News Kannada
Saturday, October 01 2022

ಕರಾವಳಿ

ಕೋರ್ಟ್ ಆದೇಶದಂತೆ ಮತ್ತೆ ರಸ್ತೆಗಿಳಿದ ಖಾಸಗಿ ಬಸ್ - 1 min read

Photo Credit :

ಕೋರ್ಟ್ ಆದೇಶದಂತೆ ಮತ್ತೆ ರಸ್ತೆಗಿಳಿದ ಖಾಸಗಿ ಬಸ್

ಉಳ್ಳಾಲ: ರಾಜಕೀಯ ದುರುದ್ದೇಶದಿಂದ ಕಳೆದ ನಾಲ್ಕು ತಿಂಗಳಿನಿಂದ ತಡೆಹಿಡಿಯಲಾಗಿದ್ದ ಸ್ಟೇಟ್ ಬ್ಯಾಂಕ್ -ತೌಡುಗೋಳಿ ನಡುವೆ ಚಲಿಸುವ ಖಾಸಗಿ ಬಸ್ಸಿಗೆ, ಅದರ ಮಾಲೀಕರ ನಿರಂತರ ಹೋರಾಟದ ಫಲವಾಗಿ ನ್ಯಾಯ ದೊರಕಿದ್ದು, ಶುಕ್ರವಾರ ಮತ್ತೆ ಆರಂಭಗೊಂಡ ಬಸ್ಸನ್ನು ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು.

ಬಿಜೆಪಿ ಮುಖಂಡರಾಗಿರುವ ತೌಡುಗೋಳಿ ನಿವಾಸಿ ಉದಯ ಕುಮಾರ್ ಶೆಟ್ಟಿ ಕಳೆದ ಮೂರು ವರ್ಷಗಳಿಂದ ಬಲೆತ್ತೋಡು ಹೆಸರಿನ ಬಸ್ಸನ್ನು ಚಲಾಯಿಸುತ್ತಿದ್ದಾರೆ. ತೌಡುಗೋಳಿಯಿಂದ ಸ್ಟೇಟ್ ಬ್ಯಾಂಕ್ ಗೆ ತೆರಳುವ ಬಸ್ಸಿನ ಪರವಾನಿಗೆ ಬಹಳ ಹಿಂದಿನದ್ದಾಗಿದೆ. ಹಿಂದೆ ತೌಡುಗೋಳಿಯಿಂದ ಕೋಟೆಕಾರು- ಬೀರಿ ಮೂಲಕ ಮಂಗಳೂರು ತಲುಪುತ್ತಿದ್ದ ಬಸ್ಸಿನಲ್ಲಿ ನಷ್ಟ ಉಂಟಾಗುತ್ತಿದ್ದುದರ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಕೋರಿ ದೇರಳಕಟ್ಟೆ, ಕುತ್ತಾರು ಮಾರ್ಗವಾಗಿ ಮಂಗಳೂರು ತಲುಪುವಂತೆ ಆದೇಶ ಪಡೆಯುವಲ್ಲಿ ಸಫಲರಾಗಿದ್ದರು. ಆ ಬಳಿಕ ಬಸ್ಸು ಸಂಚರಿಸುತ್ತಿದ್ದು ಏಕಾಏಕಿ ಇತರೆ ಖಾಸಗಿ ಬಸ್ಸು ಮಾಲೀಕರು ವಿವಿಧ ಕಾರಣಗಳನ್ನು ಒಡ್ಡಿ ಆರ್ ಟಿಓ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ ಬಸ್ಸು ಸಂಚರಿಸದಂತೆ ನಾಲ್ಕು ತಿಂಗಳ ಹಿಂದೆ ತಡೆಯೊಡ್ಡಿದ್ದರು. ಆದರೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ, ಯಾವುದೇ ಲೋಪವಿಲ್ಲದ ತೆರಳುತ್ತಿದ್ದ ಬಸ್ಸನ್ನು ತಡೆಹಿಡಿದಿರುವ ವಿರುದ್ಧ ಬಸ್ಸು ಮಾಲೀಕರು ಹಾಗೂ ಗ್ರಾಮಸ್ಥರು ಸೇರಿ ಸಾರಿಗೆ ಅಧಿಕಾರಿಗಳನ್ನು ಭೇಟಿ ಮಾಡಿ ಎಲ್ಲಾ ದಾಖಲೆಗಳನ್ನು ನೀಡಿದ್ದರು. ಆದರೂ ಸಾರಿಗೆ ಅಧಿಕಾರಿ ಒಪ್ಪದೇ ಇದ್ದಾಗ ಕಡೆಯದಾಗಿ ಜಿಲ್ಲಾಧಿಕಾರಿಯವರನ್ನು ಬಸ್ಸು ಮಾಲೀಕರು ಭೇಟಿಯಾದರು.

ಆದರೆ ಅಲ್ಲಿಯೂ ಜಿಲ್ಲಾಧಿಕಾರಿಯಿಂದ ನಕಾರಾತ್ಮಕ ಉತ್ತರ ದೊರೆತಿತ್ತು. ಜನಪ್ರತಿನಿಧಿಗಳ ಮೂಲಕ ಕೇಳಿದರೂ ಜಿಲ್ಲಾಧಿಕಾರಿ ಅನುಮತಿ ನೀಡದೆ ಸತಾಯಿಸುತ್ತಲೇ ಬಂದರು. ಆ ವೇಳೆಗಾಗಲೇ ಬಸ್ಸು ಮಾಲೀಕರು ಲಕ್ಷಾಂತರ ರೂ.ಗಳನ್ನು ಸಾಲ ಮಾಡಿಯೂ ಬಸ್ಸಿಗಾಗಿ ವ್ಯಯಿಸುತ್ತಾ ಬಂದರು. ಕಡೆಯದಾಗಿ ಹೋರಾಟ ತೀವ್ರಗೊಳಿಸಿದಾಗ ಜಿಲ್ಲಾಧಿಕಾರಿಗಳೇ ತಮ್ಮ ಮೇಲೆ ಕೆಲವರಿಂದ ಒತ್ತಡ ಇರುವುದರಿಂದ ನೀಡಲು ಅಸಾಧ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶವಿರುವಾಗ ಜಿಲ್ಲಾಧಿಕಾರಿಯಿಂದ ತಡೆಯಲು ಅಸಾಧ್ಯ ಎಂದರಿತ ಮಾಲೀಕರು ನ್ಯಾಯಾಲಯದ ಆದೇಶದ ವಿರುದ್ಧವೇ ಅಧಿಕಾರಿಗಳು ನಡೆಯುತ್ತಿದ್ದಾರೆಂದು ನ್ಯಾಯಾಂಗ ನಿಂದನೆ ದೂರು ನೀಡುವ ನೊಟೀಸು ಜಾರಿಗೊಳಿಸುತ್ತಿದ್ದಂತೆ, ಕೂಡಲೇ ಬಸ್ಸು ತೆರಳುವಂತೆ ಅನುಮತಿಯನ್ನು ನೀಡಿದ್ದಾರೆ. ಅದರಂತೆ ಶುಕ್ರವಾರ ತೌಡುಗೋಳಿ ಜಂಕ್ಷನ್ ನಲ್ಲಿ ಎಲ್ಲಾ ಸಮುದಾಯದವರು ಸೇರಿದ ಗ್ರಾಮಸ್ಥರ ಸಮ್ಮುಖದಲ್ಲಿ ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿದಿ ಬಸ್ಸಿಗೆ ಅದ್ದೂರಿ ಚಾಲನೆ ನೀಡಲಾಯಿತು.

ಸ್ಥಳೀಯ ಮುಖಂಡರುಗಳಾದ ಟಿ.ಜಿ.ರಾಜಾರಾಂ ಭಟ್, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ನಾರಾಯಣ ಶೆಟ್ಟಿ ಬಲೆತ್ತೋಡು, ನವೀನ್ ಶೆಟ್ಟಿ ಮಂದಲ್ಪಾಡಿ , ಬಸ್ಸು ಮಾಲೀಕ ಉದಯಕುಮಾರ್ ಶೆಟ್ಟಿ, ಚಂದ್ರಹಾಸ್ ಎನ್, ಗಿರೀಶ್ ಆಳ್ವ ಗರೋಡಿ, ಚಂದ್ರಶೇಖರ ಶೆಟ್ಟಿ ಮರಿಪ್ಪಳ, ಜಗದೀಶ ಆಳ್ವ ಕುವೆತ್ತಬೈಲು, ನಂದರಾಜ ಶೆಟ್ಟಿ ಪಿಜಿನಬೈಲು, ಪ್ರೇಮಾನಂದ ರೈ ನೆತ್ತಿಲಕೋಡಿ, ವಿಶ್ವನಾಥ ಶೆಟ್ಟಿ ಮೋರ್ಲ, ಮುರಳೀಧರ ಶೆಟ್ಟಿ , ಆನಂದ ನೀರೊಳಿಕೆ, ಭಾಗ್ಯ ತಲಪಾಡಿ, ಹರಿಣಾಕ್ಷಿ ಕೊರಗಪ್ಪ, ನಳಿನಾಕ್ಷಿ ನೆತ್ತಿಲ, ಸಿರಾಜ್ ತೌಡುಗೋಳಿ, ಹಮೀದ್ ಎಸ್. ಶಾಂತಿಪಳಿಕೆ, ಪುನೀತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

See also  ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ನ 2ನೇ ದಿನ ಗಮನ ಸೆಳೆದ ಟ್ರಿನಿಟಿ `ನಾದ ಮಾಧುರ್ಯ'

ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಕೆಲ ಬಸ್ಸು ಮಾಲೀಕರ ಮನಸ್ಸು ಸಂತೃಪ್ತಿಗೊಳಿಸುವ ಸಲುವಾಗಿ ಆರ್ ಟಿಓ ಮೂಲಕ ಪೊಲೀಸರಿಗೆ ಸೂಚಿಸಿ ಕಾನೂನುಬದ್ಧವಾಗಿ ರಸ್ತೆಗಿಳಿದಂತಹ ಬಸ್ಸನ್ನು ತಡೆಹಿಡಿದಿರುವುದು ಜನಪ್ರತಿನಿಧಿಯ ದ್ವೇಷ ರಾಜಕೀಯವಾಗಿದೆ. ಇದು ಸ್ವತ: ಜಿಲ್ಲಾಧಿಕಾರಿಯವರೇ ಈ ಹಿಂದೆ ತಿಳಿಸಿರುವುದು ದುರಾದೃಷ್ಟ. ಗ್ರಾಮೀಣ ಭಾಗದ ಬಡ ಜನ, ಶಾಲಾ ಮಕ್ಕಳು, ಮಹಿಳೆಯರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸಂಚರಿಸುತ್ತಿದ್ದ ಬಸ್ಸನ್ನು ಉದ್ದೇಶಪೂರ್ವಕವಾಗಿ ಖೇದಕರ. ಆದರೆ ಪಟ್ಟು ಬಿಡದ ಬಸ್ಸು ಮಾಲೀಕರು ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಾ, ದುಡಿದ ಹಣವನ್ನೆಲ್ಲಾ ವ್ಯಯಿಸುತ್ತಾ ಜನಪ್ರತಿನಿಧಿಗಳ ಧೋರಣೆಯಿಂದ ಅಧಿಕಾರಿಗಳಿಂದ ಆಗುವುದಿಲ್ಲವೆಂದಾಗ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪರಿಣಾಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.

ಉಚಿತ ಸೇವೆ
ನ್ಯಾಯಯುತ ಹೋರಾಟಕ್ಕೆ ಸಿಕ್ಕ ಜಯಕ್ಕಾಗಿ ಇಂದು ಎರಡು ಟ್ರಿಪ್ ಗಳಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲಾಗುತ್ತಿದೆ. ಗ್ರಾಮದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯತ್ತಿನಲ್ಲಿ ಬಸ್ಸನ್ನು ಚಲಾಯಿಸುತ್ತಿದ್ದೇನೆ. ಬಸ್ಸಿಗಾಗಿ ಸಾಕಷ್ಟು ನೊಂದಿದ್ದೇನೆ. ಕೆಲಸ ಕಾರ್ಯವನ್ನು ಬಿಟ್ಟು ಬಹಳಷ್ಟು ತೊಂದರೆಯನ್ನು ಅನುಭವಿಸಿದ್ದೇನೆ. ಮುಂದೆ ಜನಸಾಮಾನ್ಯರಿಗೆ ದುರುದ್ದೇಶವನ್ನು ಇಟ್ಟುಕೊಂಡು ತೊಂದರೆ ಮಾಡದರಿ ಎಂದು ಬಸ್ಸು ಮಾಲೀಕ ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

184
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು