News Kannada
Thursday, October 06 2022

ಕರಾವಳಿ

ಮುಸ್ಲಿಮರ ಮೇಲೆ ಹಿಂಸೆ ಸಹಿಸಲಾಗದು: ಮೌಲಾನ ಜಾಫರ್ ಸಾದಿಕ್ ಫೈಜಿ - 1 min read

Photo Credit :

ಮುಸ್ಲಿಮರ ಮೇಲೆ ಹಿಂಸೆ ಸಹಿಸಲಾಗದು: ಮೌಲಾನ ಜಾಫರ್ ಸಾದಿಕ್ ಫೈಜಿ

ಮಂಗಳೂರು: ಬಂಟ್ವಾಳ ಪೊಲೀಸರು ತನಿಖೆ ನೆಪದಲ್ಲಿ ಮನೆಗೆ ನುಗ್ಗಿ ಕುರಾನ್ ಗೆ ಅಪಮಾನ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಯುನೈಟೆಡ್ ಮುಸ್ಲಿಂ ಸಂಘಟನೆಯು ಪ್ರತಿಭಟನೆ ವೇಳೆ ಆರೋಪಿಸಿದೆ.

ಶುಕ್ರವಾರ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಯುನೈಟೆಡ್ ಮುಸ್ಲಿಂ ಸಂಘಟನೆಯು ಹಲವಾರು ಪ್ರಕರಣಗಳಲ್ಲಿ ತನಿಖೆಗೆ ವೇಗ ನೀಡಲು ಮತ್ತು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಇಮಾಮ್ ಕೌನ್ಸಿಲ್ ನ ರಾಜ್ಯ ಮುಖ್ಯ ಕಾರ್ಯದರ್ಶಿ ಮೌಲಾನ ಜಾಫರ್ ಸಾದಿಕ್ ಫೈಜಿ, ಹಲವಾರು ಕಾರಣಗಳಿಂದ ದಕ್ಷಿಣ ಕನ್ನಡದಲ್ಲಿ ಮುಸ್ಲಿಂ ಸಮುದಾಯದವರನ್ನು ಗುರಿ ಮಾಡಲಾಗುತ್ತಿದೆ. ಯಾವುದೇ ಕಾರಣವಿಲ್ಲದೆ ನಾವು ಸಂಶಯಕ್ಕೆ ಒಳಗಾಗುತ್ತೇವೆ. ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಸಂಪೂರ್ಣ ಸಮುದಾಯದ ಮೇಲೆ ಹೊರಿಸಲಾಗುತ್ತದೆ ಎಂದರು.

ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಗೆ ಹೋಗಿದ್ದ ಪೊಲೀಸರು ಕುರಾನ್ ಗೆ ಅಪಮಾನ ಮಾಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು ನಮ್ಮ ವಿರೋಧವಿಲ್ಲ. ಆದರೆ ತನಿಖೆ ನೆಪದಲ್ಲಿ ನಮ್ಮ ಸಮುದಾಯದ ಜನರ ಮೇಲೆ ಆಗುತ್ತಿರುವ ಹಿಂಸೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಕುರಾನ್ ನಮ್ಮ ಜೀವ. ಇದರ ಅಪಮಾನ ಸಹಿಸಲು ಸಾಧ್ಯವಿಲ್ಲ. ಕುರಾನ್ ಗಾಗಿ ನಾವು ಬಲಿ ನೀಡಲು ಸಿದ್ಧರಿದ್ದೇವೆ. ಕುರಾನ್ ಗೆ ಅಪಮಾನ ಮಾಡಿರುವ ಪೊಲೀಸರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ವಾಗತ ಭಾಷಣ ಮಾಡಿದ ಅಶ್ರಫ್ ಕಿನಾರ ಹೇಳಿದರು.

See also  ಗ್ರಾ.ಪಂ.ಗಳಲ್ಲಿ ಆರ್ ಟಿಸಿ ತ್ವರಿತ ನೀಡಲು ಡಿಸಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು