News Kannada
Sunday, September 25 2022

ಕರಾವಳಿ

ಮಕ್ಕಳ ವಿಭಿನ್ನ ಪ್ರತಿಭೆಗೆ ವೇದಿಕೆಯಾದ ಕಲ್ಲಡ್ಕ ಶ್ರೀರಾಮ ಶಾಲೆ - 1 min read

Photo Credit :

ಮಕ್ಕಳ ವಿಭಿನ್ನ ಪ್ರತಿಭೆಗೆ ವೇದಿಕೆಯಾದ ಕಲ್ಲಡ್ಕ ಶ್ರೀರಾಮ ಶಾಲೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ನಿನ್ನೆ ವಿಭಿನ್ನವಾದ ಕಾರ್ಯಕ್ರಮ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. 3500 ಮಕ್ಕಳು ಒಂದೇ ಮೈದಾನದಲ್ಲಿ ಮೂರೂವರೆ ತಾಸುಗಳ ಕಾಲ ಪ್ರಸ್ತುತ ಪಡಿಸಿದ ನೃತ್ಯ, ಪಥಸಂಚಲನ, ಸಾಹಸ ಪ್ರದರ್ಶನ, ಕಸರತ್ತುಗಳನ್ನು ಕಂಡ ನೋಡುಗರು ಮಕ್ಕಳ ಪ್ರತಿಭೆಗೆ ತಲೆದೂಗಿದರು.

ಶನಿವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಆವರಣದಲ್ಲಿ ನಡೆದ  ಕ್ರೀಡೋತ್ಸವ ಮನಮೋಹಕವಾಗಿ ಮೂಡಿಬಂತು.

250 ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ: ಸುಮಾರು 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳಿಂದ ಏಳು ಗುಂಪುಗಳಲ್ಲಿ ಸಂಚಲನ, ಹಾಗೂ ಒಂದು ವಿಶೇಷ ಗುಂಪಲ್ಲಿ ಆಕರ್ಷಕ ಕೋವಿ ಸಂಚಲನ ಕ್ರೀಡೋತ್ಸವಕ್ಕೆ ಮೆರುಗು ನೀಡಿತು.

ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ  ಪಥಸಂಚಲನಕ್ಕೆ ನಾವೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಸುಮಾರು 300 ವಿದ್ಯಾರ್ಥಿಗಳು ಗಣೇಶನನ್ನು ಸ್ಮರಿಸುತ್ತಾ ನಡೆಸಿಕೊಟ್ಟ *ಕುಣಿತಭಜನೆ* ನೋಡುಗರನ್ನು ಕೂತಲ್ಲೇ ಕುಣಿಸಿತು. ಸುಮಾರು 290 ಕಾಲೇಜು ವಿದ್ಯಾರ್ಥಿಗಳಿಂದ “ಸುಗ್ಗಿಕೊಯ್ಯರೆ ಪೊಯಿ” ಎನ್ನುವ ತುಳು ಹಾಡಿನ ವಿಶೇಷ ನೃತ್ಯ ಗ್ರಾಮೀಣ ಕೃಷಿ ಬದುಕನ್ನು ತೆರೆದಿಟ್ಟಿತು.

ಕೇರಳದ ಪ್ರಸಿದ್ಧ ಚೆಂಡೆ ಹಾಗೂ ಚಕ್ರತಾಳದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಜಡೆಕೋಲಾಟ, 140 ವಿದ್ಯಾರ್ಥಿಗಳಿಂದ ನಿಯುದ್ಧ(ಕರಾಟೆ) ,500 ವಿದ್ಯಾರ್ಥಿಗಳಿಂದ ಘೋಷ್ ಪ್ರದರ್ಶನ , 200 ವಿದ್ಯಾರ್ಥಿಗಳಿಂದ ದೀಪಾರತಿ ಸಹಿತ ವಿವಿಧ ರಚನೆಗಳು ವಿಶೇಷ ಗಮನ ಸೆಳೆಯಿತು.

 

ಸಾಹಸಕ್ಕೂ ಸೈ: ಮನರಂಜಿಸುವ ನೃತ್ಯಗಳ ಜೊತೆಗೆ ಮೂಡಿಬಂದ ವಿದ್ಯಾರ್ಥಿಗಳ ಸಾಹಸಕ್ಕೆ ನೆರೆದ ಜನಸ್ತೋಮ ಭೇಷ್ ಎಂದಿತು.

ಆರೋಗ್ಯಕ್ಕೆ ಪೂರಕವಾದ ಯೋಗಾಸನ , ಮೈ ರೋಮಾಂಚನವೆನಿಸುವ  ಮಲ್ಲಕಂಬ, ಸ್ಕೇಟಿಂಗ್,ಬೈಕ್ ಸಾಹಸ, ದ್ವಿಚಕ್ರ , ಏಕ ಚಕ್ರ ಸಾಹಸ, ಬೆಂಕಿ ಸಾಹಸಗಳನ್ನು ಕಂಡ ಜನಸ್ತೋಮಕ್ಕೆ ಅಚ್ಚರಿಯ ಮೇಲೆ ಅಚ್ಚರಿ.. ಶಿಶುಮಂದಿರ ಹಾಗೂ ಕಿರಿಯ ಪ್ರಾಥಮಿಕದ ಸುಮಾರು 400 ಕ್ಕೂ ಹೆಚ್ಚು ಪುಟಾಣಿ ಗಳು ನೃತ್ಯ ಪ್ರದರ್ಶಿಸಿ ತಾವೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟರು.

ಭಾರೀ ಜನಸ್ತೋಮ: ಈ ಬಾರಿಯ ಕ್ರೀಡೋತ್ಸವದ ವೀಕ್ಷಣೆಗೆ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚುಜನ ವೀಕ್ಷಕರಾಗಿದ್ದರು.

ನೋಡುಗರಿಗೆ ಅನುಕೂಲವಾಗುವಂತೆ ನಾಲ್ಕು ಬೃಹತ್ ಗ್ಯಾಲರಿ ನಿರ್ಮಿಸಲಾಗಿತ್ತು. ವಿದ್ಯಾಕೇಂದ್ರದ 3500 ವಿದ್ಯಾರ್ಥಿಗಳ ಜತೆಗೆ 150ಕ್ಕೂ ಮಿಕ್ಕಿ ಶಿಕ್ಷಕರು ರಾತ್ರಿ ಹಗಲೇನ್ನದ್ದೇ ಶ್ರಮಿಸಿದರ ಪರಿಣಾಮ ಕ್ರೀಡೋತ್ಸವ ಕಲ್ಲಡ್ಕದಲ್ಲಿ ಹೊಸಲೋಕವನ್ನೇ ತೆರೆದಿಟ್ಟಿತು.

 

ಸರ್ಕಾರ ದ ವಿರುದ್ದ ಆಕ್ರೋಶ: ಕೊಲ್ಲೂರು ಕ್ಷೇತ್ರದಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಕಳೆದ ಹತ್ತು ವರ್ಷಗಳಿಂದ ನೀಡುತ್ತಿದ್ದ ಅನ್ನದಾಸೋಹವನ್ನು ಏಕಾಏಕಿ ಸ್ಥಗಿತಗೊಳಿಸಿರುವ ಸರಕಾರದ ಧೋರಣೆಯನ್ನು ಶನಿವಾರ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಅಣಕು ಪ್ರದರ್ಶನದ ಮೂಲಕ ಸರಕಾರಕ್ಕೆ ದಿಕ್ಕಾರ ಕೂಗಿ ಗಮನ ಸೆಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬೆಂಬಲಿಗರೊಂದಿಗೆ ಆಗಮಿಸಿ, ಕಲ್ಲಡ್ಕ ಮತ್ತು ಪುಣಚ ಶಾಲೆಗೆ ಕೊಡುವ ಅನ್ನದಾಸೋಹವನ್ನು ನಿಲ್ಲಿಸಲು ಸೂಚಿಸುವ ಅಣಕು ದೃಶ್ಯವನ್ನು ಅಭಿನಯಿಸಿದ ವಿದ್ಯಾರ್ಥಿಗಳು ಬಳಿಕ ಅನ್ನದ ತಟ್ಟೆ ಬಡಿಯುವ ಮೂಲಕ ಸರಕಾರ ಮತ್ತು ಸಚಿವರ ವಿರುದ್ಧದ ಆಕ್ರೋಶವನ್ನು ಮತ್ತೊಮ್ಮೆ ನೆನಪಿಸಿದರು. ಜತೆಗೆ ವಿದ್ಯಾರ್ಥಿಗಳೇ ಕೃಷಿಮಾಡಿರುವುದು, ಭಿಕ್ಷಾಂದೇಹಿ ಆಂದೋಲನಕ್ಕೆ ಪೋಷಕರಿಂದ ಸಿಕ್ಕ ಪ್ರೋತ್ಸಾಹದ ದೃಶ್ಯವನ್ನೂ ತೋರಿಸಲಾಯಿತು.

See also  ಧರ್ಮಸ್ಥಳ ಲಕ್ಷದೀಪೊತ್ಸವ: 39 ನೇ ವರ್ಷದ ರಾಜ್ಯ ಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ

 

ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವ ಸನ್ನಿವೇಶವನ್ನು ಪ್ರದರ್ಶಿಸಿದಾಗ ಮೋದಿ ಮೋದಿ ಎಂದು  ಘೋಷಿಸು ಮೂಲಕ ಹರ್ಷ ವ್ಯಕ್ತಪಡಿಸಿ, ಪಿ.ಎಸ್.ಎಲ್.ವಿ ಉಪಗ್ರಹ ಉಡಾವಣೆಯ ದೃಶ್ಯ ಪ್ರದರ್ಶನಗೊಳ್ಳುತ್ತಿದ್ದಂತೆ ನೆರೆದಿರುವ ಸಹಸ್ರಾರು ಪ್ರೇಕ್ಷಕರು ಭಾರತ ಮಾತಾ ಕಿ ಜೈ ಎಂದು ಕೂಗಿ ಸಂತಸ ವ್ಯಕ್ತ ಪಡಿಸಿದರು. ಕ್ರೀಡಾಂಗಣದಲ್ಲಿ ಸುಗ್ಗಿ ಕೊಯ್ಯರೆ ಪೋಯಿ ಎಂಬ ತುಳು ಹಾಡಿಗೆ ಕಾಲೇಜು ವಿದ್ಯಾರ್ಥಿಗಳು ಭತ್ತದ ಕೃಷಿಯ ರೂಪಕವನ್ನು ಜಾನಪದ ಶೈಲಿಯಲ್ಲಿ ಕುಣಿದು ಪ್ರದರ್ಶಿಸಿದರು.

ಭಾರತೀಯ ಸಂಸೃತಿ ಪ್ರತಿಬಿಂಬ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅದ್ಭುತವಾದ ಪ್ರದರ್ಶನ ಇಲ್ಲಿ ನಡೆದಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ದೇಶಭಕ್ತಿ ಸಂಸ್ಕಾರ ಅಡಕವಾಗಿದೆ. ಶಿಸ್ತಿಗೆ ಪ್ರಾಮುಖ್ಯತೆ ನೀಡುವುದೇ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ಕಾರಣ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಟಾಟಾ ಗ್ರೂಪ್ ನ ಮಾಜಿ ಚೇರ್ಮನ್ ಸೈರಸ್  ಮಿಸ್ಟ್ರೀ, ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ. ಆರ್ ಸಿ. ಸಿನ್ಹಾ, ತ್ರಿಪಾಠಿ ಗ್ರೂಪ್ಸ್ ನ ಮಿಥಿಲೇಶ್ ಕುಮಾರ್ ತ್ರಿಪಾಠಿ, ಅಖಿಲ ಕನರ್ಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ, ಉದ್ಯಮಿ ರವೀಂದ್ರ ಪೈ, ಶಾಸಕರಾದ ಮುನಿರಾಜು, ಸಂಜಯ್ ಬಿ.ಪಾಟೀಲ್, ಶಶಿಕಲಾ ಎ.ಜೊಲ್ಲೆ, ಅರವಿಂದ ಬೆಲ್ಲದ,  ಸೋಮಶೇಖರ ರೆಡ್ಡಿ, ರಾಜು ಕಾಗೆ, ಮಾಜಿ ಶಾಸಕರಾದ ಎಂ.ಸಿ.ಅಶ್ವತ್ಥ, ಸುರೇಶ್ ಗೌಡ ಪಾಟೀಲ, ಉದ್ಯಮಿ ಅಶೋಕ್ ಕುಮಾರ್ ರೈ, ಕೊಲ್ಲೂರು ಮೂಕಾಂಬಿಕಾ ದೇವಳ ಧರ್ಮದರ್ಶಿ ರಾಜೇಶ್ ಕಾರಂತ್, ಉದ್ಯಮಿ ಶಿವಕುಮಾರ್ ಗೌಡ, ಉದ್ಯಮಿ ರಾಜೇಂದ್ರ ಮೈಸೂರು, ಬಿಜೆಪಿ ಮುಖಂಡರಾದ ಎಂ.ಸಿ.ಶ್ರೀನಿವಾಸ್, ಸದಾಶಿವ, ಪ್ರಮುಖರಾದ  ರಮೇಶ್, ವರಪ್ರಸಾದ್ ರೆಡ್ಡಿ, ಧನಂಜಯ್ ಸರ್ ದೇಸಾಯಿ, ರಾಘವೇಂದ್ರ ಶೆಟ್ಟಿ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ ಚಂದ್ರ, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂತರ್ಿ, ಬಿಜೆಪಿ ಅಲ್ಪಸಂಖ್ಯಾತ ಮೋಚರ್ಾ ಮುಖಂಡ ರಹೀಂ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪದವಿ ಕಾಲೇಜು ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್ ಕಟ್ಟೆ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಸಂತ ಬಲ್ಲಾಳ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಮೇಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರವಿರಾಜ ಕಣಂತೂರು ಉಪಸ್ಥಿತರಿದ್ದರು.

 

 

 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು