News Kannada
Saturday, November 26 2022

ಕರಾವಳಿ

ಸಚಿವ ರೈ ಗೂಂಡಾ ರಾಜಕೀಯಕ್ಕೆ ತಿಲಾಂಜಲಿ ಇಡಿ: ನಳಿನ್ ಕುಮಾರ್ - 1 min read

Photo Credit :

ಸಚಿವ ರೈ ಗೂಂಡಾ ರಾಜಕೀಯಕ್ಕೆ ತಿಲಾಂಜಲಿ ಇಡಿ: ನಳಿನ್ ಕುಮಾರ್

ಬಂಟ್ವಾಳ: ಉಸ್ತುವಾರಿ ಸಚಿವರ ಗೂಂಡಾ ರಾಜಕೀಯಕ್ಕೆ ತಿಲಾಂಜಲಿ ಇಟ್ಟು, ರಾಜೇಶ್ ನಾಯ್ಕ್ ರನ್ನು ಗೆಲ್ಲಿಸುವ ಮೂಲಕ ಬಂಟ್ವಾಳದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಬಿಜೆಪಿಯ ಗುರಿ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಮುಂದಾಳತ್ವದಲ್ಲಿ ಭಾನುವಾರ ಆರಂಭವಾದ 13 ದಿನಗಳ “ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ” ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರದ ಕೆಟ್ಟ ಆಡಳಿತಕ್ಕೆ ಜನ ಬೇಸತ್ತಿದ್ದಾರೆ, ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸಿದ ಕ್ಷಣದಿಂದಲೇ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ, ಅಹಿಂದದ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುತ್ತಿದ್ದಾರೆ. ಮಾತ್ರವಲ್ಲ ಟಿಪ್ಪು ಜಯಂತಿ ಆಚರಣೆ ಮೂಲಕ ಜನರ ಮನಸ್ಸುಗಳನ್ನು ಒಡೆದಿದ್ದಾರೆ, ಒಡೆದು ಆಳುವ ನೀತಿಯ ಮೂಲಕ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದವರು ಆರೋಪಿಸಿದರು.

ರಾಜ್ಯ ಸರ್ಕಾರದಿಂದ ಹತ್ಯಾ ಭಾಗ್ಯ
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 21 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲದೆ ಸುಮಾರು 3000ಕ್ಕೂ ಅಧಿಕ ಮಂದಿಯ ಹತ್ಯೆ ಆಗಿದೆ. ಇದು ರಾಜ್ಯ ಸರ್ಕಾರದ ಹತ್ಯಾಭಾಗ್ಯವೋ ಎಂದು ಟೀಕಿಸಿದರು.

ಆರೆಸ್ಸಸ್ ಅನ್ನು ಉಗ್ರ ಸಂಘಟನೆ ಎಂದು ಹೇಳುವ ಕಾಂಗ್ರೆಸ್ ದೇಶದಲ್ಲಿ ನಡೆದ ಬಹುತೇಕ ಬಾಂಬು ಸ್ಪೋಟಗಳಲ್ಲಿ ಉಗ್ರರಿಗೆ ನೆರವು ನೀಡಿದೆ. ಪಾಕ್ ದುಷ್ಕೃತ್ಯಗಳು ನಡೆದಾಗ ಕಾಂಗ್ರೆಸ್ ಮೌನವಾಗಿದ್ದು ಬೆಂಬಲಿಸಿದ್ದು, ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಯಾವುದೇ ಉಗ್ರಚಟುವಟಿಕೆ ದೇಶದೊಳಗೆ ನಡೆದಿಲ್ಲ ಎಂದರು.

ರೈ ವಿರುದ್ದ ಹರಿಕೃಷ್ಣ ವಾಗ್ದಾಳಿ
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ರಮಾನಾಥ ರೈ ಸ್ವಯಂಘೋಷಿತ ಜಾತ್ಯತೀತ ನಾಯಕ. ಅರ್ಜಿ ಹಾಕದೆ ಸರ್ಕಾರ ಜಮೀನು ಮಂಜೂರು ಮಾಡಿರುವುದು ರೈ ಅವರ ಪತ್ನಿ ಧನಭಾಗ್ಯ ರೈ ಗೆ ಮಾತ್ರ ಎಂದ ಅವರು, ಇದನ್ನು ನಾನು ಬಹಿರಂಗಗೊಳಿಸಿದ್ದೇನೆ. ಅದಕ್ಕೆ ನನ್ನ ವಿರುದ್ದ ಮಾನನಷ್ಟ  ಹಾಕುತ್ತೇನೆ ಎಂದು ಬೆದರಿಸಿದ್ದಾರೆ, ಆದರೆ ಒಂದು ನೋಟಿಸ್ ಕೂಡ ನೀಡಿಲ್ಲ. ನೋಟಿಸ್ ನೀಡಿದರೆ ರೈಯ ಚಡ್ಡಿ ಜಾರಿಸುತ್ತೇನೆ ಎಂದವರು ವ್ಯಂಗ್ಯವಾಡಿದರು. ರೈ ಸೋತರೆ ಮಾತ್ರ ಜಿಲ್ಲೆಯಲ್ಲಿ ಸಾಮರಸ್ಯ, ಹೀಗಾಗಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮಾತನಾಡಿ, ಕಳೆದ ಚುನಾವಣೆ ವೇಳೆ ನನಗೆ ಚುನಾವಣೆ ಹೊಸದಾಗಿತ್ತು, ಬಂಟ್ವಾಳ ಕ್ಷೇತ್ರವೂ ಹೊಸದಾಗಿತ್ತು. ಆದರೆ ಈ ಬಾರಿ ಕ್ಷೇತ್ರದ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಬಂಟ್ವಾಳದಲ್ಲಿಯೂ ಜನ ಪರಿವರ್ತನೆಯನ್ನು ಬಯಸಿದ್ದಾರೆ. ಹೀಗಾಗಿ ಬಂಟ್ವಾಳ ಕಾಂಗ್ರೆಸ್ ಮುಕ್ತವಾಗಲಿದೆ. ಮುಂದಿನ 13 ದಿನ ಕಾರ್ಯಕರ್ತರ ಜೊತೆ ಹಳ್ಳಿ ಹಳ್ಳಿಗೆ ಭೇಟಿ ನೀಡಿ, ಎಲ್ಲರ ಜೊತೆ ಬೆರೆಯುವುದಾಗಿ ತಿಳಿಸಿದರು.

ಮಾಜಿ ಶಾಸಕ ರುಕ್ಮಯ ಪೂಜಾರಿ. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ,  ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿದರು.

See also  ಸುಳ್ಯ: ಸ್ವಚ್ಛತಾ ಆಂದೋಲನಕ್ಕೆ ಕೈಜೋಡಿಸಲು ಗಿರೀಶ್ ಭಾರದ್ವಾಜ್ ಗೆ ಪ್ರಧಾನಿ ಮೋದಿಯಿಂದ ಪತ್ರ

ವೇದಿಕೆಯಲ್ಲಿ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಪದ್ಮನಾಭ ಕೊಟ್ಟಾರಿ, ಬಿ.ದೇವದಾಸ ಶೆಟ್ಟಿ, ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ಮೋನಪ್ಪ ದೇವಸ್ಯ, ಜಿತೇಂದ್ರ ಕೊಟ್ಟಾರಿ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ,ತುಂಗಪ್ಪ ಬಂಗೇರ,  ಉಮಾನಾಥ ಕೋಟ್ಯಾನ್, ಬೃಜೇಶ್ ಚೌಟ, ರತ್ನಕುಮಾರ್ ಚೌಟ, ನಾಗೇಶ್, ಬಿ.ದಿನೇಶ ಭಂಡಾರಿ, ಸುಗುಣಾ ಕಿಣಿ, ತಂಗಮ್ಮ,  ರಾಮದಾಸ ಬಂಟ್ವಾಳ ಮೊದಲಾದವರು ವೇದಿಕೆಯಲ್ಲಿದ್ದರು.

ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು. ಡೊಂಬಯ್ಯ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು