News Kannada
Sunday, September 25 2022

ಕರಾವಳಿ

ಪಟಾಕಿ ಬಹಿಷ್ಕರಿಸಿ ದೀಪಾವಳಿ ಆಚರಿಸಲು ವಿದ್ಯಾರ್ಥಿಗಳ ಪ್ರತಿಜ್ಞೆ - 1 min read

Photo Credit :

ಪಟಾಕಿ ಬಹಿಷ್ಕರಿಸಿ ದೀಪಾವಳಿ ಆಚರಿಸಲು ವಿದ್ಯಾರ್ಥಿಗಳ ಪ್ರತಿಜ್ಞೆ

ಪುತ್ತೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ, ಇಲ್ಲಿ ಪಟಾಕಿಗಳೇ ಪ್ರಧಾನವಲ್ಲ, ಹಾಗಾಗಿ ನಾವೆಲ್ಲರೂ ಪಟಾಕಿ ಹಾಗೂ ಸುಡುಮದ್ದನ್ನು ಬಹಿಷ್ಕರಿಸಿ ದೀಪಾವಳಿ ಆಚರಿಸುವುದಾಗಿ ಪುತ್ತೂರು ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಸಾಮೂಹಿಕ ಪ್ರತಿಜ್ಞೆ ಕೈಗೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆ ನೆಲ್ಲಿಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ಜೊತೆಯಾದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಪಟಾಕಿ ರಹಿತ ದೀಪಾವಳಿ ಆಚರಣೆಗೆ ಸಂಕಲ್ಪ ತೊಟ್ಟಿದ್ದು, ಪರಿಸರ ಪೀತಿಯ ಸಂದೇಶ ಪಸರಿಸಿದ್ದಾರೆ.

ನಾವು ಭಾರತೀಯರು, ಪ್ರಕೃತಿ ಪೂಜಕರು. ಹಸಿರಾದ ಗಿಡಮರಗಳು, ಪ್ರಾಣಿ, ಪಕ್ಷಿ ಸಂಕುಲಗಳು, ನದಿ ತೊರೆಗಳು, ಸಾಗರ ಸಮುದ್ರ, ಭೂ ಮಾತೆ, ಗೋಮಾತೆ ನಮ್ಮ ಸಂಪತ್ತು, ನಮ್ಮ ದೇವರು. ಇವುಗಳಿದ್ದರೆ ಮಾತ್ರ ಮನುಕುಲ. ಇದನ್ನು ಉಳಿಸಿ, ಬೆಳೆಸಿ ಮಾನವ ಜನಾಂಗ ನೆಮ್ಮದಿಯಿಂದ ಬಾಳಿ ಬದುಕಲು ನಮ್ಮ ಸಂಸ್ಕೃತಿಯಲ್ಲಿ ಹಬ್ಬಗಳು ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸುತ್ತವೆ. ಭಾರತದಾದ್ಯಂತ ಆಚರಿಸುವ ಹಬ್ಬಗಳ ರಾಜ ದೀಪಾವಳಿ ಹಬ್ಬ. ಕತ್ತಲಿನಿಂದ ಬೆಳಕಿನಕಡೆಗೆ ಅಜ್ಞಾನ ಎನ್ನುವ ಕತ್ತಲೆಯಿಂದ ಜ್ಞಾನ ಎನ್ನುವ ಬೆಳಕಿನ ಕಡೆಗೆ ಸಾಗುವ ಪ್ರೇರಣೆ, ಸಂದೇಶ ಕೊಡುವ ಹಬ್ಬ ದೀಪಾವಳಿ.

ದೀಪಾವಳಿ ಎಂದರೆ ದೀಪಗಳ ಸಾಲು. ಮಣ್ಣಿನ ಹಣತೆಯನ್ನು ಸಾಲಾಗಿ ಉರಿಸಿ ಪರಿಸರವನ್ನು ಶುದ್ಧಗೊಳಿಸುವ ಹಬ್ಬ. ನಮ್ಮ ಆಚರಣೆಯಲ್ಲಿ ಪರಿಸರ ಮಾಲಿನ್ಯಗೊಳಿಸಿ ಪಟಾಕಿ ಸಿಡಿಸಿ ಸಂಭ್ರಮಿಸುವ ಹಬ್ಬ ದೀಪಾವಳಿ ಎಂದು ಎಲ್ಲೂ ತಿಳಿಸಿಲ್ಲ. ಆದರೆ ಈಗಿನ ಜನಾಂಗ ದೀಪಾವಳಿ ಎಂದರೆ ಪಟಾಕಿಯ ಹಬ್ಬ ಎಂದೇ ಭ್ರಮಿಸಿದೆ. ಸಿಡಿಮದ್ದಿನಿಂದ ಅದೆಷ್ಟು ಜನರ ಪ್ರಾಣ ಹಾನಿ, ಪರಿಸರ ಮಾಲಿನ್ಯ, ಹಣ ವ್ಯಯ? ಕೆಟ್ಟ ನಂತರವೂ ಬುದ್ಧಿ ಬರದ ನಾವು ಬುದ್ಧಿಜೀವಿಗಳೇ? ಲಕ್ಷ್ಮಿಯನ್ನು ಸ್ವಾಗತಿಸಿ ಸ್ವಚ್ಛತೆಗೆ ಆದ್ಯತೆ ಕೊಟ್ಟು ಆಚರಿಸುವ ಹಬ್ಬದಂದು ವಿನಾಶಕಾರಿ ಮಾಲಿನ್ಯವೇ? ಲಕ್ಷ್ಮಿಯನ್ನು ದಬ್ಬುವುದೇ? ರೋಗ ರುಜಿನಗಳಿಗೆ ಆಹ್ವಾನವೇ? ನಮ್ಮ ಸಂಸ್ಕೃತಿಗೆ ಅಪಮಾನವೇ… ಎಂತಹ ವಿಪರ್ಯಾಸ ? ನಮ್ಮ ಮಾತಾಪಿತರು ಬೆವರು ಹರಿಸಿ ದುಡಿದು ತಂದ ಆ ಧನ ಲಕ್ಷ್ಮಿಯನ್ನು ಕಿಚ್ಚಿಟ್ಟು ಭಸ್ಮ ಮಾಡಿ ಹಬ್ಬ ಆಚರಿಸುವುದೆಂದರೆ ಇದು ಮಾತಾಪಿತರಿಗೆ ಕೊಡುವ ಗೌರವವೇ? ಎಂದು ಪಟಾಕಿ ಪ್ರಿಯರನ್ನು ಪ್ರಶ್ನಿಸುವ ಅಂಬಿಕಾದ ವಿದ್ಯಾರ್ಥಿಗಳಲ್ಲಿ ಸ್ವಚ್ಛಭಾರತ-ಸ್ವಸ್ಥ ಭಾರತ ಎನ್ನುವ ಕಾಳಜಿಯಿದೆ.

ದೀಪಾವಳಿ ಹಬ್ಬದ ಸಂಭ್ರಮದ ಹೆಸರಿನಲ್ಲಿ ಹಣವ್ಯಯ, ಪರಿಸರ ಮಾಲಿನ್ಯ, ದೃಷ್ಟಿದೋಷ, ಮೈಕೈಗೆ ಸುಟ್ಟ ಗಾಯಗಳಂತಹ ಆರೋಗ್ಯಕ್ಕೆ ಹಾನಿಗೊಳಗಾಗುವ ಘಟನೆಗಳು ಸರ್ವೇಸಾಮಾನ್ಯವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಇಡೀ ಕಾಲೇಜಿನ ಯುವ ಸಮೂಹ ಸಾಮೂಹಿಕ ಪ್ರತಿಜ್ಞೆ ಕೈಗೊಳ್ಳುವ ಮೂಲಕ ಮತ್ತಷ್ಟು ಯುವಮನಸ್ಸುಗಳಿಗೆ ಮಾದರಿಯಾಗಿದೆ. ಕಾಲೇಜಿನ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ವಿದ್ಯಾರ್ಥಿಗಳ ಹಂಬಲಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಏನು ಪ್ರತಿಜ್ಞೆ..?
ಪಾರಂಪರಿಕವಾಗಿ ಅರ್ಥಪೂರ್ಣವಾಗಿ ಉತ್ತಮ ಸಂದೇಶವನ್ನು ಸಾರುವ ದೀಪಾವಳಿ ಹಬ್ಬದ ಸಾರ್ಥಕತೆಯನ್ನು ಉಳಿಸುವ ಬೆಳೆಸುವ ಯುವ ಜನಾಂಗ ಹಾಗೂ ನಮ್ಮ ದೇಶವನ್ನು ಮಾಲಿನ್ಯ ರಹಿತ ದುಂದುವೆಚ್ಚ ರಹಿತ ಸ್ವಸ್ಥ ಸಮಾಜವನ್ನು ನಿರ್ಮಿಸುವ ನಿಟ್ಟಿನಿಂದ ಪಟಾಕಿ ಸಿಡಿಸದೆ ಪರಿಸರವನ್ನು ಕಲುಷಿತಗೊಳಿಸದೆ ದೀಪಾವಳಿ ಹಬ್ಬ ಆಚರಿಸಿ ಪುತ್ತೂರಿನ ಅಷ್ಟೇ ಅಲ್ಲದೆ ದೇಶದ ಜನತೆಗೆ ಮಾದರಿಯಾಗುತ್ತೇವೆ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು.

See also  ಕಲಿಕೆಯಲ್ಲಿ ಹಿಂದೆ: ಪರೀಕ್ಷೆಗೆ ನೊಂದಾಯಿಸದೆ ವಿದ್ಯಾರ್ಥಿಗಳಿಗೆ ವಂಚನೆ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು