News Kannada
Wednesday, October 05 2022

ಕರಾವಳಿ

ಬೆಳ್ತಂಗಡಿಯಲ್ಲಿ ಭೀಕರ ಅಪಘಾತ:ಇಬ್ಬರು ಸ್ಥಳದಲ್ಲೇ ಮೃತ್ಯು - 1 min read

Photo Credit :

ಬೆಳ್ತಂಗಡಿಯಲ್ಲಿ ಭೀಕರ ಅಪಘಾತ:ಇಬ್ಬರು ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಗರ್ಡಾಡಿ ಸನಿಹದ ಪಂಜಿನಡಾಯಿ ಎಂಬಲ್ಲಿ ಎರಡು ಕಾರುಗಳು ನಡೆದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಂಭೀರ ಗಾಯಗೊಂಡ ಘಟನೆ ಆದಿತ್ಯವಾರ ಸಂಜೆ ನಡೆದಿದೆ.

ಗುರುವಾಯನಕರೆ ಸನಿಹದ ವರಕಬೆ ನಿವಾಸಿಗಳಾದ ಆಶಿತ್ ಯಾನೆ ಅಚ್ಚು (21) ಹಾಗೂ ವಿಶ್ವಾಸ್ (19) ಎಂಬುವರೇ ಮೃತಪಟ್ಟವರು. ಇವರಿಬ್ಬರ ಜೊತೆ ಇದ್ದ ದೀಪಕ್ (19) ವಿಕಾಸ್ (21) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಂದು ಕಾರಿನಲ್ಲಿದ್ದ ಬೀರೂರು ಪುರಸಭೆಯ ಅಧ್ಯಕ್ಷೆ ನಿರ್ಮಲಾ (34), ಉಪಾಧ್ಯಕ್ಷೆ ಸವಿತಾ(32), ಸುರೇಶ್ (42), ಹಾಗೂ ಚಾಲಕ ಜಗನ್ನಾಥ್ (52) ಪ್ರಯಾಣಿಸುತ್ತಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನಿರ್ಮಲಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾಯನಕೆರೆಯಿಂದ ವೇಣೂರು ಕಡೆಗೆ ವರಕಬೆಯವರ ಕಾರು ಹಾಗೂ ಮೂಡುಬಿದಿರೆ ಕಡೆಯಿಂದ ಬೀರೂರಿನ ಕಡೆಯವರ ಕಾರು ಪರಸ್ಪರ ಡಿಕ್ಕಿಯಾಗಿದೆ. ಎರಡು ಕಾರುಗಳು ನಜ್ಜುಗುಜ್ಜಾಗಿದೆ. ಗುರುವಾಯನಕೆರೆ ನಿವಾಸಿಗಳು ಇಬ್ಬರು ಸ್ಥಳದಲ್ಲೆ ಮೃತ ಪಟ್ಟಿದ್ದು, ಒಟ್ಟು 7 ಮಂದಿ ಗಾಯಗೊಂಡಿದ್ದಾರೆ.

ಬೀರೂರಿನವರು ಧರ್ಮಸ್ಥಳಕ್ಕೆ ಬಂದು ಬಳಿಕ ಮೂಡಬಿದರೆಯ ಕಾಲೇಜೊಂದಕ್ಕೆ ಹೋಗಿದ್ದು, ಮರಳಿ ಬೀರೂರು ಕಡೆ ಹೊರಟಿದ್ದರು. ಆದರೆ ಗರ್ಡಾಡಿ ಎಂಬಲ್ಲಿ ಎದುರಿನಿಂದ ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆಯಿತು. ಬೆಳ್ತಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಬಿ.ಸಿ.ರೋಡ್ ಸರ್ವಿಸ್ ರಸ್ತೆಯಲ್ಲಿ ಕೃತಕ ನೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು