News Kannada
Tuesday, September 27 2022

ಕರಾವಳಿ

ಯಕ್ಷಗಾನದಲ್ಲಿ ಚುಂಬನ ಪ್ರಕರಣ: ಮತ್ತೆ ಯಕ್ಷ ರಂಗಕ್ಕೆ ವಾಪಸ್ಸಾದ ಕಲಾವಿದರು - 1 min read

Photo Credit :

ಯಕ್ಷಗಾನದಲ್ಲಿ ಚುಂಬನ ಪ್ರಕರಣ: ಮತ್ತೆ ಯಕ್ಷ ರಂಗಕ್ಕೆ ವಾಪಸ್ಸಾದ ಕಲಾವಿದರು

ಮಂಗಳೂರು: ಯಕ್ಷಗಾನದಲ್ಲಿ ತುಟಿಗೆ ತುಟಿ ಬೆಸೆವ ದೃಶ್ಯದಲ್ಲಿ ಕಾಣಿಸಿಕೊಂಡು, ಕಲೆಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದ ಕಲಾವಿದರಾದ ರಾಕೇಶ್ ರೈ ಅಡ್ಕ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಬೇಸತ್ತು ಯಕ್ಷ ರಂಗದಿಂದಲೇ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದರು.

ಇದೀಗ ಈ ಕಲಾವಿದರು ಹಿರಿಯರ ಮಾರ್ಗದರ್ಶನದಂತೆ, ಯಕ್ಷಾಭಿಮಾನಿಗಳು ಹಾಗೂ ಹಿತೈಷಿಗಳ ಅಗ್ರಹದಂತೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಭಾಗವತ ಸತೀಶ್ ಶೆಟ್ಟಿ ಪಟ್ಲ, ಈ ಇಬ್ಬರು ಕಲಾವಿದರು ಮನನೊಂದು ಯಕ್ಷಗಾನದಿಂದ ವಿದಾಯ ಹೇಳುವ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ಹಿರಿಯರ ಮಾರ್ಗದರ್ಶನದಂತೆ ಇದೀಗ ಮತ್ತೆ ಯಕ್ಷಗಾನ ರಂಗದಲ್ಲಿ ಮುಂದುವರೆಯಲು ನಿರ್ಧಾರಿಸಿದ್ದಾರೆ. ನಿಜವಾಗಿಯೂ ಅಲ್ಲಿ ನಡೆದ ಘಟನೆಯೇ ಬೇರೆ. ಈ ಕುರಿತು ಅಪಪ್ರಚಾರ ಮಾಡಲಾಗಿದೆ. ಇಂದು ಮಾಧ್ಯಮಗಳಲ್ಲಿ ಯಕ್ಷಗಾನದ ನಂಟೆ ಇಲ್ಲದವರು ಈ ಕುರಿತು ವಿಮರ್ಶೆ ಮಾಡುತ್ತಿರುವುದು ಬೇಸರದ ಸಂಗತಿಯೇ ಸರಿ ಎಂದರು.

ಯಕ್ಷಗಾನ ನಿಂತ ನೀರಾಗಬಾರದು, ಇಲ್ಲಿಯೂ ಬೇರೆ ರಂಗದಂತೆ ಬದಲಾವಣೆ ಆಗಬೇಕಾಗಿದೆ. ಇದಕ್ಕೆ ಕಲಾವಿದರ ಒಮ್ಮತ ಬೇಕು ಎಂದರು.

ಕಲಾವಿದರಾದ ರಾಕೇಶ್ ರೈ ಅಡ್ಕ ಮತ್ತು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮಾತನಾಡಿ, ನಾವು ಪ್ರದರ್ಶಿಸಿದ ನಾಟ್ಯ ವೈಭವ ಕಾರ್ಯಕ್ರಮದಲ್ಲಿ ನಡೆದ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪೆಂದು ಬಿಂಬಿಸಿ, ಮನಸ್ಸಿಗೆ ನೋವಾಗುವಷ್ಟು ಚರ್ಚೆಗಳು ನಡೆದವು. ಈ ಕುರಿತು ಅಂದು ನಡೆದ ಘಟನೆಯ ಬಗ್ಗೆ ವಿವರವಾಗಿ ತಿಳಿಸಿ, ನಾವು ತಪ್ಪು ಮಾಡಲಿಲ್ಲ ಎಂದು ಹೇಳಿದ್ದೇವು. ಒಂದು ವೇಳೆ ನೋಡುಗರ ಕಣ್ಣಿಗೆ ತಪ್ಪಾಗಿ ಕಂಡರೆ ಅದಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದರು.

ಹಿರಿಯ ಭಾಗವತ ದಿವಾನ್ ಶಿವಶಂಕರ್ ಭಟ್ ಇದ್ದರು.

See also  ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು