News Kannada
Wednesday, October 05 2022

ಕರಾವಳಿ

ಜನರ ನಡುವಿನ ಅಪನಂಬಿಕೆ ನಿವಾರಣೆಗೆ ಸಾಮರಸ್ಯ ನಡಿಗೆ: ರೈ - 1 min read

Photo Credit :

ಜನರ ನಡುವಿನ ಅಪನಂಬಿಕೆ ನಿವಾರಣೆಗೆ ಸಾಮರಸ್ಯ ನಡಿಗೆ: ರೈ

ಬೆಳ್ತಂಗಡಿ: ದ.ಕ.ಜಿಲ್ಲೆಯಲ್ಲಿ ನಡೆದ ಹತ್ಯೆಗಳಲ್ಲಿ ಭಾಗವಹಿಸಿದ ಸಂಘಟನೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸಂಘಟನೆಗಳು ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಜಾತ್ಯತೀತ ಪಕ್ಷ ಸಂಘಟನೆಗಳ ಸಹಭಾಗಿತ್ವದಲ್ಲಿ ಡಿ.12ರಂದು ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯುವ ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ ಬಗ್ಗೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಬುದ್ದಿವಂತರ, ತಿಳುವಳಿಕೆಯುಳ್ಳ ಜಿಲ್ಲೆಯಲ್ಲಿ ಸಾಮರಸ್ಯ ಯಾಕೆ ಹದೆಗೆಟ್ಟಿದೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಮೇಲ್ನೋಟಕ್ಕೆ ಇಲ್ಲಿ ಶಾಂತಿ ನೆಲೆಸಿದರೂ ಇನ್ನೊಂದು ಕೋಮು ಹತ್ಯೆಯಾದರೆ ವಾತಾವರಣ ಕದಡುವುದು ನಿಶ್ಚಿತ. ಮನುಷ್ಯರ ಮಧ್ಯೆ ಮೂಡಿರುವ ಅಪನಂಬಿಕೆಯನ್ನು ನಿವಾರಿಸಲು ಫರಂಗಿಪೇಟೆಯಿಂದ ನಡಿಗೆಯನ್ನು ಆರಂಭಿಸಲಿದ್ದೇವೆ. ಫಲಕಗಳನ್ನು ಹಿಡಿದು, ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಯಾವುದೇ ಘೊಷಣೆಗಳಿಗೆ ಅವಕಾಶ ಇಲ್ಲದೆ ಮೌನವಾಗಿ ನಡಿಗೆಯನ್ನು ಮಾಡಲಿದ್ದೇವೆ. ಜಾತ್ಯತೀತದಲ್ಲಿ ನಂಬಿಕೆಯುಳ್ಳ ಎಲ್ಲಾ ಪಕ್ಷ, ಸಂಘಟನೆಗಳು ಇದರಲ್ಲಿ ಭಾಗವಹಿಸಲಿವೆ. ದ.ಕ.ಜಿಲ್ಲೆಯಲ್ಲಿ ನಡೆದ ಹತ್ಯೆಗಳಲ್ಲಿ ಭಾಗವಹಿಸಿದ ಸಂಘಟನೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸಂಘಟನೆಗಳು ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸಬಹುದು. ಚುನಾವಣೆಗಾಗಿ ದ.ಕ.ದಲ್ಲಿ ಕೋಮಗಲಭೆ ಉಂಟು ಮಾಡಲಾಗುತ್ತಿದೆ. ಸಾಮರಸ್ಯ ನಡಿಗೆಗೆ ಪಕ್ಷ ಮುಖ್ಯ ಅಲ್ಲ. ಜಿಲ್ಲೆಯ ಸಾಮರಸ್ಯವೇ ಮುಖ್ಯ ಎಂದು ಅವರು ತಿಳಿಸಿದರು.

ಪತ್ರಿಕಾ ಪ್ರತಿನಿಧಿಗಳು ಭಾಗವಹಿಸಿ ಎಂದು ವಿನಂತಿಸಿದ ರೈ ಅವರು, ಇಂದು ಜಾತ್ಯತೀತವಾದಿಗಳು ದೊಡ್ಡ ಸಂಖ್ಯೆಯಲ್ಲಿದ್ದು ಮತೀಯವಾದಿಗಳು ಬೆರಳೆಣಿಕೆಯಲ್ಲಿ ಮಾತ್ರ ಇದ್ದಾರೆ. ಸಾಮರಸ್ಯವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಜನಜಾಗೃತಿ ಮೂಡಿಸುವ ಉದ್ದೇಶದಿಂದ, ಸಂಘಪರಿವಾರಕ್ಕೆ ಪರೋಕ್ಷವಾಗಿ ಸೂಚನೆ ನೀಡುವ ಉದ್ದೇಶದಿಂದ ಈ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿದ್ಯಾರ್ಥಿ ದೆಸೆಯಿಂದ ಸಾಮಾಜಿಕ ಬದುಕಿಗೆ ಒಡ್ಡಿಕೊಂಡವನು ನಾನು. ಅಂದಿನ ಹಳ್ಳಿಗಳಲ್ಲಿ ಜಾತಿಗಳ ನಡುವೆ ವೈಷಮ್ಯ ಇರಲಿಲ್ಲ. ಇತ್ತೀಚೆಗೆ ಮನುಷ್ಯ ಮನುಷ್ಯರ ನಡುವೆ ವರ್ಗ ಸಂಘರ್ಷ ತಂದಿಡುವ ಕೆಲಸವನ್ನು ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ದ್ವೇಷದ ರಾಜಕೀಯ ಹರಡಿಸುತ್ತಿವೆ. ಇದು ಸಾಮರಸ್ಯಕ್ಕೆ ದೊಡ್ಡ ಗಂಡಾಂತರ. ಬುದ್ಧಿವಂತರ ಜಿಲ್ಲೆಯಲ್ಲಿ ಘರ್ಷಣೆ ಮಾಡಿ ಜಿಲ್ಲೆಗೆ ಕಳಂಕ ತರುವ ಕೆಲಸ ನಡೆದಿದೆ ಎಂದು ರೈ ಪ್ರತಿಪಾದಿಸಿದರು.

ಶಾಸಕ ವಸಂತ ಬಂಗೇರ ಮಾತನಾಡಿ, ಕೆಲವು ಮಾಧ್ಯಮಗಳು ಕೂಡಾ ಸಂಯಮದಿಂದ ವರ್ತಿಸಬೇಕು. ಇಲ್ಲ ಸಲ್ಲದ್ದನ್ನು ಇಡೀ ದಿನ ಪ್ರಚಾರ ಮಾಡಬಾರದು. ಬಂಗೇರ ಬಿಜೆಪಿಗೆ ಎಂದು ಅಪಪ್ರಚಾರ ಮಾಡಿದರು. ಸ್ಪಷ್ಟನೆ ನೀಡಿದರೆ ಅದನ್ನು ಸಣ್ಣದಾಗಿ ಹಾಕಿದರು. ನಾನು ಬಿಜೆಪಿಗೆ ಖಂಡಿತಾ ಹೋಗುವುದಿಲ್ಲ. ಬಿಜೆಪಿಗೆ ಹೋಗುವುದು ಎಂದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ ಎಂದರು.

See also  ಸಂಘಟನಾ ಪಕ್ಷವೊಂದಿದ್ದರೆ ಅದು ಬಿಜೆಪಿ ಮಾತ್ರ: ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು