News Kannada
Thursday, September 29 2022

ಕರಾವಳಿ

ಕುಂಬಳೆ ಕಡಲತೀರದಲ್ಲಿ ದಡ ಸೇರಿದ ಅಪರಿಚಿತ ಬೋಟ್ - 1 min read

Photo Credit :

ಕುಂಬಳೆ ಕಡಲತೀರದಲ್ಲಿ ದಡ ಸೇರಿದ ಅಪರಿಚಿತ ಬೋಟ್

ಕಾಸರಗೋಡು: ಕುಂಬಳೆ ಕಡಲತೀರದಲ್ಲಿ ಎರಡು ಎಂಜಿನ್ ಅಳವಡಿಸಿರುವ ಅಪರಿಚಿತ ಬೋಟ್ ದಡ ಸೇರಿದೆ.

ಬೋಟ್ ಹಾನಿಗೊಳಗಾಗಿದೆ. ಮಾಹಿತಿ ತಿಳಿದು ಕುಂಬಳೆ ಕರಾವಳಿ ಪೊಲೀಸರು ಸ್ಥಳಕ್ಕಾಗಮಿಸಿ ಬೋಟ್ ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬೋಟ್ ನ ಒಂದು ಭಾಗ ಹಾನಿಗೊಳಗಾದ ಸ್ಥಿತಿಯಲ್ಲಿದೆ. ಅಜಿಮಾನ್ ಎಂದು ಇಂಗ್ಲೀಷ್ ನಲ್ಲಿ ಬರೆಯಲಾಗಿದ್ದು, ಬೇರೆ ಯಾವುದೇ ಮಾಹಿತಿ ಬೋಟ್ ನಲ್ಲಿಲ್ಲ. ಆಳ ಸಮುದ್ರದಿಂದ ದಡ ಸೇರಿದೆ. ದುರಂತಕ್ಕೀಡಾಗಿ ಬಂದಿರಬಹುದು ಎಂದು ಶಂಕಿಸಲಾಗಿದ್ದು, ಆದರೆ ಈ ಬಗ್ಗೆ ಯಾವುದೇ ಮಾಹಿತಿ ಕರಾವಳಿ ಪೊಲೀಸರಿಗೆ ಲಭಿಸಿಲ್ಲ. 

ಸಾಮಾನ್ಯವಾಗಿ ಮೀನುಗಾರಿಕಾ ಬೋಟ್ ನಲ್ಲಿ ಸ್ಪಷ್ಟ ಮಾಹಿತಿ ಬರೆದಿರುತ್ತಿದೆ. ಮಾತ್ರವಲ್ಲ ಬೋಟ್ ಅವಘಡಕ್ಕೆ ಸಿಲುಕಿದರೆ ಈ ಬಗ್ಗೆ ಮಾಹಿತಿ ಕರಾವಳಿ ಪೊಲೀಸರಿಗೆ ರವಾನೆಯಾಗುತ್ತಿದೆ. ಆದರೆ ಬೋಟ್ ನಲ್ಲಿ ಯಾವುದೇ ಮಾಹಿತಿ , ವಿಳಾಸ , ದೂರವಾಣಿ ಸಂಖ್ಯೆ ನಮೂದಿಸದಿರುವುದು ಸಂಶಯಕ್ಕೆ ಕಾರಣವಾಗಿದ್ದು, ಇದರಿಂದ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ .

See also  ಧಾರಾಕಾರ ಮಳೆ: ದಕ್ಷಿಣ ಕನ್ನಡ ಸೇರಿದಂತೆ 7 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು