News Kannada
Saturday, October 01 2022

ಕರಾವಳಿ

ಮಂಗಳೂರು: ಪಾರ್ಕ್ ಗೆ ಬಂದಿದ್ದ ಭಿನ್ನಕೋಮಿನ ಯುವಕ-ಯುವತಿಯರಿಗೆ ಹಲ್ಲೆ - 1 min read

Photo Credit :

ಮಂಗಳೂರು: ಪಾರ್ಕ್ ಗೆ ಬಂದಿದ್ದ ಭಿನ್ನಕೋಮಿನ ಯುವಕ-ಯುವತಿಯರಿಗೆ ಹಲ್ಲೆ

ಮಂಗಳೂರು: ಇಲ್ಲಿನ ಪಿಳಿಕುಳ ಪ್ರವಾಸಿ ನಿಸರ್ಗಧಾಮಕ್ಕೆ ಅನ್ಯಕೋಮಿನ ವಿದ್ಯಾರ್ಥಿನಿಯರ ಜತೆ ಯುವಕನೊಬ್ಬ ಬಂದಿದ್ದು ಇದನ್ನು ಕಂಡ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕ-ಯುವತಿಯರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಂತರ ಸ್ಥಳಕ್ಕೆ ಬಂದ ಪೊಲೀಸರು ಯುವಕ-ಯುವತಿಯರನ್ನು ವಶಕ್ಕೆ ಪಡೆದರು. ಈ ಮೂವರು ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಪಿಲಿಕುಳದ ಮಾನಸ ವಾಟರ್ ಪಾರ್ಕಿಗೆ ಹೋಗಿದ್ದರು. ಅನ್ಯಕೋಮಿನ ಯುವಕನ ಜತೆ ಯುವತಿಯರನ್ನು ಕಂಡ ಸ್ಥಳೀಯ ಯುವಕರು ಹಿಂದೂ ಸಂಘಟನೆಯವರಿಗೆ ಸುದ್ದಿ ತಿಳಿಸಿದ್ದಾರೆ.

ಕೂಡಲೇ ಪಾರ್ಕ್ ಗೆ ಬಂದ ಹಿಂದೂ ಕಾರ್ಯಕರ್ತರು ಯುವಕ-ಯುವತಿಯರಿಗೆ ಹಲ್ಲೆ ನಡೆಸಿದ್ದಾರೆ. ಈಚೆಗೆ ಲವ್ ಜಿಹಾದ್ ಗೆ ಹುಡುಗಿಯರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದೆ. ಇನ್ನೂ ಪೊಲೀಸರ ಮುಂದೆಯೇ ಯುವತಿಗೆ ಹೊಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಸಂಪತ್ ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

See also  ವಿವಿಧ ಹಿಂದೂ ಉತ್ಸವಗಳು ಒಂದೇ ದಿನಕ್ಕೆ ಸೀಮಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು