News Kannada
Tuesday, October 04 2022

ಕರಾವಳಿ

ಗ್ಯಾಸ್ ಸೋರಿಕೆಯಿಂದ ಓಮ್ನಿ ಬೆಂಕಿಗಾಹುತಿ - 1 min read

Photo Credit :

ಗ್ಯಾಸ್ ಸೋರಿಕೆಯಿಂದ ಓಮ್ನಿ ಬೆಂಕಿಗಾಹುತಿ

ಮೂಡುಬಿದಿರೆ: ಓಮ್ನಿ ಕಾರಿಗೆ ಅಳವಡಿಸಿದ ಗ್ಯಾಸ್ ಸಿಲಿಂಡರ್ ನ ಪೈಪ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ವಾಹನ ಬೆಂಕಿಗಾಹುತಿಯಾಗಿದ್ದು, ಬೆಂಕಿ ನಂದಿಸಲೆತ್ನಿಸಿದ್ದ ಮನೆ ಮಾಲಕರಿಗೆ ಸುಟ್ಟ ಗಾಯವಾಗಿದೆ.

ಘಟನೆಯಲ್ಲಿ ಮನೆ ಮಾಲಕ ಜಗದೀಶ್ ಜೈನ್ ಅವರಿಗೆ ಸುಟ್ಟ ಗಾಯವಾಗಿದ್ದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರು ಮೂಡುಬಿದಿರೆ ಮಹಾವೀರ ಭವನದಲ್ಲಿ ಮ್ಯಾನೇಜರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಡುಜೊಣಾಜೆ ಎಂಬಲ್ಲಿ ಘಟನೆ ಸಂಭವಿಸಿದೆ.

ಜಗದೀಶ್ ಅವರು ಶುಕ್ರವಾರ ಬೆಳಿಗ್ಗೆ ತನ್ನ ಮನೆ ಆವರಣದಲ್ಲಿ ಆಮ್ನಿ ವಾಹನವನ್ನು ತೊಳೆಯುತ್ತಿದ್ದಾಗ ವಾಹನಕ್ಕೆ ಅಳವಡಿಸಿದ ಗ್ಯಾಸ್ ಸಿಲಿಂಡರ್ ನ ಪೈಪ್ ನಲ್ಲಿ ಗ್ಯಾಸ್ ಸೋರಿಕೆಯಾಗಿತ್ತು. ಹತ್ತಿರದ ಬಚ್ಚಲು ಮನೆಯ ಒಲೆಯಲ್ಲಿ ಬೆಂಕಿ ಉರಿಯುತ್ತಿದ್ದುದರಿಂದ ತಕ್ಷಣ ವಾಹನಕ್ಕೆ ಬೆಂಕಿ ತಗಲಿತು. ಜಗದೀಶ್ ಅವರು ನೀರು ಹಾಯಿಸಿ ಬೆಂಕಿ ನಂದಿಸಲೆತ್ನಿಸಿದಾಗ ಮೈಗೆ ಸುಟ್ಟ ಗಾಯವಾಗಿತ್ತು. ಕಾರಿಗೆ ತಗಲಿದ ಬೆಂಕಿ ನಂತರ ಕೊಟ್ಟಿಗೆಗೆ ವಿಸ್ತರಿಸಿ ಅಲ್ಲಿದ್ದ ಹುಲ್ಲು ಕೂಡ ಭಸ್ಮವಾಗಿದೆ.

ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ಕುಮಾರ್ ನೇತೃತ್ವದ ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿ ಇನ್ನಷ್ಟು ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

See also  ಸಂಸದ ಶಿವರಾಮೇಗೌಡ ವಿರುದ್ಧ ಸೂಕ್ತ ಕ್ರಮ: ಎಚ್. ವಿಶ್ವನಾಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

183
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು