News Kannada
Monday, September 26 2022

ಕರಾವಳಿ

ಕಾರ್ಕಳ: ಅನ್ಯಧರ್ಮಿಯ ವಿದ್ಯಾರ್ಥಿನಿಯೊಂದಿಗೆ ಚೆಲ್ಲಾಟ, ಕಾಮುಕನಿಗೆ ಬಿತ್ತು ಗೂಸಾ… - 1 min read

Photo Credit :

ಕಾರ್ಕಳ: ಅನ್ಯಧರ್ಮಿಯ ವಿದ್ಯಾರ್ಥಿನಿಯೊಂದಿಗೆ ಚೆಲ್ಲಾಟ, ಕಾಮುಕನಿಗೆ ಬಿತ್ತು ಗೂಸಾ…

ಕಾರ್ಕಳ: ಖಾಸಗಿ ಕಾಲೇಜುವೊಂದರರಲ್ಲಿ ವ್ಯಾಸಂಗಕ್ಕೆಂದು ಮೂಡಬಿದ್ರಿಯಿಂದ ಕಾರ್ಕಳಕ್ಕೆ ಬರುತ್ತಿದ್ದ ಅನ್ಯಧರ್ಮೀಯ ವಿದ್ಯಾರ್ಥಿನಿಯೊಬ್ಬಳಿಗೆ ಮಂಕುಬೂದಿ ಎರಚಿದ ಯುವಕನೊಬ್ಬ ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ  ಕಾಮತೃಷೆಯಲ್ಲಿ ತಲ್ಲೀನನಾಗಿದ್ದ.

ಈ ಸಂದರ್ಭದಲ್ಲಿ ಸಮಯ ಪ್ರಜ್ಞೆ ತೋರಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕೆಯನ್ನು ರಕ್ಷಿಸಿ ಆರೋಪಿಯನ್ನು ನಗರ ಠಾಣಾ ಪೊಳೀಸರಿಗೆ ಒಪ್ಪಿಸಿದರು. ಈ ಘಟನೆ ಸಾಯಿಬಾಬಾ ಮಂದಿರ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. 

ಜರಿಗುಡ್ಡೆಯ ಅಫನ್ ಎಂಬಾತ ಪ್ರಕರಣದ ಆರೋಪಿತನಾಗಿದ್ದಾನೆ. ವೃತ್ತಿಯಲ್ಲಿ ಟಿಪ್ಪರ್ ಚಾಲಕನಾಗಿದ್ದು,  ಅನ್ಯಧರ್ಮೀಯ ವಿದ್ಯಾರ್ಥಿನಿಗಳನ್ನೇ ಗುರಿಯಾಗಿರಿಸಿ ಜೀವನದೊಂದಿಗೆ ಚೆಲ್ಲಾಟವಾಡುವ ವಾಚಾಳಿ ಆತನದಾಗಿತ್ತೆಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತದೆ.ಕಳೆದ ಕೆಲ ದಿನಗಳಿಂದ ತನ್ನದೇ ಬೈಕ್ ನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಬಸ್ನಿ ನಿಲ್ದಾಣದಿಂದ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದನು. ತರಗತಿ ಮುಗಿದ ಬಳಿಕ ಅಲ್ಲಿಂದ ಬಸ್ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದ  ವಿಚಾರವನ್ನು ಹಿಂದು ಸಂಘಟನೆಯ ಕಾರ್ಯಕರ್ತರು  ಮಾಹಿತಿಯನ್ನು ಪಡೆದಿದ್ದಾರೆ.  

ಮಹಾಲಯ ಅಮವಾಸೆಯ ದಿನವಾದುದರಿಂದ ಮಂಗಳವಾರ ಸರಕಾರಿ ರಜೆ ಘೋಷಣೆ ಮಾಡಿತ್ತಾದರೂ “ವಿಶೇಷ ತರಗತಿ” ಇದೆ ಎಂದು ಹೇಳಿ ಮನೆಯಿಂದ ಕಾರ್ಕಳಕ್ಕೆ ಬಂದಿದ್ದ ಆಕೆ ಅಫನ್ನ ಗಾಳಕ್ಕೆ ಸಿಲುಕಿದ್ದಾಳೆನ್ನಲಾಗಿದೆ.ಆಫನ್ ತನ್ನ ಬೈಕ್ ನಲ್ಲಿ ಆಕೆಯನ್ನು ಕುಳಿರಿಸಿ ಶಿರಡಿ ಸಾಯಿಬಾಬ ಮಂದಿರ ರಸ್ತೆಯಾಗಿ ಕರೆದುಕೊಂಡು ಹೋಗುತ್ತಿದ್ದುದನ್ನು ಗಮನಿಸಿದ ಹಿಂದು ಸಂಘಟನೆಯ ಕಾರ್ಯಕರ್ತರು ಅದರ ಬಗ್ಗೆ ಕಣ್ಣಿಟ್ಟಿದ್ದರು. ಹಾಡಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ಚೆಲ್ಲಾಟವಾಡುತ್ತಿದ್ದ ದೃಶದ್ಯಾವಳಿ ಕಂಡು ಕುಪಿತಗೊಂಡ ಕಾರ್ಯಕರ್ತರು ಆಫನ್ ನನ್ನು ಚೆನ್ನಾಗಿ ಥಳಿಸಿದರೆನ್ನಲಾಗಿದೆ.  ಘಟನಾ ಸ್ಥಳಕ್ಕೆ ಅಗಮಿಸಿದ ಪೊಲೀಸರಿಗೆ ವಿದ್ಯಾರ್ಥಿನಿ ಸಹಿತ ಆರೋಪಿಯನ್ನು ಒಪ್ಪಿಸಿದ್ದಾರೆ. 

ಒಂದು ತಿಂಗಳ ಅವಧಿಯಲ್ಲಿ ಮೂರನೇ ಪ್ರಕರಣ: ಒಂದು ತಿಂಗಳಿನ ಅವಧಿಯಲ್ಲಿ ಮೂರು ಪ್ರಕರಣವನ್ನು ಪತ್ತೆ ಹಚ್ಚಿದ ಹಿಂದು ಸಂಘಟನೆಯ ಕಾರ್ಯಕರ್ತರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಲಾಡ್ಜ್ ವೊಂದಕ್ಕೆ ಯುವತಿಯೊಬ್ಬಳನ್ನು ಕರೆದುಕೊಂಡು ಹೋದ ಪ್ರಕರಣ ಸೇರಿದಂತೆ, ಖಾಸಗಿ ಬಸ್ ನಿರ್ವಾಹಕನೊಬ್ಬ ಬಾಳೆಹೊನ್ನೂರಿನಿಂದ ಕಾರ್ಕಳ ಕಡೆಗೆ ಯುವತಿಯೊಬ್ಬಳನ್ನು ಕರೆದುಕೊಂಡು ಬಂದಿರುವುದು, ವಿದ್ಯಾರ್ಥಿನಿಯೊಬ್ಬಳನ್ನು ಹಾಡಿಯಲ್ಲಿ ಬದುಕಿನೊಂದಿಗೆ ಚೆಲ್ಲಾಟವಾಡಿರುವ ಸೇರಿದಂತೆ ಮೂರು ಪ್ರಕರಣಗಳು ಇದರಲ್ಲಿ ಒಳಗೊಂಡಿದೆ.

ಈ ನಡುವೆ ಸರಕಾರಿ ಹಾಸ್ಟೆಲ್ ನಲ್ಲಿ ನೆಲೆಸಿ ಖಾಸಗಿ ಶಾಲೆಯ ಒಂಭತ್ತನೇ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಜಾಲಕ್ಕೆ ಕುಣಿಕೆಗೆ ಸಿಲುಕಿಸಲು ಮುಂದಾಗಿದ್ದ ಯುವಕನೊಬ್ಬನಿಗೆ ಸೆಪ್ಪೆಂಬರ್ 15ರಂದು ಹಿಂದು ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗವಾಗಿ ಥಳಿಸಿರುವ ಘಟನಾವಳಿ ನಡೆದಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಯುವಕರು ಅನ್ಯಮತೀಯರೆಂಬುವುದು ಗಮನಾರ್ಹವಾಗಿದೆ.

 ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು: ಶಾಲಾ,ಕಾಲೇಜುಗಳ ವಿದ್ಯಾರ್ಥಿನಿಯರನ್ನೇ ಗುರಿಯಾಗಿರಿಸಿ ತನ್ನ ಕಾಮದಾಹ ತೀರಿಸಿಕೊಳ್ಳುವ ವ್ಯವಸ್ಥಿತ ಜಾಲವೊಂದು ಸಕ್ರಿಯಾಗೊಂಡಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಲವ್ ಜಿಹಾದ್ ಮಟ್ಟ ಹಾಕಲು ಬಜರಂಗ ದಳ ಕಟ್ಟಿಬದ್ಧ: ದೇಶದ ಉದ್ದಗಲದಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಕಾರ್ಕಳದಲ್ಲೂ ತಲೆ ಎತ್ತಿದೆ. ಪೊಲೀಸ್ ಇಲಾಖೆ ಇದರ ಬಗ್ಗೆ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕು.  ಹೆತ್ತವರು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಿ ಸಮಾಜಕ್ಕೆ ಮಾದರಿಯಾಗಬೇಕು. ಲವ್ ಜಿಹಾದ್ ಮಟ್ಟ ಹಾಕಲು  ಬಜರಂಗದಳ ಕಟ್ಟಿಬದ್ಧವಾಗಿದೆ.

See also  ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಲು ಯತ್ನಿಸಿದ ಯುವಕರ ಬಂಧನ

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು