ಬೆಳ್ತಂಗಡಿ: ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಬೆಳ್ತಂಗಡಿ ಪೋಲಿಸರು ಮಾಂಸ ಹಾಗೂ ವಾಹನ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.
ಆಟೋ ರಿಕ್ಷಾದಲ್ಲಿ ಸುಮಾರು 50 ಕೆ.ಜಿ. ಗೋಮಾಂಸವನ್ನು ತಾಲೂಕಿನ ಕೊಲ್ಲಿ ಎಂಬಲ್ಲಿಂದ ನಾವೂರು ಕಡೆಗೆ ಸಾಗಾಟಮಾಡುತ್ತಿದ್ದಾಗ ಇಂದಬೆಟ್ಟು ಎಂಬಲ್ಲಿ ಪೋಲಿಸರು ಪತ್ತೆ ಹಚ್ಚಿದ್ದಾರೆ. ಸಾಗಾಟ ಮಾಡುತ್ತಿದ್ದ ಇಂದಬೆಟ್ಟು ನಿವಾಸಿಗಳಾದ ಶಬೀರ್ (26) ಹಾಗೂ ಶೇಕಬ್ಬ (65) ಎಂಬುವರನ್ನು ಬಂಧಿಸಲಾಗಿದೆ.
ಆಟೋ ರಿಕ್ಷಾ ಹಾಗು ಮಾಂಸವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.