News Kannada
Monday, October 03 2022

ಕರಾವಳಿ

ಸುಳ್ಯದಲ್ಲಿ ಡಬಲ್ ಮರ್ಡರ್ ಪ್ರಕರಣ: ಆರೋಪಿಗೆ 10 ವರ್ಷ ಶಿಕ್ಷೆ - 1 min read

Photo Credit :

ಸುಳ್ಯದಲ್ಲಿ ಡಬಲ್ ಮರ್ಡರ್ ಪ್ರಕರಣ: ಆರೋಪಿಗೆ 10 ವರ್ಷ ಶಿಕ್ಷೆ

ಪುತ್ತೂರು: 2013ರಲ್ಲಿ ಸುಳ್ಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು 20 ಸಾವಿರ ರೂ.ದಂಡ ವಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಘಟನೆ ವಿವರ: ಸುಳ್ಯ ಕಸಬಾ ಗ್ರಾಮದ ನಾರಾಜೆ ನಿವಾಸಿ ಹರೀಶ್ ನಾಯ್ಕ ಅವರ ಪತ್ನಿ ಪದ್ಮಾವತಿ ಮತ್ತು ಟಿಪ್ಪರ್ ಚಾಲಕ ಹಿತೇಶ್ ಬರ್ಬರವಾಗಿ ಹತ್ಯೆಗೀಡಾದವರು. ಆ ಸಂದರ್ಭದಲ್ಲಿ ತಳ್ಳುಗಾಡಿ ವ್ಯಾಪಾರಿಯಾಗಿದ್ದು ಕೂಲಿ ಕೆಲಸವನ್ನೂ ಮಾಡುತ್ತಿದ್ದ ಅಜ್ಜಾವರ ಗ್ರಾಮದ ಮುಳಿಯ ನಿವಾಸಿ ವಸಂತ ಶೇರಿಗಾರ್ ಹತ್ಯೆಗೈದ ಅಪರಾಧಿಯಾಗಿ ಇದೀಗ ಶಿಕ್ಷೆಗೊಳಗಾದಾತ. ವಸಂತ ಮನೆ ಕೆಲಸ ಇತ್ಯಾದಿಗಳಿಗಾಗಿ ಹರೀಶ್ ನಾಯ್ಕ ಮನೆಗೆ ಬರುತ್ತಿದ್ದು ಅವರ ಸ್ನೇಹ ಸಂಪಾದಿಸಿದ್ದ. ಇದೇ ಸ್ನೇಹ ಮುಂದುವರಿದು ಪದೇ ಪದೇ ಮನೆಗೆ ಬಂದು ಹೋಗುತ್ತಿದ್ದ ವಸಂತ ಅದೇ ವೇಳೆ ಹರೀಶ್ ನಾಯ್ಕ ಪತ್ನಿ ಪದ್ಮಾವತಿ ಅವರ ಸ್ನೇಹವನ್ನೂ ಬೆಳೆಸಿಕೊಂಡಿದ್ದು ಮಾತ್ರವಲ್ಲದೆ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ.

ಹರೀಶ್ ನಾಯ್ಕ್ ಗೆ ಹೊಸ ಮನೆಯನ್ನು ಕಟ್ಟಲು ನೆಲ ಸಮತಟ್ಟು ಮಾಡಲು ಬರುವಂತೆ ಕೇಳಿಕೊಂಡಿದ್ದ ಕೆಲಸಕ್ಕೆ ವಸಂತ ಹೋಗಿದ್ದ. 2013ರ ಡಿ.29ರಂದು ಹರೀಶ್ ನಾಯ್ಕ ಮನೆಗೆ ಹಿಟಾಚಿ ಮತ್ತು ಮಣ್ಣು ಸಾಗಿಸಲು ಟಿಪ್ಪರ್ ಬಂದಿತ್ತು. ಟಿಪ್ಪರ್ ಚಾಲಕ ಹಿತೇಶ್ ಗೂ ಪದ್ಮಾವತಿಯವರೊಂದಿಗೆ ಸ್ನೇಹ ಬೆಳೆದು ಅವರೀರ್ವರೂ ಹತ್ತಿರವಾಗತೊಡಗಿದರು. ಅವರಿಬ್ಬರ ಸ್ನೇಹದಿಂದ ಸಿಟ್ಟುಕೊಂಡಿದ್ದ ವಸಂತ್ ಸೀದಾ ಮನೆಗೆ ಬಂದು ಕೊಡಲಿಯೊಂದನ್ನು ಕೊಂಡು ಹೋಗಿ ಹಿತೇಶ್ ಮತ್ತು ಪದ್ಮಾವತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ತಲೆಗೆ ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿತ್ತು.

ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸರು ಆರೋಪಿ ವಸಂತ ಶೇರಿಗಾರನನ್ನು ಬಂಧಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ.18ರಂದು ಘೋಷಿಸಿತ್ತು. ಇದೀಗ ಅಪರಾಧಿಗೆ 10 ವರ್ಷಗಳ ಕಠಿಣ ಸಜೆ ಮತ್ತು ರೂ. 20 ಸಾವಿರ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಕಾಲ ಸಾದಾ ಸೆರೆಮನೆ ವಾಸ ಅನುಭವಿಸುವಂತೆ ಆದೇಶಿಸಿದೆ. ಸರಕಾರದ ಪರ ಸರಕಾರಿ ಅಭಿಯೋಜಕ ಉದಯ ಕುಮಾರ್ ಎಂ. ವಾದಿಸಿದ್ದರು.

See also  24ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಂತರಾಜ್ಯ ಕಳ್ಳರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

188
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು