News Kannada
Wednesday, October 05 2022

ಕರಾವಳಿ

`ಯೇಸು ಕ್ರಿಸ್ತರ ಸಂದೇಶ ಸಾರುವವರು ಮೊದಲು ಜೀವನದಲ್ಲಿ ಅಳವಡಿಸಿಕೊಳ್ಳಿ’ - 1 min read

Photo Credit :

`ಯೇಸು ಕ್ರಿಸ್ತರ ಸಂದೇಶ ಸಾರುವವರು ಮೊದಲು ಜೀವನದಲ್ಲಿ ಅಳವಡಿಸಿಕೊಳ್ಳಿ'

ಬೆಳ್ತಂಗಡಿ: ಯಾವುದೇ ವೃತ್ತಿಯಲ್ಲಿರಲಿ ದೇವರಿಗೂ, ಆತ್ಮಸಾಕ್ಷಿಗೂ ಅನುಗುಣವಾಗಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕ ಇತರರಿಗೆ ಪ್ರೇರಣೆ ನೀಡುವಂತಾಗಬೇಕು ಎಂದು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾದ ಜಸ್ಟಿಸ್ ಕುರಿಯನ್ ಜೋಸೆಫ್ ಹೇಳಿದರು.

ಅವರು ಬೆಳ್ತಂಗಡಿಯ ಸಂತ ಲಾರೆನ್ಸ್ ಪ್ರಧಾನ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಕಿರಿಯ ಕುಸುಮ ಮಿಷನ್ ಲೀಗ್(ಸಿಎಂಎಲ್) ಎಪ್ಪತ್ತನೆಯ ವರ್ಷಾಚರಣೆಯ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಪ್ರಮುಖ ಭಾಷಣಗಾರರಾಗಿ ಆಗಮಿಸಿ ಮಾತನಾಡಿದರು.

ತಾನು ತನ್ನ ವ್ಯಕ್ತಿತ್ವವನ್ನು ಸಿಎಂಎಲ್ ಮೂಲಕವೇ ರೂಪಿಸಿಕೊಂಡವ ಎಂದು ಹೇಳಿದ ಅವರು, ಈ ಸಂಘಟನೆ ಸೇವೆ, ತ್ಯಾಗ,ಪ್ರೀತಿ, ಸಹನೆಯ ಸಂದೇಶವನ್ನು ನೀಡುತ್ತಾ ತನ್ನ ಸದಸ್ಯರಲ್ಲಿ ಈ ಗುಣಗಳನ್ನು ಬೆಳೆಸುವ ಮೂಲಕ ಜಗತ್ತಿಗೆ ಸೇವೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದರು. ಯೇಸು ಕ್ರಿಸ್ತರ ಸಂದೇಶವನ್ನು ಸಾರುವವರು ಮೊದಲು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ತಾನು ಅನುಭವಿಸಿದ ಕ್ರಿಸ್ತನನ್ನು ತನ್ನ ಬದುಕಿನ ಮೂಲಕ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು. ಆದರ್ಶ ಬದುಕೇ ಕ್ರಿಸ್ತರ ಸಂದೇಶ ಸಾರುವ ಸಾಧನವಾಗಬೇಕೇ ಹೊರತು ಪುಸ್ತಕ ಭಾಷಣಗಳಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸೇವೆ ಹಾಗೂ ತ್ಯಾಗಪೂರ್ಣವಾದ ಜೀವನದ ಮೂಲಕ ಮಿಷನರಿಗಳು ಜಗತ್ತಿನಲ್ಲಿ ಯೇಸುಕ್ರಿಸ್ತರ ಪ್ರೀತಿಯ ಸಂದೇಶವನ್ನು ಸಾರುತ್ತಿದ್ದಾರೆ. ಸೇವೆ ಮಾಡುವುದು ಎಂದಿಗೂ ಮತಾಂತರಕ್ಕಾಗಿ ಅಲ್ಲ ಅದು ಗುರಿಯೂ ಅಲ್ಲ, ಉತ್ತಮ ಜೀವನ ನಡೆಸುವ ಮೂಲಕ ಇತರರಿಗೆ ಕ್ರಿಸ್ತರ ಸಂದೇಶವನ್ನು ನೀಡುವವನೇ ನಿಜವಾದ ಅರ್ಥದಲ್ಲಿ ಕ್ರೈಸ್ತನಾಗುತ್ತಾನೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಲಶೇರಿ ಮಹಾ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಅತಿವಂದನೀಯ ಜಾರ್ಜ್ ಞರಳಕ್ಕಾಟ್ ವ್ಯಕ್ತಿತ್ವ ವಿಕಸನ ಮತ್ತು ಸೇವೆಯೇ ಸಿಎಂಎಲ್ ನ ಗುರಿಯಾಗಿದ್ದು ದೇಶದಾದ್ಯಂತ ಲಕ್ಷಾಂತರ ಮಂದಿ ಸದಸ್ಯರನ್ನು ಹೊಂದಿರುವ ಸಂಘಟನೆ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿ ಅವರು ಬದುಕಿನಲ್ಲಿ ಉತ್ತಮ ಸಾಧನೆಗಳನ್ನು ಮಾಡಲು ಪ್ರೇರೇಪಿಸುತ್ತದೆ. ಕ್ರೈಸ್ತ ಧರ್ಮಸಭೆ ತನ್ನ ಸೇವೆಯ ಮೂಲಕ ಸದಾಜನರ ನಡುವೆಯೇ ಬದುಕುತ್ತಿದೆ ಬೆಳೆಯುತ್ತಿದೆ. ಸೇವೆಯ ಮೂಲಕ ಕ್ರಿಸ್ತರ ಸಂದೇಶವನ್ನು ಪ್ರತಿನಿತ್ಯ ಸಾರುತ್ತಿದೆ, ಸೇವಾ ಮನೋಭಾವನೆಯಿರುವ ಯುವ ಸಮುದಾಯವನ್ನು ರೂಪಿಸುವ ಗುರಿಯೊಂದಿಗೆ ಸಿಎಂಎಲ್ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಸಂಘಟನೆಗೆ ಪ್ರಧಮ ಆದ್ಯತೆ ನೀಡಿ ಅದನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು ಆಮೂಲಕ ಸಮಾಜದ ಮಕ್ಕಳ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದರು.

See also  ಆಗಸ್ಟ್ 28ರಂದು ಉಳ್ಳಾಲಕ್ಕೆ ಆತ್ಯಾಧುನಿಕ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು