News Kannada
Monday, September 26 2022

ಕರಾವಳಿ

ಧರ್ಮಸ್ಥಳದಲ್ಲಿ ಜನರನ್ನು ಮಂತ್ರಮುಗ್ದಗೊಳಿಸಿದ ಮೋದಿ ಭಾಷಣ…. - 1 min read

Photo Credit :

ಧರ್ಮಸ್ಥಳದಲ್ಲಿ ಜನರನ್ನು ಮಂತ್ರಮುಗ್ದಗೊಳಿಸಿದ ಮೋದಿ ಭಾಷಣ....

ಬೆಳ್ತಂಗಡಿ: ಮೋದಿ ಮೋದಿ ಎಂಬ ಮುಗಿಲೆತ್ತರ ಘೋಷಣೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ನಲ್ವತ್ರು ನಿಮಿಷಗಳ ನಿರರ್ಗಳ ಭಾಷಣ ಸಹಸ್ರಾರು ಜನರನ್ನು ಮಂತ್ರಮುಗ್ದಗೊಳಿಸಿತು.

ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣಕ್ಕೆ ರವಿವಾರ ಪೂರ್ವಾಹ್ನ 11-50ಕ್ಕೆ ಸರಿಯಾಗಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಡಾ| ಹೆಗ್ಗಡೆಯವರು ಮೈಸೂರು ಪೇಟ ತೊಡಿಸಿ, ಜರತಾರಿ ಶಾಲು ಹಾರವನ್ನು ಹಾಕಿ ಸ್ವಾಗತಿಸಿದಲರಲ್ಲದೆ ಸರಸ್ವತಿಯ ಆಕರ್ಷಕ ವಿಗ್ರಹವನ್ನು ಸ್ಮರಣಿಕೆಯನ್ನಾಗಿ ನೀಡಿದರು. ಈ ಸಂದರ್ಭ ಮೋದಿಯವರು ಹೆಗ್ಗಡೆಯವರ ಕರಗಳನ್ನು ಹಿಡಿದು ಮೂರು ಬಾರಿ ಕರಗಳಿಗೆ ಶಿರಬಾಗಿದ್ದು ನೆರೆದವರನ್ನು ರೋಮಾಂಚನಗೊಳಿಸಿತು. ಬಳಿಕ ಮೋದಿಯವರೂ ಡಾ| ಹೆಗ್ಗಡೆಯವರನ್ನು ಶಾಲು ಹೊದಿಸಿ ಹಾರ ಹಾಕಿ ಸಮ್ಮಾನಿಸಿದರು.

ಇದೇ ವೇಳೆ ಸಂಸದರಾದ ನಳೀನ್ ಕುಮಾರ್ ಕಟೀಲು ಹಾಗೂ ಸದಾನಂದ ಗೌಡ ಅವರು ಕರಾವಳಿಯ ವೀರ ಕ್ರೀಡೆಯಾದ ಕಂಬಳದಲ್ಲಿ ಕೋಣಗಳಿಗೆ ಉಪಯೋಗಿಸುವ ನೊಗದ ಮರದ ಪ್ರತಿಕೃತಿಯನ್ನು ಮೋದಿಯವರಿಗೆ ಕೊಡುಗೆಯಾಗಿ ನೀಡಿದರು. ಇದೇ ವೇಳೆ ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್.ಮಂಜುನಾಥ್ ಸಿರಿ ಸಂಸ್ಥೆಯಲ್ಲಿ ಸಿದ್ದವಾದ ಮೋದಿ ಕುರ್ವವನು ಎಲ್ಲಾ ಅತಿಥಿಗಳಿಗೆ ನೀಡಿದರಲ್ಲದೆ ಹಿಂದಿಯಲ್ಲಿ ಮೋದಿಯವರನ್ನು ಸ್ವಾಗತಿಸಿದರು.

ಪ್ರಸ್ತಾವನೆಯ ಪ್ರಾರಂಭದಲ್ಲಿ ಮೂರು ಬಾರಿ ಓಂ ಮಂಜುನಾಥಾಯ ‘ ನಮೋ ನಮಃ ‘ ಎಂಬ ಮಂತ್ರವನ್ನು ಜನತೆಯ ಮೂಲಕ ಪಠಿಸುವಂತೆ ಹೇಳಿದಾಗ ಜನತೆ ಹರ್ಷೋದ್ಧಾರದ ಜತೆ ಮಂತ್ರವನ್ನು ಮೊಳಗಿಸಿದರು. ಮೋದಿ 12-10ಕ್ಕೆ ಭಾಷಣವನ್ನು ಕನ್ನಡ ಶಬ್ದಗಳ ಜೊತೆ ಆರಂಭಿಸುವಾಗ ಮತ್ತೊಮ್ಮೆ ಸಭಿಕರಿಂದ ಜಯಘೋಷ ಮೊಳಗಿತು. ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಭಗಿನಿಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಸಹೋದರಿಯರಿಗೆ ವಿಶೇಷ ಅಭಿನಂದನೆಗಳು ಎಂದು ಕನ್ನಡದಲ್ಲಿ ಸಂಭೋಧಿಸಿದಾಗ ಜನರಿಂದ ಮತ್ತೆ ಮೋದಿ ಮೋದಿ. ಪ್ರಧಾನಿಯವರ 40 ನಿಮಿಷಗಳ ಭಾಷಣವನ್ನು ಶಾಂತವಾಗಿ ಜನ ಆಲಿಸಿದರು.

ಶಾಲಿನಿ ಹಾಗೂ ಶಕಿಲಾ ಬಾನು ಅವರಿಗೆ ಸಾಂಕೇತಿಕವಾಗಿ ರೂಪೇ ಕಾರ್ಡನ್ನು ಮೋದಿ ಹಸ್ತಾಂತರಿಸಿದರು. ಬಳಿಕ ಭೂಮಿ ತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಅಭಿಯಾನದ ಲಾಂಛನವನ್ನು ಪ್ರಧಾನಿ ಅನಾವರಣಗೊಳಿಸಿದರು. ಸಮಾರಂಭದ ವೇದಿಕೆಯನ್ನು ಹೂಗಳಿಂದ ಅತ್ಯಾಕರ್ಷಕವಾಗಿ ಅಲಂಕರಿಸಲಾಗಿತ್ತು. ವೇದಿಕೆಯ ಎರಡೂ ಬದಿಯಲ್ಲಿ ಬೃಹತ್ ಟಿವಿ ಪರದೆಯನ್ನು ಅಳವಡಿಸಲಾಗಿತ್ತು.

ಸುಮಾರು 50 ರಿಂದ 60 ಸಾವಿರದವರೆಗೆ ಜನ ಕ್ರೀಡಾಂಗಣದಲ್ಲಿ ತುಂಬಿದ್ದರು. ಸ್ಟೇಡಿಯಂನಲ್ಲೂ ಜನ ಕುಳಿತು ಭಾಷಣ ಆಲಿಸಿದರು. ಅಷ್ಟೇ ಅಲ್ಲದೆ ಡಿಡಿ ವಾಹಿನಿಯಲ್ಲಿ ನೇರ ಪ್ರಸಾರವಿದ್ದುದರಿಂದ ಮಿಲಿಯಾಂತರ ಮಂದಿ ಟಿವಿಯಲ್ಲಿ ವೀಕ್ಷಿಸಿದರು. ಧರ್ಮಸ್ಥಳದಿಂದ ಉಜಿರೆ ತನಕ ಹಲವಾರ ಬೆಂಗಾಲು ವಾಹನಗಳೊಂದಿಗೆ ಮೋದಿ ಬರುವ ಶೈಲಿಯನ್ನು ವೀಕ್ಷಿಸಲೆಂದೇ ನೂರಾರು ಮಂದಿ ಸಭಾಂಗಣದ ಹೊರಗೆಯೇ ನಿಂತಿದ್ದು ವಿಶೇಷವಾಗಿತ್ತು.

ಪೋಲಿಸರು ಇಲ್ಲಿನ ವ್ಯವಸ್ಥೆ, ಆತಿಥ್ಯದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂತು. ಬೇರೆ ಜಿಲ್ಲೆಗಳಿಗೆ ಹೋದರೆ ಯಾರೂ ಹೇಳುವವರು ಕೇಳುವವರು ಇರುವುದಿಲ್ಲ. ಊಟ, ವಸತಿ, ಸ್ನಾನಕ್ಕೆ ಯಾವುದೇ ವ್ಯವಸ್ಥೆ ಇರುವುದಿಲ್ಲ. ಕೇವಲ ಮೇಲಧಿಕಾರಿಗಳ ಆದೇಶವಿರುತ್ತದೆಯೇ ಹೊರತು ಬೇರೆ ಏನು ಇರುವುದಿಲ್ಲ ಎಂಬ ಮಾತು ಹೆಸರು ಹೇಳಲಿಚ್ಛಿಸದ ಪೋಲಿಸ ಸಿಬ್ಬಂದಿ ಹೇಳಿದರು.
ಸಾವಿರಾರು ಮಂದಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಬಿಳಿ ಕ್ಯಾಪ್ ಧರಿಸಿ ಬಂದಿದ್ದು ವಿಶೇಷವಾಗಿತ್ತು.

See also  ಮಂಗಳೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಡಾಮಾರೀಕರಣಗೊಳಿಸಲು ಎಸ್ ಡಿಪಿಐ ಆಗ್ರಹ

ಬೆಳಾಲು ಕ್ರಾಸ್ ಬಳಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಎಲ್ಲರನ್ನು ಸ್ವಾಗತಿಸುತ್ತಿದ್ದು ಗಮನಸೆಳೆಯಿತು. ಕ್ರೀಡಾಂಗಣದ ಹೊರಗೆ ವಿವಿಧ ಪತ್ರಿಕೆಗಳನ್ನು ಉಚಿತವಾಗಿ ಅಲ್ಲಲ್ಲಿ ಹಂಚಲಾಗುತ್ತಿತ್ತು. ಆದರೆ ಅದನ್ನು ಕ್ರೀಡಾಂಗಣದೊಳಗೆ ಕೊಂಡು ಹೋಗಲು ಬಿಡದೇ ಇದ್ದ ಕಾರಣ ಪತ್ರಿಕೆಗಳ ರಾಶಿಯೇ ಹೊರಗೆ ಕಂಡು ಬಂತು. ಕಪ್ಪು ಬಟ್ಟೆ ಹಾಕಿಕೊಂಡವರಿಗೆ ಪ್ರವೇಶ ನಿರಾಕರಿಸುತ್ತಿರುವುದು ಕಂಡು ಬಂತು. ಶಾಲುಗಳನ್ನು ಹೊರಗೆಯೇ ಬಿಟ್ಟು ಬರುವಂತಾಯಿತು. ಸಭಾಂಗಣದ ಹಿಂಬದಿ ನೀರಿನ ವಿತರಣೆ ಸಮರ್ಪಕವಾಗಿಲ್ಲದೆ ಇದ್ದದ್ದರಿಂದ ಹಲವಾರು ಮಕ್ಕಳು ಪರದಾಡುವಂತಾಯಿತು.

ಸಮಾರಂಭಕ್ಕೆ ಬಂದ ಎಲ್ಲರಿಗೂ ಜನಾರ್ದನ ದೇವಸ್ಥಾನದ ಎದುರುಗಡೆ ಊಟದ ವ್ಯವಸ್ಥೆಯನ್ನು ಶಿಸ್ತಿನಿಂದ ಮಾಡಲಾಗಿತ್ತು.  ರಸ್ತೆಯ ಇಕ್ಕೆಲೆಗಳಲ್ಲಿದ್ದ ಬೊಂಡ, ಬಚ್ಚಂಗಾಯಿ, ಐಸ್ಕ್ರೀಮ್ ಅಂಗಡಿಗಳಿಗೆ ಭರ್ಜರಿ ವ್ಯಾಪಾರ ನಡೆಯಿತು. ಕಾರ್ಯಕ್ರಮ ಮುಗಿದ ಬಳಿಕ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ಊಟ ಮಾಡಿ ಜನರು ನಿರ್ಗಮಿಸಿದರು. ಉಜಿರೆ ದ್ವಾರದಿಂದ ಸಭಾಂಗಣದ ತನಕ ನಡೆದುಹೋಗುತ್ತಿದ್ದ ಜನಸಾಗರದ ದೃಶ್ಯ ನೋಡಲು ಮನಮೋಹಕವಾಗಿತ್ತು. ಯಾವುದೇ ಅಡೆತಡೆಯಿಲ್ಲದ, ಸುವ್ಯವಸ್ಥಿತ ಪಾರ್ಡಂಗ್ ವ್ಯವಸ್ಥೆ ಎಲ್ಲರ ಮೆಚ್ಚುಗೆಗಳಿಸಿತು.  ಹೊರ ರಾಜ್ಯಗಳಿಂದ ಧರ್ಮಸ್ಥಳಕ್ಕೆ ಬಂದ ಪ್ರವಾಸಿಗರು ಮಾತ್ರ ಉಜಿರೆ-ಧರ್ಮಸ್ಥಳ ಸಂಚಾರ ಬಂದ್ ಇದ್ದ ಕಾರಣ ಪರದಾಡುವಂತಾಯಿತು. ಸಮಾರಂಭದ ಮಾಹಿತಿ ಕೊರತೆಯೇ ಇದಕ್ಕೆ ಕಾರಣವಾಗಿತ್ತು.

ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಶಾಸಕ ವಸಂತ ಬಂಗೇರ ಅವರಿಗೆ ಹಸ್ತ ಲಾಘವ ನೀಡಿದರಲ್ಲದೆ ನಿರ್ಗಮಿಸುವ ವೇಳೆ ಅವರ ಬೆನ್ನು ತಟ್ಟಿದರು.

ಮೋದಿ ಬೆಂಗಳೂರಿಗೆ ಪಯಣ ಬೆಳೆಸಿದ ಕೆಲವೇ ಕ್ಷಣದಲ್ಲಿ ಭಕ್ತಾಧಿಗಳಿಗೆ ದೇವರ ದರ್ಶನ: ಪ್ರಧಾನಿ ಭಾಷಣ ಮಾಡಿದ ಬಳಿಕ ಧರ್ಮಸ್ಥಳದಿಂದ ಮಧ್ಯಾಹ್ನ 1-05 ನಿಮಿಷಕ್ಕೆ ಹೆಲಿಕಾಪ್ಟರ್ ಏರಿ ಬೆಂಗಳ್ರರಿಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ 2 ಗಂಟೆಯ ಹೊತ್ತಿಗೆ ಕ್ಷೇತ್ರದ ದೇವಳಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ಆದಿತ್ಯವಾರ ಪ್ರಧಾನಿ ಬರುತ್ತಿದ್ದಾರೆ ಎಂಬ ಸುದ್ದಿಯ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು.

ಅ, 20 ರಿಂದ ಕಾರ್ತಿಕ ಮಾಸ ಆರಂಭವಾಗಿರುವ ಹಿನ್ನಲೆಯಲ್ಲಿ ಅ. 23 ರಂದು ಕಾರ್ತಿಕ ಮಾಸದ ಮೊದಲ ಸೋಮವಾರವಾಗಿತ್ತು. ಅಂದು ಕ್ಷೇತ್ರದಲ್ಲಿ ಭಾರೀ ಜನಸಂದಣಿ ನೆರೆದಿತ್ತು. ಅ. 30 ಕೂಡ ಕಾರ್ತಿಕ ಸೋಮವಾರವಾದ್ದರಿಂದ ಭಾನವಾರ ಸಂಜೆಯ ವೇಳೆ ಮತ್ತು ಸೋಮವಾರ ಬೆಳಿಗ್ಗೆ ಭಾರೀ ಭಕ್ತರು ಸೇರು ನಿರೀಕ್ಷೆ ಇದೆ.

ಜನರ ಅಭಿಪ್ರಾಯ: ಉಜಿರೆ ಪ್ರವಾಸ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ನನ್ನ ಗ್ರಾಮಕ್ಕೆ ಪ್ರಧಾನಿಯೇ ಬಂದಿರುವುದು ಸಂತಸ ತಂದಿದೆ. ಜನಸಾಮಾನ್ಯರೊಂದಿಗೆ ಬೆರೆಯುವ ಪ್ರ್ರಧಾನಿಯನ್ನು ನಾವು ಹತ್ತಿತರದಿಂದ ನೋಡಲು ಸಾಧ್ಯವಾದದ್ದು ನಮ್ಮ ಪುಣ್ಯವೇ ಸರಿ- ಶ್ರೀನಿವಾಸ್, ರಥಬೀದಿ ಧರ್ಮಸ್ಥಳ ವಿಶ್ಚದ ಗಮನ ಸೆಳೆಯುತ್ತಿರುವ ಪ್ರಧಾನಿಯನ್ನು ಹತ್ತಿರದಿಂದ ನೋಡುವ ಅವರ ಮಾತನ್ನು ಕೇಳುವ ತವಕ ಹಲವಾರು ಸಮಯದಿಂದ ಇತ್ತು. ಅದು ಇಂದು ಕೈಗೂಡಿದೆ. ಅವರ ನಿರರ್ಗಳ ಭಾಷಣದಲ್ಲಿನ ವಿಷಯ ವಸ್ತು ಸದಾ ನೆನಪಿನಲ್ಲುಳಿಯುವಂತಾಗಿದೆ – ಸುದರ್ಶನ ಕನ್ಯಾಡಿ

See also  ಸುಳ್ಯದಲ್ಲಿ ಮತ್ತೆ ಕಾಣಿಸಿಕೊಂಡ ನಕ್ಸಲರು

ಮೋದಿಯವರು ದೇವರಿಗೆ ರುದ್ರಾಭಿಷೇಕ ಸೇವೆ ಮಾಡಿಸಿದರು. ಆ ಬಗ್ಗೆ ಸಂಕಲ್ಪ ಮಾಡಲಾಯಿತು. ಒಟ್ಟು ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ದಿಲ್ಲಿಯಿಂದ ಧರ್ಮಸ್ಥಳಕ್ಕೆ ಪ್ರಧಾನಿ ಬಂದಿರುವುದು ನಮಗೆಲ್ಲ ಅತೀವ ಆನಂದವಾಗಿದೆ. ಪ್ರಧಾನಿಗಳು ಯಾವುದೇ ಒತ್ತಡ ಇಲ್ಲದೆ ನಿಶ್ಚಿಂತೆಯಿಂದ ಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. – ಅನಂತ ಪದ್ಮನಾಭ ಪ್ರಧಾನ ಪ್ರಧಾನ ಅರ್ಚಕರು ಶ್ರೀಕ್ಷೇತ್ರ ಧರ್ಮಸ್ಥಳ ಪ್ರಧಾನಿಯೇ ಬಂದಾಗ ಕಿಂಚಿತ್ ಬದಲಾವಣೆಯಾಗುವುದು ಸಹಜ. ಆದರೆ ಇದು ನಮಗೆ ತೊಂದರೆ ಎಂದು ಅನಿಸಿಲ್ಲ. ಅವರು ಹೋದ ಮೇಲೆ ದೇವರ ದರ್ಶನ ಮಾಡಬಹುದು. ಅಂತೂ ನಮಗೆ ಮೋದಿಯನ್ನು ಹತ್ತಿರದಿಂದ ನೋಡುವ ಅವಕಾಶ ಪ್ರಾಪ್ತವಾಯಿತು- ದಿನಕರ್ ಮುರ್ಡೇಶ್ವರದಿಂದ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು