News Kannada
Monday, October 03 2022

ಕರಾವಳಿ

ಸುಳ್ಯ ನಗರ ಪಂಚಾಯತ್ ಗಿಡ ಕಿತ್ತೆಸೆದ ಪ್ರಕರಣ ಖಂಡಿಸಿದ ಕಾಂಗ್ರೆಸ್ - 1 min read

Photo Credit :

ಸುಳ್ಯ ನಗರ ಪಂಚಾಯತ್ ಗಿಡ ಕಿತ್ತೆಸೆದ ಪ್ರಕರಣ ಖಂಡಿಸಿದ ಕಾಂಗ್ರೆಸ್

ಸುಳ್ಯ: ಸುಳ್ಯ ನಗರ ಪಂಚಾಯತಿಯ ಸ್ವಚ್ಚ ಭಾರತ್ ಮಿಷನ್ ರಾಯಭಾರಿಯಾಗಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ತಮ್ಮ ಮನೆಯ ಆವರಣ ಹೊಂದಿಕೊಂಡಿರುವ ಪ.ಪಂ. ನ ಗಡಿಭಾಗದ ಖಾಲಿ ಜಾಗದಲ್ಲಿ ನೆಟ್ಟ ಗಿಡಗಳನ್ನು ನಗರ ಪಂಚಾಯಿತಿಯವರು ಕಿತ್ತೆಸೆದಿರುವ ಪ್ರಕರಣವನ್ನು ಕಾಂಗ್ರೆಸ್ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಎಂ.ವೆಂಕಪ್ಪ ಗೌಡ, ಡಾ.ಚಿದಾನಂದ ಅವರು ನೆಟ್ಟ ಗಿಡಗಳನ್ನು ಕಿತ್ತು ಬಿಸಾಡುವ ಬದಲು ಅವರ ಜೊತೆಯಲ್ಲಿ ಮಾತನಾಡುವ ಕನಿಷ್ಠ ಸೌಜನ್ಯವನ್ನಾದರೂ ನಗರ ಪಂಚಾಯಿತಿ ಆಡಳಿತ ಮಾಡಬೇಕಿತ್ತು. ಏಕಾಏಕಿ ಗಿಡಗಳನ್ನು ಕಿತ್ತು ಬಿಸಾಡಿರುವ ಘಟನೆ ಮತ್ತು ಇದರಿಂದ ಬೇಸರಗೊಂಡು ಡಾ.ಕೆ.ವಿ.ಚಿದಾನಂದ ಅವರು ಸ್ವಚ್ಛತಾ ರಾಯಭಾರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವುದು ನೋವಿನ ಸಂಗತಿ. ಸುಳ್ಯವನ್ನು ಸ್ವಚ್ಛ ನಗರವಾಗಿಸಬೇಕೆಂದು ಡಾ.ಚಿದಾನಂದರು ನಿರಂತರ ಪ್ರಯತ್ನ ನಡೆಸಿದ್ದರು. ಗಿಡ ಕಿತ್ತೆಸೆದ ಘಟನೆಯ ಬಗ್ಗೆ ಬಿಜೆಪಿಯವರಾಗಲೀ, ಬಿಜೆಪಿ ಸದಸ್ಯರಾಗಲೀ ಚಕಾರವೆತ್ತದೇ ಇರುವುದು ಬಿಜೆಪಿಯ ಅಧಿಕಾರದ ದರ್ಪವನ್ನು ತೋರಿಸುತ್ತಿದೆ ಎಂದು ದೂರಿದ ಅವರು ಈ ರೀತಿ ಅಧಿಕಾರದ ದರ್ಪವನ್ನು ಜನರು ಹೆಚ್ಚು ಕಾಲ ಸಹಿಸುವುದಿಲ್ಲ ಎಂದರು.

ನಗರ ಅವ್ಯವಸ್ಥೆಯ ಆಗರ
ಸುಳ್ಯ ನಗರ ಪಂಚಾಯಿತಿ ಅವ್ಯವಸ್ಥೆಯ ಆಗರವಾಗಿದೆ ಎಂದು ವೆಂಕಪ್ಪ ಗೌಡರು ದೂರಿದರು. ನ.ಪಂ.ವ್ಯಾಪ್ತಿಯ ಎಲ್ಲಾ ರಸ್ತೆಗಳೂ ಸಂಪೂರ್ಣ ಹದಗೆಟ್ಟು ಹೋಗಿದೆ. ಕಳೆದ ಎರಡು ವರ್ಷಗಳಿಂದ ರಸ್ತೆಗಳಿಗೆ ಕನಿಷ್ಠ ತೇಪೆಯನ್ನೂ ಮಾಡಿಲ್ಲ. ಕೆವಿಜಿ ಕ್ಯಾಂಪಸ್ ಬಳಿಯ ಸರ್ಕಲ್ ನಲ್ಲಿ ಎರಡು ಬಾರಿ ಇಂಟರ್ಲಾಕ್ ಹಾಕಿದರೂ ಅದು ಎದ್ದು ಹೋಗಿದ್ದು ನಡೆದಾಡಲೂ ಸಾಧ್ಯವಿಲ್ಲದಂತಾಗಿದೆ. 2003ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ 2017 ಆದರೂ ಇನ್ನೂ ಪೂರ್ತಿಯಾಗಿಲ್ಲ. ನಗರದ ಕೊಳಚೆ ನೀರು ಪಯಸ್ವಿನಿ ನದಿಗೆ ಸೇರುತಿರುವುದರ ಬಗ್ಗೆ ಇನ್ನೂ ಕ್ರಮ ಕೈಗೊಂಡಿದೆ. ಅಲ್ಲಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದರೂ ಇದ್ಯಾವುದನ್ನೂ ಗಮನಿಸದೆ ನಗರ ಪಂಚಾಯಿತಿ ಆಡಳಿತ ನಿದ್ರೆ ಮಾಡುತಿದೆ. ನಗರ ಪಂಚಾಯಿತಿ ಆಡಳಿತ ಇದೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ ಎಂದು ಅವರು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಡಾ.ಬಿ.ರಘು, ಡಿಸಿಸಿ ಉಪಾಧ್ಯಕ್ಷ ಭರತ್ ಮುಂಡೋಡಿ, ಡಿಸಿಸಿ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಸುಳ್ಯ ನಗರ ಪಂಚಾಯಿತಿ ಸದಸ್ಯರಾದ ಕೆ.ಗೋಕುಲ್ ದಾಸ್, ಪ್ರೇಮ ಟೀಚರ್ ಉಪಸ್ಥಿತರಿದ್ದರು.

See also  ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೇ ಮಾದರಿಯ ಅಭಿವೃದ್ಧಿ: ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು