News Kannada
Thursday, October 06 2022

ಕರಾವಳಿ

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ವಾದ್ಯಸ್ವರಗಳ ನಿನಾದ - 1 min read

Photo Credit :

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ವಾದ್ಯಸ್ವರಗಳ ನಿನಾದ

ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯು ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ವಾದ್ಯಸ್ವರದ ಇಂಪಿನೊಂದಿಗೆ ಕಂಗೊಳಿಸಿತು. ದೇವರ ಪೂಜಾಕಾರ್ಯಗಳ ನಡುವೆ ಕೇಳಿಬರುತ್ತಿದ್ದ ವಿವಿಧ ವಾದ್ಯಗಳ ನಿನಾದ ಭಕ್ತಸಮೂಹಕ್ಕೆ ಖುಷಿ ನೀಡಿತು.

ಬೇರೆ ಬೇರೆ ಊರುಗಳಿಂದ ಒಟ್ಟು 35 ಪ್ರತಿನಿಧಿಗಳನ್ನು ಒಳಗೊಂಡ ದಾಸಯ್ಯ ಸಮೂಹವು ತಮ್ಮ ವಿಶೇಷ ವಾದ್ಯಗಳಾದ ಚೌಡಕಿ(ತಂಬೂರಿ), ಬಾನಕಿ, ಶಂಖ, ಜಾಗಟೆಗಳ ಮೂಲಕ ಹೊಸಕಟ್ಟೆ ಉತ್ಸವಕ್ಕೆತಮ್ಮ ವಾದ್ಯಗಳಿಂದಲೇ ಶ್ರೀ ಸ್ವಾಮಿಯ ಸೇವೆ ಸಲ್ಲಿಸಿದರು. ಉತ್ಸವದ ಮುಂಭಾಗದಲ್ಲಿ ಈ ವಾದ್ಯಗಳನ್ನು ನುಡಿಸುತ್ತಾ ಮಂಜುನಾಥ ಸ್ವಾಮಿಯ ರಥೋತ್ಸವಕ್ಕೆ ವಿಶೇಷ ಮೆರಗನ್ನು ನೀಡಿದರು.

ಈ ವಾದ್ಯ ಸಾಧನಗಳು ವಿಶೇಷತೆ ಹೊಂದಿವೆ. ಅವುಗಳಲ್ಲಿ ಬಾನಕಿ ಶಂಖಚಕ್ರ ಹೆಣ್ಣು ಮಕ್ಕಳು ನುಡಿಸಿದರೆ ಕಷ್ಟ ಪರಿಹಾರ ಆಗುತ್ತೆ ಎಂಬ ನಂಬಿಕೆ ಮತ್ತು ಹೂಸ ಮನೆ ಗೃಹ ಪ್ರವೇಶಕ್ಕೆ ಹಾಗೂ ಮದುವೆ ಸಮಾರಂಭಗಳಲ್ಲೂ ಬಾನಕಿ ಊದಲು ಕರೆಸುತ್ತಾರೆ. ಹೆಚ್ಚಾಗಿ ಹಾಸನ ಹಾಗೂ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಇವರು ಈ ವಾದ್ಯಗಳನ್ನುನುಡಿಸುತ್ತಾರೆ.ಇನ್ನೂ ಬಾವನಾಸಿಯನ್ನು ಹೊಸ ಮನೆಯ ಸಂದರ್ಭಗಳಲ್ಲಿ ಅದರಲ್ಲಿ ಒಣಪಡಿ ಮತ್ತು ಅನ್ನ ತುಂಬಿದರೆ ಕಷ್ಟ ಪರಿಹಾರ ಎಂಬ ನಂಬಿಕೆಯ ಸಂಪ್ರದಾಯ ನಮ್ಮಲ್ಲಿ ಇದೇ ಎಂದು ದಾಸಯ್ಯರಲ್ಲಿ ಒಬ್ಬರಾದ ಹಿರಣ್ಣಯ್ಯ ತಿಳಿಸಿದರು.

ಶಿವನಿಗಾಗಿ ಶಂಖದ ಸ್ವರಣೆ ತೃಪ್ತಿಕೊಡುವಂಥದ್ದು. ಮೂರು ತರಹದ ಸ್ವರಗಳನ್ನು ಇಲ್ಲಿ ನುಡಿಸಲಾಗುತ್ತದೆ. ಕೃಷ್ಣ ಸ್ಮರಣೆ, ಶಿವನ ಸ್ವರಣ ಮತ್ತು ಗೋವಿಂದ ನಾಮ ಅಂಕಿತ ಶಿವನಿಗೆ ಹೆಚ್ಚು ಪ್ರಿಯವಾದ ಶಿವನ ಸ್ವರವನ್ನು ಈ ಉತ್ಸವಕ್ಕೆ ನುಡಿಸುತ್ತೇವೆ. ಎಲ್ಲರಿಗೂ ಒಳ್ಳೆದಾಗಲಿ ಎಂಬ ಉದ್ದೇಶ ಸಲುವಾಗಿ ಇಲ್ಲಿ ಬಂದು ಸ್ವಾಮಿಯ ಸ್ಮರಣೆ ಮಾಡುತ್ತೇವೆ. ನಮಗೆ ಒಂದೂತ್ತು ಊಟ ಮಾಡುವ ಭಾಗ್ಯ ಮಂಜುನಾಥೇಶ್ವರ ಕರುಣಿಸಿದ್ದಾನೆ. ಅದರ ಸಲುವಾಗಿ ಅವನ ಕಾಯಕ ಮಾಡುತ್ತೇವೆ. ಆತ್ಮತೃಪ್ತಿಗಾಗಿ ನಾವು ಇಲ್ಲಿ ಪ್ರತಿ ವರ್ಷವೂ ಶ್ರೀ ದೇವರ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ತಿರುಪತಿ,ಶೃಂಗೇರಿ,ಉಡುಪಿ ಇತರೆಡೆಗೂ ನಾವು ಶ್ರೀ ದೇವರದರ್ಶನ ಮಾಡಿ ಬರುತ್ತೇವೆ ಎಂದರು.

ತನ್ನ ನಂಬಿಕೊಂಡು ಬಂದ ಭಕ್ತರ ಅಭೀಷ್ಟೆಗಳನ್ನು ಪೂರೈಸುವ ಮಂಜುನಾಥನಿಗೆ ಪ್ರತಿ ವರ್ಷವೂ ದೈವಿಕ ಉತ್ಸವ ನಡೆಯುತ್ತದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ಹೊಸಕಟ್ಟೆ ಉತ್ಸವ, ಕರೆಕಟ್ಟೆಉತ್ಸವ, ಗೌರಿ ಮಾರುಕಟ್ಟೆ ಉತ್ಸವ,ಕಂಚಿ ಮಾರುಕಟ್ಟೆಉತ್ಸವ, ಪ್ರಮುಖವಾದವುಗಳು.ರಾತ್ರಿ ದೇಗುಲದಲ್ಲಿ ಪೂಜೆ ಪುನಸ್ಕಾರದೊಂದಿಗೆ ಲಕ್ಷದೀಪೋತ್ಸವ ನಡೆಯುತ್ತವೆ.

ಈ ಎಲ್ಲಾ ಉತ್ಸವಗಳಲ್ಲಿ ಶಿವಪಂಚಾಕ್ಷರಿ ಜಪಿಸಿ ವಾದ್ಯಗಳ ಮೂಲಕ ಶ್ರೀ ಮಂಜುನಾಥ ಸ್ವಾಮಿಯ ಉತ್ಸವದಲ್ಲಿ ಸತತ ಇಪ್ಪತ್ತು ವರ್ಷಗಳಿಂದ ಶ್ರೀ ದೇವರ ಸಾನಿಧ್ಯಕ್ಕೆ ಸೇವೆಯನ್ನು ದಾಸಯ್ಯ ಸಮೂಹ ತಂಡವು ಸಲ್ಲಿಸುತ್ತಿದೆ.

 

See also  ಶ್ರದ್ಧೆ, ಪರಿಶ್ರಮ, ತನ್ಮಯತೆಗಳೇ ಯಶಸ್ವೀ ಸಾಧನೆಯ ಮೂಲ ತಳಹದಿ: ಪ್ರೊ. ಸುಶೀಲಾ ಆರ್. ರೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು