News Kannada
Monday, October 03 2022

ಕರಾವಳಿ

ಸುಳ್ಯದಲ್ಲಿ ಬೀಡು ಬಿಟ್ಟ ಆನೆ ಹಿಂಡು: ಅರಣ್ಯ ಇಲಾಖೆಯ ಕಾರ್ಯಾಚರಣೆಯು ವಿಫಲ - 1 min read

Photo Credit :

ಸುಳ್ಯದಲ್ಲಿ ಬೀಡು ಬಿಟ್ಟ ಆನೆ ಹಿಂಡು: ಅರಣ್ಯ ಇಲಾಖೆಯ ಕಾರ್ಯಾಚರಣೆಯು ವಿಫಲ

ಸುಳ್ಯ: ಆಹಾರವನ್ನು ಹುಡುಕುತ್ತಾ ಕಾಡಿನಿಂದ ಸುಳ್ಯ ನಗರಕ್ಕೆ ಬಂದ ಆನೆಗಳ ಹಿಂಡು ಕಾಡಿಗೆ ಮರಳದೆ ಸುಳ್ಯ ನಗರ ಸಮೀಪವೇ ಬೀಡು ಬಿಟ್ಟಿರುವುದರಿಂದ ಜನರಲ್ಲಿ ಆತಂಕ ಹುಟ್ಟಿಸಿದೆ.

ನಗರ ಸಮೀಪದ ಗುಡ್ಡೆಮನೆ, ನಾರ್ಕೋಡು ಭಾಗಗಳಲ್ಲಿ ಓಡಾಟ ನಡೆಸಿ ಆನೆಗಳು ಜನರ ನಿದ್ರೆಗೆಡಿಸುತಿದೆ. ಶುಕ್ರವಾರ ಹಗಲು ಪೂರ್ತಿ ಗುಡ್ಡೆಮನೆ ಭಾಗದಲ್ಲಿ ಜನ ವಸತಿ ಪ್ರದೇಶದ ಸಮೀಪ ಚಿಕ್ಕದಾದ ಕಾಡಿನಲ್ಲೇ ಇದ್ದ ಆನೆಗಳು ಅರ್ಭಟಿಸಿ, ಘೀಳಿಟ್ಟು ಭಯದ ವಾತಾವರಣವನ್ನು ಉಂಟು ಮಾಡಿತ್ತು. ರಸ್ತೆ ಬದಿಯಲ್ಲಿ, ಮನೆಗಳ ಸಮೀಪದಲ್ಲೇ ಆನೆಗಳು ಇದ್ದ ಕಾರಣ ಜನರು ಮನೆಯಿಂದ ಹೊರ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಯಿತು. ರಸ್ತೆಯಲ್ಲಿ ವಾಹನಗಳು, ಶಾಲಾ ಮಕ್ಕಳು ಓಡಾಟ ನಡೆಸಲು ಸಾಧ್ಯವಾಗಲಿಲ್ಲ. ಸಂಜೆಯ ವೇಳೆಗೆ ಆನೆಗಳ ಹಿಂಡು ನಾರ್ಕೋಡು ಭಾಗದತ್ತ ಸಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗುರುವಾರ ರಾತ್ರಿ ಮೇದಿನಡ್ಕ ಭಾಗದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನ ನಡೆಸಿದ್ದರು.

ಸ್ವಲ್ಪ ಮುಂದೆ ಸಾಗಿದ ಆನೆಗಳು ಕೆಲವೇ ಹೊತ್ತಿನಲ್ಲಿ ಮರಳಿ ಬಂದವು. ಈ ಮಧ್ಯೆ ವ್ಯಾಪಕ ಕೃಷಿ ಹಾನಿಯನ್ನೂ ಮಾಡಿದೆ. ನಾರ್ಕೋಡಿನ ಕೃಷಿಕ ಕೃಪಾಶಂಕರ ತುದಿಯಡ್ಕ ಅವರ ತೋಟದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಅಡಕೆ ಮರ, ಹಲವು ಬಾಳೆಗಳನ್ನು ನಾಶ ಮಾಡಿದೆ. ನೀರಾವರಿ ಪೈಪುಗಳನ್ನು ಪುಡಿಗಟ್ಟಿದೆ. ಮನೆಯ ಅಂಗಳಕ್ಕೆ ಬಂದ ಆನೆಗಳನ್ನು ಓಡಿಸಲು ಬೆಂಕಿ ಹಾಕಿ, ಪಟಾಕಿ ಸಿಡಿಸಿ, ಶಂಖನಾದ ಮೊಳಗಿಸಿ ಮನೆಯಂಗಳದಿಂದ ಆನೆಗಳನ್ನು ಅಟ್ಟಬೇಕಾಯಿತು ಎನ್ನುತ್ತಾರೆ ಕೃಪಾಶಂಕರ.

ಮೂರು ದಿನದ ಹಿಂದೆ ನಾರ್ಕೋಡು ಭಾಗದಿಂದ ಗುಡ್ಡೆಮನೆಗೆ ದಾಂಗುಡಿಯಿಟ್ಟ ಆನೆಗಳು ನಗರ ಸಮೀಪ ಪಯಸ್ವಿನಿ ತಟದ ಮೇದಿನಡ್ಕಕ್ಕೂ ಬಂದಿತ್ತು. ನಾರ್ಕೋಡು ಭಾಗದಲ್ಲಿ ಆನೆ ಕಂದಕ ನಿರ್ಮಿಸಲಾಗಿದ್ದರೂ ಕಂದಕ ನಿರ್ಮಿಸಲು ಆಗದ ಹೊಳೆಯ ಭಾಗದಿಂದ ಆನೆಗಳು ನಾಡಿಗೆ ಲಗ್ಗೆಯಿಟ್ಟಿದೆ.

ಅರಣ್ಯ ಇಲಾಖೆಯವರು ಮತ್ತು ಸಾರ್ವಜನಿಕರು ಮೂರು ದಿನಗಳಿಂದ ರಾತ್ರಿ ಹಗಲು ಪ್ರಯತ್ನ ನಡೆಸಿದರೂ ಎರಡು ಮರಿ ಆನೆಗಳು ಸೇರಿ ಎಂಟು ಆನೆಗಳ ಗುಂಪು ದೂರ ಸರಿಯಲಿಲ್ಲ. ಪಟಾಕಿ ಸಿಡಿಸಿ, ಬೆಂಕಿ ಹಾಕಿ, ಚೆಂಡೆ, ತಮಟೆ ಬಾರಿಸಿ ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿದರೂ ಚಿಕ್ಕ ಮರಿಗಳು ಇರುವ ಕಾರಣ ಆನೆಗಳು ದೂರ ಸರಿಯುತ್ತಿಲ್ಲ. ಸುಳ್ಯ ನಗರದಿಂದ ಕೇವಲ ಒಂದು ಕಿ.ಮಿ ಕಿ.ಮಿ.ಮಾತ್ರ ದೂರದಲ್ಲಿ ಆನೆಗಳು ಇದ್ದ ಕಾರಣ ಪಯಸ್ವಿನಿ ಹೊಳೆ ದಾಟಿ ನಗರಕ್ಕೆ ಬರಬಹುದೇ ಎಂಬ ಆತಂಕವೂ ನಿರ್ಮಾಣವಾಗಿದೆ.

See also  ಶಾಸಕ ವಸಂತ ಬಂಗೇರ ಮೇಲೆ ಹಲ್ಲೆಗೆ ಮುಂದಾದ ‘ಕೈ’ ಕಾರ್ಯಕರ್ತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು