News Kannada
Tuesday, October 04 2022

ಕರಾವಳಿ

ಬಿಸಿಯೂಟಕ್ಕೆ ತಾವೇ ಅಕ್ಕಿ ಬೆಳೆದ ಸ್ವಾವಲಂಬಿ ಕಲ್ಲಡ್ಕದ ವಿದ್ಯಾರ್ಥಿಗಳು - 1 min read

Photo Credit :

ಬಿಸಿಯೂಟಕ್ಕೆ ತಾವೇ ಅಕ್ಕಿ ಬೆಳೆದ ಸ್ವಾವಲಂಬಿ ಕಲ್ಲಡ್ಕದ ವಿದ್ಯಾರ್ಥಿಗಳು

ಬಂಟ್ವಾಳ: ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಆಧುನೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಕೃಷಿ ಮಾಡುವಂತಹ ಜನರು ಕಡಿಮೆಯಾಗುತ್ತಿದ್ದಾರೆ. ರೈತರೆಂದು ಹೇಳಿಕೊಂಡರೆ ಅವರಿಗೆ ಏನೋ ಅವಮಾನವಾದಂತಹ ಭಾವನೆ. ಆದರೆ ಕೃಷಿಯಲ್ಲಿ ತೊಡಗಿಕೊಂಡರೆ ಅದರಿಂದ ಸಿಗುವಂತಹ ಖುಷಿ ಮತ್ತು ಮಾನಸಿಕ ನೆಮ್ಮದಿ ಬೇರೆ ಎಲ್ಲೂ ಸಿಗುವುದಿಲ್ಲವೆಂದು ಉಳುಮೆ ಮಾಡಿ ಬೀಜ ಬಿತ್ತಿದವನಿಗೆ ಮಾತ್ರ ಗೊತ್ತು.

ಯುವಕರನ್ನು ಕೃಷಿಯತ್ತ ಸೆಳೆಯಲು ಹಲವಾರು ರೀತಿಯ ಪ್ರಯತ್ನಗಳು ನಡೆಯುತ್ತಲೇ ಇದೆ. ಇದಕ್ಕಾಗಿಯೇ ಕೆಲವೊಂದು ಕಾಲೇಜುಗಳಲ್ಲಿ ಕೃಷಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ನೇಜಿ ನೆಡುವ, ಭತ್ತ ಕೊಯ್ಯುವ ಕೆಲಸಗಳನ್ನು ಮಾಡಿಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಒಂದು ರೀತಿಯ ಸಂಭ್ರಮ.

ಆದರೆ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮಾತ್ರ ಸಂಪೂರ್ಣ ಭಿನ್ನ. ಯಾಕೆಂದರೆ ಕೆಲವು ತಿಂಗಳ ಮೊದಲು ಈ ಶಾಲೆಗೆ ಬರುತ್ತಿದ್ದ ಮಧ್ಯಾಹ್ನದ ಬಿಸಿಯೂಟವನ್ನು ರಾಜ್ಯ ಸರ್ಕಾರವು ನಿಲ್ಲಿಸಿತ್ತು. ಇದರಿಂದ ಕಲ್ಲಡ್ಕ ಪ್ರಭಾಕರ್ ಭಟ್ ಅಥವಾ ವಿದ್ಯಾರ್ಥಿಗಳು ಧೃತಿಗೆಡಲಿಲ್ಲ. ತಾವಾಗಿಯೇ ಗದ್ದೆಯಲ್ಲಿ ಉಳುಮೆ ಮಾಡಿ, ಭತ್ತ ಬೆಳೆದು ಸರ್ಕಾರಕ್ಕೆ ತಮ್ಮ ಸಾಮರ್ಥ್ಯ ಏನೆಂದು ತೋರಿಸಿಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ಸೇರಿದ ಸುಮಾರು ಏಳು ಎಕರೆ ಗದ್ದೆಯಲ್ಲಿ ಭತ್ತದ ಪೈರು ನಾಟಿ ಮಾಡಿದ್ದಾರೆ. ಈಗ ಅದು ಬೆಳೆದು ಕಟಾವು ಕೂಡ ಮಾಡಿ ಸುಮಾರು 20 ಕ್ವಿಂಟಾಲ್ ಅಕ್ಕಿ ಪಡೆದಿದ್ದಾರೆ.

ಸರ್ಕಾರದ ನಿರ್ಧಾರವನ್ನು ಮಕ್ಕಳು ಸವಾಲಾಗಿ ಸ್ವೀಕರಿಸಿ ಭತ್ತ ಬೆಳೆದಿದ್ದಾರೆ. ಇದು ಮಕ್ಕಳಲ್ಲಿ ಸ್ವಾವಲಂಬನೆ ಕೂಡ ಮೂಡಿಸಿದೆ. ಇದನ್ನು ಮುಂದುವರಿಸಿಕೊಂಡು ಹೋಗಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಭತ್ತ ನಾಟಿ ಮಾಡಿ ಎರಡು ಕ್ವಿಂಟಲ್ ನಷ್ಟು ಅಕ್ಕಿ ಪಡೆದ ಮಕ್ಕಳ ಸಂಭ್ರಮ ಮಾತ್ರ ಮುಗಿಲು ಮುಟ್ಟಿದೆ. ಕಿತ್ತುಕೊಳ್ಳುವ ಮಂದಿ ನೂರು ಇದ್ದರೂ ಕೊಡುವವನು ಒಬ್ಬ ಇದ್ದೇ ಇರುತ್ತಾನೆ ಎನ್ನುವ ಮಾತಿಗೆ ಈ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.

See also  ಹಗಲು ಹಣ್ಣಿನ ವ್ಯಾಪಾರಿಗಳು, ರಾತ್ರಿ ದರೋಡೆಕೋರರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು