News Kannada
Friday, September 30 2022

ಕರಾವಳಿ

ವಕ್ಫ್ ಸಂಸ್ಥೆಗಳ ಮುತವಲ್ಲಿ ಸಮಾವೇಶ ಮತ್ತು ಮಾಹಿತಿ ಕಾರ್ಯಗಾರ - 1 min read

Photo Credit :

ವಕ್ಫ್ ಸಂಸ್ಥೆಗಳ ಮುತವಲ್ಲಿ ಸಮಾವೇಶ ಮತ್ತು ಮಾಹಿತಿ ಕಾರ್ಯಗಾರ

ಸುಳ್ಯ: ಶಾಂತಿ ಸೌಹಾರ್ದತೆ ಮತ್ತು ಸಹೋದರತೆಯ ಧರ್ಮವನ್ನು ಭೋಧಿಸುವ ಧಾರ್ಮಿಕ ಸಂಸ್ಥೆಗಳ ಚುಕ್ಕಾಣಿ ಹಿಡಿಯಲು ಯುವ ಸಮುದಾಯ ಮುಂದಾಗಬೇಕು. ಆಗ ಸಾಮಾಜಿಕ ಪಿಡುಗುಗಳಿಂದ ದೂರವಿದ್ದು, ಸಮಾಜದ ಬಡ ವರ್ಗದ ಸೇವೆಗೆ ತಮ್ಮನ್ನು ಮುಡಿಪಾಗಿಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಹೇಳಿದರು.

ಸುಳ್ಯ ತಾಲೂಕಿನ ಮಸೀದಿ, ಮದರಸ, ಮುಸ್ಲಿಂ ಆಡಳಿತ ಮಂಡಳಿಯ ಶಿಕ್ಷಣ ಸಂಸ್ಥೆಗಳು, ದೀನಿ ಸ್ಥಾಪನೆಗಳ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಜಿ ಹಾಗೂ ಇಮಾಮರ್ ಗಳ ಏಕದಿನ ಮುತವಲ್ಲಿ ಸಮಾವೇಶ ಮತ್ತು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ನ 50ನೇ ವಾರ್ಷಿಕ ಗೋಲ್ಡನ್ ಜುಬಿಲಿ ಅಂಗವಾಗಿ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್, ದ.ಕ. ಜಿಲ್ಲಾ ವಕ್ಫ್ ಬೋರ್ಡ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸುಳ್ಯದಲ್ಲಿ ನಡೆದ ವಕ್ಫ್ ಸಮಾವೇಶದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಕೆ.ಎಂ. ಮುಸ್ತಫ ವಹಿಸಿದ್ದರು. ವಕ್ಫ್ ಕೌನ್ಸಿಲ್ ನ ಯೋಜನೆಗಳನ್ನು ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್. ಸಂಶುದ್ದೀನ್ ವಿವರಿಸಿದರು. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಮಸೀದಿ ಮದರಸಗಳ ವಕ್ಫ್ ನೋಂದಣಿ, ಭೂ ದಾಖಲೆಗಳ ಕ್ರಮಬದ್ಧತೆ, ಅನುದಾನದ ಕಡತ ತಯಾರಿಕೆ, ಬೈಲಾ ಮತ್ತು ಕಮಿಟಿಗಳ ನೋಂದಣಿ ಮೊದಲಾದ ವಿಚಾರಗಳಲ್ಲಿ ಮಾಹಿತಿಯನ್ನು ನೀಡಿದರು. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸುಳ್ಯ ಮಾಹಿತಿ ಕೇಂದ್ರದ ಮುಖ್ಯಸ್ಥ ಕಮರುದ್ದೀನ್ ಕಲ್ಯಾಣ ಇಲಾಖೆಯ ಯೋಜನೆಗಳಾದ ಮದರಸ ನವೀಕರಣ, ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣ ಮೊದಲಾದ ಯೋಜನೆಗಳ ಮಾಹಿತಿ ನೀಡಿದರು.

See also  ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು