News Kannada
Friday, October 07 2022

ಕರಾವಳಿ

ರಿಕ್ಷಾ ಪಲ್ಟಿಯಾಗಿ ಓರ್ವ ಮೃತ್ಯು - 1 min read

Photo Credit :

ರಿಕ್ಷಾ ಪಲ್ಟಿಯಾಗಿ ಓರ್ವ ಮೃತ್ಯು

ಬಂಟ್ವಾಳ: ಪೆರಾಜೆ ಗ್ರಾಮದ ಬುಡೋಳಿ ಸೇತುವೆಯ ಬಳಿ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಓರ್ವರು ಮೃತಪಟ್ಟ ಘಟನೆ ನ.4ರಂದು ನಡೆದಿದೆ.

ತಾಲೂಕಿನ ಪೆರಾಜೆ ಗ್ರಾಮದ ಬೊಳ್ಳುಕಲ್ಲು ನಿವಾಸಿ ಚೆನ್ನಪ್ಪ ಪೂಜಾರಿಯವರ ಪುತ್ರ ದಿನೇಶ್(40) ಮೃತ ದುರ್ದೈವಿ.

ದಿನೇಶ್ ಅವರು ಪತ್ನಿ ಮಕ್ಕಳೊಂದಿಗೆ ನ.3ರಂದು ಕಡೇಶಿವಾಲಯ ಗ್ರಾಮದ ಸೇರ ಎಂಬಲ್ಲಿರುವ ಪತ್ನಿಯ ತಾಯಿ ಮನೆಗೆ ತೆರಳಿದ್ದರು. ನ.4ರಂದು ಮರಳಿ ಮನೆಗೆ ಬರುತ್ತಿದ್ದ ವೇಳೆ ಬುಡೋಳಿ ಸೇತುವೆ ಸಮೀಪ ಇವರು ಸಂಚರಿಸುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿದೆ. ಘಟನೆಯ ವೇಳೆ ರಿಕ್ಷಾದೊಳಗಿದ್ದ ದಿನೇಶ್ ಅವರು ಹೊರಕ್ಕೆಸೆಯಲ್ಪಟ್ಟಿದ್ದು, ಈ ವೇಳೆ ಆಟೋ ರಿಕ್ಷಾ ಅವರ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಟೋದಲ್ಲಿದ್ದ ದಿನೇಶ್ ಅವರ ಪತ್ನಿ ಜಯಂತಿ ಪುತ್ರಿಯರಾದ ಮನೀಷ, ಶಾನ್ವಿ ಹಾಗು ಇನ್ನೋರ್ವ ಮಹಿಳೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಗಾಯಗೊಂಡ ಆಟೋ ಚಾಲಕ ಕಡೇಶಿವಾಲಯ ಗ್ರಾಮದ ಸೇರ ನಿವಾಸಿ ತಿಮ್ಮಪ್ಪ ಪೂಜಾರಿಯವರ ಪುತ್ರ ಬೇಬಿ ಅಲಿಯಾಸ್ ಚಂದಪ್ಪ ಪೂಜಾರಿ(51) ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ದಿನೇಶ್ ಅವರ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

See also  ಬಂಟ್ವಾಳ: ಪಿಎಸ್ ಐ ಹೆಸರಿನಲ್ಲಿ ನಕಲಿ ಪೇಸ್ ಬುಕ್ ತೆರೆದು ಹಣಕ್ಕೆ ಬೇಡಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು