News Kannada
Wednesday, October 05 2022

ಕರಾವಳಿ

ಬೆಳ್ತಂಗಡಿಯ ಕುಗ್ರಾಮಗಳು ಅಭಿವೃದ್ಧಿ ಹೊಂದಿವೆ: ವಸಂತ ಬಂಗೇರ - 1 min read

Photo Credit :

ಬೆಳ್ತಂಗಡಿಯ ಕುಗ್ರಾಮಗಳು ಅಭಿವೃದ್ಧಿ ಹೊಂದಿವೆ: ವಸಂತ ಬಂಗೇರ

ಬೆಳ್ತಂಗಡಿ: ಐದು ಬಾರಿ ಶಾಸಕನಾಗಿ ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದು ತಾಲೂಕಿನ ಕುಗ್ರಾಮಗಳೂ ಅಭಿವೃದ್ದಿ ಕಾಣುವಂತಾಗಿದೆ. ಇನ್ನೂ ಸಾಕಷ್ಟು ಕೆಲಸ ಕಾರ್ಯಗಳು ನಡೆಯಬೇಕಾಗಿದ್ದು ಮುಖ್ಯಮಂತ್ರಿಯವರಲ್ಲಿ ವಿಶೇಷ ಅನುದಾನಕ್ಕೆ ಬೇಡಿಕೆಯಿಟ್ಟಿದ್ದೇನೆ ಎಂದು ಶಾಸಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ ವಸಂತ ಬಂಗೇರ ಅವರು ಹೇಳಿದರು.

ಅವರು ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಪ್ರದೇಶದ ಜನರ ಬಹುದಿನಗಳ ಬೇಡಿಕಯೊಂದು ಇದೀಗ ಈಡೇರುತ್ತಿದೆ ಎಂದ ಅವರು ಹಿಂದೆಯೇ ಭರವಸೆ ನೀಡಿದ್ದಂತೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಸಮಗ್ರವಾಗಿ ಅಭಿವೃದ್ದಿ ಪಡಿಸಲಾಗುತ್ತಿದ್ದು, ಆರುವರೆ ಕಿ. ಮೀ.ಗೆ ರೂ 6.5 ಕೋಟಿ ಅನುದಾನ ಸಿಆರ್ ಎಫ್ ಫಂಡ್ ನಿಂದ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿಯವರು ನುಡಿದಂತೆ ನಡೆದಿದ್ದಾರೆ. ಜನರಿಗೆ ನೀಡಿದ್ದ ಭರವಸೆಗಳನ್ನು ಬಹುತೇಕ ಈಡೇರಿಸಿದ್ದಾರೆ. ಸಾಮಾನ್ಯ ಜನರೂ ನೆಮ್ಮದಿಯ ಬದುಕನ್ನು ಕಾಣುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತ, ತಾಲೂಕು ಪಂಚಾಯತು ಸದಸ್ಯೆ ಲೀಲಾವತಿ, ಕಲ್ಮಂಜ ಗ್ರಾ. ಪಂ. ಅಧ್ಯಕ್ಷೆ ಜಯಲಕ್ಷ್ಮಿ, ಮುಂಡಾಜೆ ಗ್ರಾ. ಪಂ. ಅಧ್ಯಕ್ಷೆ ಶಾಲಿನಿ, ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಜಿ,ಭಿಡೆ, ವೆಂಕಟ್ರಮಣ ಹೆಬ್ಬಾರ್, ತುಕಾರಾಮ ಸಾಲಿಯಾನ್, ದಿನೇಶ್ ಗೌಡ ಪಿ. ಹಾಗೂ ಇತರರು ಉಪಸ್ಥಿತರಿದ್ದರು.

ಮೃತ ರಕ್ಷಿತ್ ಪೂಜಾರಿ ಮನೆಗೆ ಶಾಸಕರ ಭೇಟಿ

ತಾಲೂಕಿನ ಮಿತ್ತಬಾಗಿಲು ಗ್ರಾಮದ ದಿಡುಪೆ ಸನಿಹ ಎಮರ್ ಫಾಲ್ಸ್ ನಲ್ಲಿ ಭಾನುವಾರ ಸಂಜೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದ ಕೊಲ್ಲಿ ನಿವಾಸಿ ಅಕ್ಷಿತ್ ಪೂಜಾರಿ(20) ಅವರ ಮನೆಗೆ ಶಾಸಕ ಕೆ. ವಸಂತ ಬಂಗೇರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಈ ಫಾಲ್ಸ್ ಅತ್ಯಂತ ಅಪಾಯಕಾರಿ ಹಾಗೂ ಇನ್ನಿತರ ಚಟುವಟಿಕೆಯ ತಾಣವಾಗುತ್ತಿರುವ ಬಗ್ಗೆ ಊರವರು ಶಾಸಕರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಶಾಸಕರು, ವನ್ಯಜೀವಿ ವಿಭಾಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಎಮರ್ ಫಾಲ್ಸ್ ಗೆ ಮೋಜಿಗಾಗಿ ಬರುವ ಪ್ರವಾಸಿಗರ ಮೇಲೆ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗೆ ಸೂಚಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ತಾಲೂಕು ಪಂಚಾಯಿತಿ ಸದಸ್ಯ ಜಯರಾಮ್ ಇದ್ದರು.

See also  ಸುಳ್ಯದಲ್ಲಿ ಬಿಜೆಪಿ ವಿಜಯೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು