News Kannada
Sunday, September 25 2022

ಕರಾವಳಿ

ಸಿಎಂಗೆ ಕರಿಪತಾಕೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರ ಸೆರೆ - 1 min read

Photo Credit :

ಸಿಎಂಗೆ ಕರಿಪತಾಕೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರ ಸೆರೆ

ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಭಾನುವಾರ ಕರಿಪತಾಕೆ ಪ್ರದರ್ಶನಕ್ಕೆ ಪ್ರಯತ್ನ ನಡೆಸಿದರು.

ರಾಜ್ಯಾದ್ಯಂತ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಒಡೆದು ಆಳುವ ನೀತಿಯನ್ನು ವಿರೋಧಿಸಿ ಭಾನುವಾರ ವಿವಿಧ ಕಾಮಗಾರಿಗಳ ಹಾಗು ಶಿಲಾನ್ಯಾಸಗಳನ್ನು ಉದ್ಘಾಟಿಸಲು ಬೆಳ್ತಂಗಡಿಗೆ ಆಗಮಿಸುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ಬೆಳ್ತಂಗಡಿ ನಗರದಲ್ಲಿ ಕರಿಪತಾಕೆಯನ್ನು ಪ್ರದರ್ಶಿಸಲು ಸಿದ್ದರಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ರಾಜ್ಯ ಹಾಗೂ ಜಿಲ್ಲೆಯಲ್ಲಿ ಹಿಂದುಗಳ ಮೇಲೆ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ, ಹಿಂದುಗಳ ಹತ್ಯೆಯನ್ನು ನಡೆಸಲಾಗುತ್ತಿದೆ, ದೌರ್ಜನ್ಯ ನಡೆಸಿದವರ ಮೇಲೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಸರಕಾರ ದೌರ್ಜನ್ಯ ನಡೆಸುತ್ತಿರುವ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಿರೋಧಿಸಿ ಬೆಳ್ತಂಗಡಿಗೆ ಸರಕಾರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅವರ ಪ್ರತಿಭಟನೆ ಸಿದ್ದತೆಯನ್ನು ನಡೆಸಿದ್ದರು.

ಭಾನುವಾರ ಬೆಳಗ್ಗಿನಿಂದ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಪೊಲೀಸ್ ಬಿಗು ಬಂದೋಬಸ್ತ್ ವನ್ನು ಮಾಡಿತ್ತು. ಇದರ ನಡುವೆ ಮುಖ್ಯಮಂತ್ರಿಯವರು ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಬಂದು ಇಳಿದು ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಗೆ ಆಗಮಿಸುವ ನಗರದ ರಸ್ತೆಯಲ್ಲಿ ಕರಿ ಪಾತಾಕೆ ಪ್ರದರ್ಶಿಸಲು ಸಿದ್ದತೆಯನ್ನು ಬಿಜೆಪಿ ನಡೆಸಿತ್ತು.  

ಆದರೆ ಪೋಲಿಸರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಳ್ತಂಗಡಿ ನಗರದ ಬಸ್ ನಿಲ್ದಾಣದ ಬಳಿ ಹಾಗೂ ಮೂರು ಮಾರ್ಗದ ಬಳಿ ಕರಿ ಪತಾಕೆ ಪ್ರದರ್ಶಿಸಲು ಕಾದು ಕುಳಿತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಸ್ಸಿನಲ್ಲಿ ಕರೆದೊಯ್ದರು. ಬಂಧಿಸುವ ವೇಳೆ ಸಿದ್ದರಾಮಯ್ಯ ವಿರುದ್ಧ ಘೋಷಣೆಯೊಂದಿಗೆ, ಕರಿ ಪತಾಕೆಯನ್ನು ಪ್ರದರ್ಶಿಸಿದರು.

ಬಿಜೆಪಿ ವಿಭಾಗೀಯ ಪ್ರಭಾರಿ ಪ್ರಸಾದ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದ ರೈ, ಜಿ.ಪಂ. ಸದಸ್ಯರಾದ ವಿಜಯಗೌಡ, ಲಕ್ಷ್ಮೀನಾರಾಯಣ, ತಾ| ಯುವ ಮೋರ್ಚಾ ಕಾರ್ಯದರ್ಶಿ ರಕ್ಷಿತ್, ಮುಖಂಡರುಗಳಾದ ಕಿಶೋರ್ ವಳಂಬ್ರ, ಯಶೋಧರ ಬೆಳಾಲು, ಮೋಹನದಾಸ ಬೈರ, ವಿನಯಚಂದ್ರ ಗೌಡ ಮತ್ತಿತರರು ಇದ್ದರು.

ಮುಖ್ಯಮಂತ್ರಿಯವರಕಾರ್ಯಕ್ರಮಕ್ಕೆಕರಿಪತಾಕೆಯನ್ನು ಪ್ರದರ್ಶನ ನಡೆಸಲಾಗುತ್ತದೆ ಎಂದು ಮಾಹಿತಿ ದೊರೆತ ಪೊಲೀಸರು ಭಾನುವಾರ ಬೆಳಗ್ಗೆಯೇ ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಹಾಗೂ ವಿಎಚ್ಪಿ ಕಾರ್ಯದರ್ಶಿ ನವೀನ್ ನೆರಿಯ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದರು. 

See also  ಮೂಡುಬಿದಿರೆ: ಸಹಾಯಕ ಉಪನಿರೀಕ್ಷಕ ಎ.ಎಸ್.ಐ ಕೃಷ್ಣ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು