News Kannada
Saturday, October 01 2022

ಕರಾವಳಿ

ಫರಂಗಿಪೇಟೆ ಡಬಲ್ ಮರ್ಡರ್: ಮತ್ತೆ ನಾಲ್ವರು ಆರೋಪಿಗಳ ಸೆರೆ - 1 min read

Photo Credit :

ಫರಂಗಿಪೇಟೆ ಡಬಲ್ ಮರ್ಡರ್: ಮತ್ತೆ ನಾಲ್ವರು ಆರೋಪಿಗಳ ಸೆರೆ

ಬಂಟ್ವಾಳ: ಕಳೆದ ತಿಂಗಳು ಫರಂಗಿಪೇಟೆಯಲ್ಲಿ ನಡೆದ ಡಬಲ್ ಮರ್ಡರ್ ಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಡಿಸಿಐಬಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮಹಮ್ಮದ್ ಹುಸೈನ್ ಯಾನೆ ಮುನ್ನಾ(26).ನೌಫಾಲ್ ಯಾನೆ ಟೊಪ್ಪಿ ನೌಫಾಲ್ (25) ಮಹಮ್ಮದ್ ಆಶಿಫ್ ಯಾನೆ ಅಚ್ಚಿಯಾನೆ ಮೂಸಾ ಅಚ್ಚಿ(27) ಇಬ್ರಾಹಿಂ ಯಾನೆ ದೊಡ್ಡ ಪುತ್ತಾ(29) ಬಂಧಿತ ಆರೋಪಿಗಳು. ಅ.26 ರಂದು ರಾತ್ರಿ ಫರಂಗಿಪೇಟೆಯಲ್ಲಿ ನಡೆದ ಗ್ಯಾಂಗ್ ವಾರ್ ಗೆ ಪ್ರಕರಣದಲ್ಲಿ ಜಿಯಾ ಮತ್ತು ಫಯಾಜ್ ಎಂಬವರು ಕೊಲೆಗೀಡಾಗಿದ್ದರು. ಕ್ವಾಲಿಸ್ ಹಾಗೂ ಟೆಂಪೋದಲ್ಲಿ ಬಂದಿದ್ದ ಹಂತಕರು ಅಟ್ಟಾಡಿಸಿ ತಲವಾರು ದಾಳಿ ನಡೆಸಿದ್ದರು. ಈ ಘಟನೆಯಿಂದ ಅನಿಶ್ ಪೈಜಲ್ ಮತ್ತು ಮುಸ್ತಾಕ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಹಳೆಯ ದ್ವೇಷವೇ ಈ ಘಟನೆಗೆ ಕಾರಣವಾಗಿತ್ತು . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಏಳು ಜನರನ್ನು ಪೊಲೀಸರು ಬಂಧಿಸಿದ್ದರು. ಉಡುಪಿಯಲ್ಲಿ ಶುಕ್ರವಾರ ಡಿಸಿಐಬಿ ನಡೆಸಿದ ಕಾರ್ಯಾಚರಣೆಯಲ್ಲಿ ತಲೆಮರೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಟ್ವಾಳ ನಗರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು 11ಕ್ಕೇರಿದೆ.

ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ. ಇನ್ಸ್ ಪೆಕ್ಟರ್ ಅಮಾನುಲ್ಲಾ. ಪುತ್ತೂರು ಟ್ರಾಫಿಕ್ ಎಸ್ ಐ. ಜಗದೀಶ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್. ಐ.ಯಲ್ಲಪ್ಪ, ಸಿಬ್ಬಂದಿಯಾದ ಸಂಜೀವ ಪುರುಷ, ಉದಯ ರೈ, ಲಕ್ಷಣ.ಇಕ್ಬಾಲ್, ಪ್ರವೀಣ್, ತಾರನಾಥ, ಪಳನಿ, ವಾಸುನಾಯ್ಕ, ಚಾಲಕ ವಿಜಯ ಗೌಡ, ವಾಸು ನಾಯ್ಕ ಬಂಟ್ವಾಳ ಅವರು ಭಾಗವಹಿಸಿದ್ದರು.

See also  ಸುರತ್ಕಲ್ ಟೋಲ್ ಗೇಟ್ ವಿರುದ್ಧ ಅ.22ರಿಂದ ಅನಿರ್ದಿಷ್ಟಾವಧಿ ಧರಣಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು