News Kannada
Tuesday, October 04 2022

ಕರಾವಳಿ

ಮೋದಿ ಆಗಮನ ಹಿನ್ನೆಲೆ: ಕಾರ್ಮಿಕರ ಮೇಲೂ ಎನ್ ಎಸ್ ಜಿ ಹದ್ದಿನ ಕಣ್ಣು - 1 min read

Photo Credit :

ಮೋದಿ ಆಗಮನ ಹಿನ್ನೆಲೆ: ಕಾರ್ಮಿಕರ ಮೇಲೂ ಎನ್ ಎಸ್ ಜಿ ಹದ್ದಿನ ಕಣ್ಣು

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅ. 29ರಂದು ಉಜಿರೆಯಲ್ಲಿ ನಡೆಯುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡುವ ಹಿನ್ನೆಲೆಯಲ್ಲಿ ವೇದಿಕೆ ಹಾಗೂ ಸಭಾಚಪ್ಪರದ ನಿರ್ಮಾಣದ ಭಾರೀ ತಯಾರಿಗಳು ನಡೆಯುತ್ತಿವೆ.

ಉಜಿರೆಯ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಕಾರ್ಮಿಕರು ಬೃಹತ್ ಜರ್ಮನ್ ಚಪ್ಪರದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕ್ರೇನ್ ಗಳ ಸಹಾಯದಿಂದ ಬೃಹತ್ ತೊಲೆಗಳನ್ನು ಅಳವಡಿಸುವ ಕಾರ್ಯ ಯುದ್ದೋಪಾದಿಯಲ್ಲಿ ನಡೆಯುತ್ತಿದೆ. 200 ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ.

ಎಸ್ ಜಿಪಿ ಮತ್ತು ಎನ್ಎಸ್ ಜಿ ತಂಡವು ಉಜಿರೆಯಲ್ಲಿ ಅಧಿಕಾರಿಗಳೊಂದಿಗೆ ಹಾಗೂ ಸಮಾಲೋಚನಾ ಸಭೆ ನಡೆಸಿತು. ವೇದಿಕೆ ತಗುಲಿಕೊಂಡೆ ಎರಡು ಕಚೇರಿಗಳನ್ನು ತೆರೆಯಲಾಗುತ್ತದೆ. ಒಂದು ಪ್ರಧಾನಿಗಾಗಿ ಹಾಗೂ ಇನ್ನೊಂದು ಪ್ರಧಾನಿ ಕಚೇರಿಗಾಗಿ ಇರುತ್ತದೆ. ಹಿಂಬದಿ ಇನ್ನೊಂದು ಕಚೇರಿಯಿರುತ್ತದೆ. ವೇದಿಕೆಯ ಮುಂಭಾಗ 35 ಸಾವಿರ ಮಂದಿಗೆ ಕುಳಿತುಕೊಳ್ಳಲು ಒಂದೆಡೆ, ಇನ್ನೊಂದೆಡೆ ಪ್ರಮುಖ ಪೆಂಡಾಲ್ ನಲ್ಲಿ 10 ಸಾವಿರ ಕುರ್ಚಿಗಳನ್ನು ಮತ್ತೊಂದೆಡೆ ಸ್ಟೇಡಿಯಂನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗಿದೆ. ಮೈದಾನವನ್ನು ಪ್ರವೇಶಿಸಲು ನಾಲ್ಕು ಪ್ರವೇಶ ದ್ವಾರಗಳಿರುತ್ತವೆ.

ಕಾರ್ಮಿಕರ ಮೇಲೆ ನಿಗಾವಿರಿಸಲು ಪೋಲಿಸರು ಹಾಗೂ ಎಸ್ ಜಿಪಿಯವರನ್ನು ನೇಮಿಸಲಾಗಿದೆ. ಇಲ್ಲಿನ ಕ್ಷಣಕ್ಷಣದ ಬೆಳವಣಿಗೆಗಳನ್ನು ಗಮನಿಸಲಾಗುತ್ತದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಎಸ್ ಜಿಪಿಯ ಅರವಿಂದ ಹೇಳುತ್ತಾರೆ.

ಇತ್ತ ನಕ್ಸಲ್ ನಿಗ್ರಹ ದಳದವರು ಕನ್ಯಾಡಿ, ಧರ್ಮಸ್ಥಳ, ಉಜಿರೆ ಸುತ್ತಮುತ್ತ ಕೂಬಿಂಗ್ ನಡೆಸುತ್ತಿದ್ದು ಎಲ್ಲಾ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಅ. 29 ರಂದು ಬೆಳಿಗ್ಗೆ 7 ಗಂಟೆಯ ಬಳಿಕ ಉಜಿರೆಯಲ್ಲಿನ ದ್ವಾರದಿಂದ ಹಾಗೂ ಧರ್ಮಸ್ಥಳದಿಂದ ಸಭಾಂಗಣದ ಕಡೆಗೆ ಯಾವುದೇ ವಾಹನಗಳ ಪ್ರವೇಶವಿರುವುದಿಲ್ಲ. ಬೆಳ್ತಂಗಡಿ ಕಡೆಯಿಂದ ಬರುವವರು ಉಜಿರೆ ಜನಾರ್ದನ ಸ್ವಾಮಿ ದೇವಳದ ಬಳಿ ಹಾಗೂ ತುಳು ಗ್ರಾಮ ನಡೆದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಉಜಿರೆ ದ್ವಾರದಿಂದ ಎಲ್ಲರೂ ನಡೆದುಕೊಂಡೇ ಸಭಾಂಗಣಕ್ಕೆ ಬರಬೇಕಾಗುತ್ತದೆ. ಕೊಕ್ಕಡ, ಧರ್ಮಸ್ಥಳ ಕಡೆಯಿಂದ ಬರುವವರು ಮುಂಡ್ರುಪಾಡಿ ರಸ್ತೆಯ ಮೂಲಕ ಚಾರ್ಮಾಡಿ ರಸ್ತೆ ಮೂಲಕ ಉಜಿರೆಗೆ ಬರಬೇಕಾಗುತ್ತದೆ.

ಸಮಾವೇಶದಲ್ಲಿ ಸುಮಾರು 40 ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ.

ಪ್ರಧಾನ ಮಂತ್ರಿಯ ವಿಶೇಷ ಭದ್ರತಾ ತಂಡವಾದ ಎಸ್ ಜಿಪಿಯ ಪ್ರಮುಖ ಅಧಿಕಾರಿ ಎಮ್. ಪಿ. ಗುಪ್ತಾ ಹಾಗೂ ಅವರ 11 ಮಂದಿ ಅಧಿಕಾರಿಗಳು ಪರಿಶೀಲನೆ ನಡೆಸಿ ಭದ್ರತಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮಧ್ಯಾಹ್ನ 11-30 ರ ಬಳಿಕ ಧರ್ಮಸ್ಥಳದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿಯಲಿದ್ದಾರೆ. ಬಳಿಕ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದು ಉಜಿರೆಯಲ್ಲಿನ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ದೇವಳದ ಭೇಟಿ

ಮಂಜುನಾಥ ಸ್ವಾಮಿ ದೇವಳದ ದರ್ಶನಕ್ಕೆ ಅ.28(ಶನಿವಾರ)ರಂದು ರಾತ್ರಿ 9 ಗಂಟೆ ತನಕ ಅವಕಾಶವಿದೆ. ಅ.29ರಂದು ಭಾನುವಾರ ಮಧ್ಯಾಹ್ನ 2 ಗಂಟೆ ಬಳಿಕ ದರ್ಶನಕ್ಕೆ ಅವಕಾಶವಿದೆ ಭಾನುವಾರ ಬೆಳಗ್ಗೆ 9 ಗಂಟೆ ತನಕ ಧರ್ಮಸ್ಥಳದಿಂದ ಉಜಿರೆ ತನಕ ವಾಹನ ಸಂಚಾರಕ್ಕೆ ಅವಕಾಶವಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

See also  ವಿದ್ಯಾರ್ಥಿನಿಯ ಸ್ನಾನದ ದೃಶ್ಯ ಮೊಬೈಲ್ ನಲ್ಲಿ ಸೆರೆ: ಯುವಕ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು