News Kannada
Monday, October 03 2022

ಕರಾವಳಿ

ಕೃಷಿಕರೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವವರು: ರಾಜೇಂದ್ರ ಕುಮಾರ್ - 1 min read

Photo Credit :

ಕೃಷಿಕರೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವವರು: ರಾಜೇಂದ್ರ ಕುಮಾರ್

ಬೆಳ್ತಂಗಡಿ: ದೇಶದ ಇತಿಹಾಸದಲ್ಲೇ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಕಳೆದ 22 ವರ್ಷಗಳಿಂದ ಕೃಷಿ ಸಾಲ ವಸೂಲಾತಿ ಎಂಬುದೇ ಇಲ್ಲ. ಕೃಷಿಕರೇ ಸಮಯಕ್ಕೆ ಸರಿಯಾಗಿ ಸಾಲವನ್ನು ಮರು ಪಾವತಿಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ ಎನ್ ರಾಜೇಂದ್ರ ಕುಮಾರ್ ಹೇಳಿದರು.

ಕೃಷಿಕರ ವ್ಯವಹಾರ ಪಾರದರ್ಶಕತೆಗೆ ಎರಡು ವರ್ಷದ ಹಿಂದೆಯೇ ರೂಪೇ ಡೆಬಿಟ್ ಕಾರ್ಡ್ ನ್ನು ಸಹಕಾರಿಗಳಿಗೆ ನೀಡಿದ ಕೀರ್ತಿ ದ.ಕ ಜಿಲ್ಲಾ ಸಹಕಾರಿ ಕ್ಷೇತ್ರಕ್ಕಿದೆ ಎಂದರು.

ರಾಜ್ಯ ಸಹಕಾರಿ ಮಹಾ ಮಂಡಲ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್, ಬೆಳ್ತಂಗಡಿ ತಾಲೂಕಿನ ಎಲ್ಲಾ ಕೃಷಿಪತ್ತಿನ ಸಹಕಾರ ಸಂಘಗಳು, ಪ್ರಾಥಮಿಕ ಸಹಕಾರ ಸಂಘಗಳು, ಉಜಿರೆ ರಬ್ಬರ್ ಸೊಸೈಟಿ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಹಭಾಗಿತ್ವದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘ ಉಜಿರೆ ಇವರ ಆಶ್ರಯದಲ್ಲಿ ಶನಿವಾರ ಉಜಿರೆ ಶ್ರೀಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ನಡೆದ 64ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2017 ಇದರ ಅಂಗವಾಗಿ ತಾಂತ್ರಿಕ ಜಾಗೃತಿ ಮತ್ತು ನಗದುರಹಿತ ಪಾವತಿ ಮೂಲಕ ಆರ್ಥಿಕ ಸೇರ್ಪಡೆಯಲ್ಲಿ ಸಹಕಾರ ಸಂಘಗಳ ಪಾತ್ರದ ಬಗ್ಗೆ ಮತ್ತು ಡಾ| ಎಂ.ಎನ್ ರಾಜೇಂದ್ರ ಕುಮಾರ್ ಮತ್ತು ಶಾಸಕ ಕೆ. ವಸಂತ ಬಂಗೇರ ಇವರಿಗೆ ನಡೆದ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಅವಕಾಶಗಳು ತಮ್ಮಷ್ಟಕ್ಕೆ ಹುಡುಕಿಕೊಂಡು ಬರುತ್ತದೆ ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಸಹಕಾರಿ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ತಲುಪಲು ಸಹಕಾರಿ ಬಂಧುಗಳೇ ನನಗೆ ಅವಕಾಶ ಕೊಟ್ಟಿದ್ದು ನನ್ನ ಬದುಕನ್ನು ಸಹಕಾರಿ ಬಂಧುಗಳಿಗಾಗಿ ಮುಡುಪಾಗಿಸಲು ಸಿದ್ದ ಎಂದರು.

1999ರಲ್ಲಿ ನವೋದಯ ಸ್ವಸಹಾಯ ಗುಂಪುಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದ್ದರು. ಈಗ ಈ ಗುಂಪುಗಳು ಇಂದು ಉತ್ತಮ ಸಾಧನೆಯನ್ನು ಮಾಡುತ್ತಿದ್ದೇವೆ ಎಂದರು.

ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತರ ಸಾಲ ಮನ್ನ ಬಾಕಿಯನ್ನು ಇತರ ಶಾಸಕರೊಂದಿಗೆ ಚರ್ಚಿಸಿ, ಒತ್ತಾಯಿಸಿ ಒದಗಿಸಲು ಪ್ರಯತ್ನಿಸುತ್ತೇನೆ. ಸಹಕಾರಿ ಸಂಘಗಳು ಆದಿಯಿಂದ ಅಂತ್ಯದವರೆಗೂ ರೈತರು ಮತ್ತು ಜನಸಾಮಾನ್ಯರೊಂದಿಗೆ ಇರಬೇಕು ಎಂದರು.

ಧ.ಮ ಎಜುಕೇಶನಲ್ ಸೊಸೈಟಿ ಉಜಿರೆ ಇದರ ಕಾರ್ಯದರ್ಶಿ ಡಾ| ಬಿ ಯಶೋವರ್ಮ ಅಭಿನಂದನಾ ಭಾಷಣ ಮಾಡಿ ಬದುಕಿನ ಪರದಿಯನ್ನು ವಿಸ್ತರಿಸಲು ಸಮಾಜದ ಏಳಿಗೆಗೆ ಚಿಂತಿಸಬೇಕು ಪರಿಶ್ರಮ ಪಟ್ಟು ಮೇಲಕ್ಕೇರಿದಾಗ ಆಗುವ ಸಂತೋಷ ಅಪಾರ. ಇಂದು ಡಾ| ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಶಾಸಕ ಕೆ. ವಸಂತ ಬಂಗೇರ ಸಮಾಜಕ್ಕಾಗಿ ಜೀವನವನ್ನು ಮುಡಿಪಾಗಿಸಿದ ಪರಿಣಾಮವಾಗಿ ಇಂದು ಸನ್ಮಾನ ಸ್ವೀಕರಿಸಲು ಯೋಗ್ಯರಾಗಿದ್ದಾರೆ ಎಂದರು.

See also  ಹಿಂದೂ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಲು ಮನವಿ

ಇದೇ ಸಂದರ್ಭದಲ್ಲಿ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ವಸಂತ ಬಂಗೇರ ದಂಪತಿಯನ್ನು ಸಹಕಾರಿ ಸಂಘಗಳ ಪರವಾಗಿ ಅಭಿನಂದಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು