News Kannada
Saturday, October 08 2022

ಕರಾವಳಿ

ಅಮಾಯಕನ ಮೇಲೆ ದರ್ಪ ತೋರಿಸಿದ ಬೆಳ್ತಂಗಡಿ ಅರಣ್ಯಾಧಿಕಾರಿಯ ಎತ್ತಂಗಡಿ - 1 min read

Photo Credit :

ಅಮಾಯಕನ ಮೇಲೆ ದರ್ಪ ತೋರಿಸಿದ ಬೆಳ್ತಂಗಡಿ ಅರಣ್ಯಾಧಿಕಾರಿಯ ಎತ್ತಂಗಡಿ

ಬೆಳ್ತಂಗಡಿ: ಪುದುವೆಟ್ಟಿನಲ್ಲಿ ಅಮಾನುಷವಾಗಿ ವರ್ತಿಸಿದ್ದ ಕೀರ್ತನ್ ಶೆಟ್ಟಿ ಎಂಬ ಅರಣ್ಯಾಧಿಕಾರಿಯವರನ್ನು ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ಮಂಗಳೂರು ಸಿಸಿಎಫ್ ಸಂಜೀವ ಬೇರೂ ಆದೇಶ ಹೊರಡಿಸಿದ್ದಾರೆ.

ಸೆ. 26 ರಂದು ಧರ್ಮಸ್ಥಳ ಅರಣ್ಯ ಇಲಾಖಾ ವಸತಿ ಗೃಹದಲ್ಲಿ ಪುದುವೆಟ್ಟು ಗ್ರಾಮದ ಕಮಲ್ ದಾಸ್ ಎಂಬ ಅಮಾಯಕನನ್ನು ಉಜಿರೆ ವಲಯದ ಉಪ ಅರಣ್ಯಾಧಿಕಾರಿ ಕೀರ್ತನ್ ಶೆಟ್ಟಿ ಎಂಬುವರು ದೌರ್ಜನ್ಯ ನಡೆಸಿದ್ದರು. ಗುಪ್ತಾಂಗಗಳಿಗೆ ಕ್ರೂರವಾಗಿ ಹಲ್ಲೆಗೊಳಗಾಗಿದ್ದ ಕಮಲ್ದಾಸ್ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೌರ್ಜನ್ಯದ ಬಗ್ಗೆ ತನಿಖೆಯಾಗಬೇಕು ಮತ್ತು ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಊರಿನವರು, ಕುಟುಂಬದವರು ಎಸ್ಎಫ್ ಸತೀಶ್ ಅವರಲ್ಲಿ ಮನವಿ ಮಾಡಿಕೊಂಡಿದ್ದರಲ್ಲದೆ ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

ಆದರೆ ಬಳಿಕ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅ. 3 ರಂದು ಅರಣ್ಯ ಇಲಾಖೆಯ ಗೇಟಿನ ಎದುರು ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಎಲ್ಲಾ ಪಕ್ಷ, ಜಾತಿ ಸಂಘಟನೆಗಳು ಪಾಲ್ಗೊಂಡಿದ್ದರು. ಶಾಸಕ ವಸಂತ ಬಂಗೇರ ಅವರು ಶನಿವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಇದೀಗ ತಾನು ಬಹಳ ಪ್ರಭಾವಿ ಎಂದು ಹೇಳಿಕೊಳ್ಳುತ್ತಿದ್ದ ಅಧಿಕಾರಿಯನ್ನು ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿರುವ ಮಣ್ಣಗುಡ್ಡೆಯಲ್ಲಿನ ಅರಣ್ಯ ಇಲಾಖೆಯ ಡಿಪೋಗೆ ತಾತ್ಕಾಲಿಕ ವರ್ಗಾವಣೆ ಮಾಡಲಾಗಿದೆ. ಕೊನೆಗೂ ತಾಲೂಕಿನ ಜನತೆ ನಿಟ್ಟುಸಿರುವ ಬಿಡುವಂತಾಗಿದೆ.

See also  ಗ್ರಾಹಕರ ನಕಲಿ ಎಟಿಎಂ ಬಳಸಿ 80 ಸಾವಿರ ರೂ ಪಂಗನಾಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು