದಲ್ಲಿ ಧರ್ಮ ಒಡೆದ ಕಾಂಗ್ರೆಸ್ ಸರ್ಕಾರ: ಯೋಗಿ ಆದಿತ್ಯನಾಥ್ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು