News Kannada
Tuesday, December 06 2022

ಕರಾವಳಿ

ವ್ಯಸನವನ್ನು ನಾವು ಬಿಡಬೇಕೇ ವಿನಃ ವ್ಯಸನ ನಮ್ಮನ್ನು ಬಿಡದು: ವೀರೇಂದ್ರ ಹೆಗ್ಗಡೆ

Photo Credit :

ವ್ಯಸನವನ್ನು ನಾವು ಬಿಡಬೇಕೇ ವಿನಃ ವ್ಯಸನ ನಮ್ಮನ್ನು ಬಿಡದು: ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಒತ್ತಡದಿಂದ ತಪ್ಪಿಸಿಕೊಳ್ಳುವುದು ಒಂದು ವಿದ್ಯೆಯೇ ಆಗಿದೆ. ಇಂದ್ರಿಯಗಳ ಸೆಳೆತಕ್ಕೆ ಬಲಿಯಾಗದಂತೆ ನೋಡಿಕೊಳ್ಳುವುದು ಜಾಣತನದ ಪ್ರತೀಕ. ವ್ಯಸನವನ್ನು ನಾವು ಬಿಡಬೇಕೇ ವಿನಃ ಅದು ನಮ್ಮನ್ನು ಬಿಡುವುದಿಲ್ಲ. ಒಳ್ಳೆಯವನೆಂದು ಗಿಟ್ಟಿಸಿಕೊಳ್ಳಲು ದೃಢ ಸಂಕಲ್ಪ ಬೇಕು. ಮದ್ಯವ್ಯಸನದಿಂದ ಶರೀರದ ಪಾವಿತ್ರ್ಯತೆ ಕೆಡುವುದರಲ್ಲಿ ಸಂಶಯವಿಲ್ಲ. ಶಿಬಿರದಿಂದಾದ ಪರಿವರ್ತನೆ ಉಳಿಸಿಕೊಳ್ಳಲು ಮನಸ್ಸು ಚಂಚಲವಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಮಂಗಳವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ವಿವಿಧ ಶಿಬಿರಗಳ 1173 ನವಜೀವನ ಸದಸ್ಯರ ಪಾನಮುಕ್ತ ಜೀವನದ ಶತದಿನೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಬೇಲೂರು, ಸೋಮವಾರಪೇಟೆ, ಸಂಡೂರು, ಚಳ್ಳಕೆರೆ, ಯಲಬುರ್ಗಾ, ದೊಡ್ಡಬಳ್ಳಾಪುರ, ಮಾಗಡಿ, ಮಧುಗಿರಿ, ತರೀಕೆರೆ, ಹಾವೇರಿ, ಅಥಣಿ, ತುಮಕೂರು, ಶಿರಾ, ಹೊಸಪೇಟೆ, ಕೊಪ್ಪ, ವಾಮದಪದವಿನಲ್ಲಿ ನಡೆದ ಶಿಬಿರಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಪದಾಧಿಕಾರಿಗಳು, ಕಾರ್ಯಕರ್ತರು ಶಿಬಿರಾರ್ಥಿಗಳನ್ನು ಕರೆತರುವ ವ್ಯವಸ್ಥೆ ಮಾಡಿದ್ದರು. ಭಾಗವಹಿಸಿದ ಎಲ್ಲಾ ಪಾನಮುಕ್ತರಿಗೆ ನವಜೀವನದ ಬ್ಯಾಡ್ಜ್ ವಿತರಿಸಲಾಯಿತು. ವೇದಿಕೆಯ ನಿರ್ದೇಶಕ ವಿವೇಕ್ ಶತದಿನೋತ್ಸವ ಕಾರ್ಯಕ್ರಮದ ಮಹತ್ವ ತಿಳಿಸಿದರು.

ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭೆಯ ನಿರ್ವಹಣೆಯನ್ನು ಶಿಬಿರಾಧಿಕಾರಿಗಳಾದ ಗಣೇಶ್ ಆಚಾರ್ಯ, ದೇವಿಪ್ರಸಾದ್, ನಂದಕುಮಾರ್, ಚಿತ್ರಾ, ವಿದ್ಯಾಧರ್ ನಡೆಸಿಕೊಟ್ಟರು. ನಂತರ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ವೇದಿಕೆಯ ಶಿಬಿರಗಳ ನೀತಿ ಸಂಹಿತೆಯಂತೆ ಮದ್ಯವರ್ಜಿತರು ಪಾನಮುಕ್ತತೆಯ ಶತದಿನೋತ್ಸವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸುವುದರಿಂದ ಪಾನಮುಕ್ತರಲ್ಲಿ ವಿಶೇಷ ದೃಢ ಸಂಕಲ್ಪ ಬರಲು ಸಾಧ್ಯವಾಗುತ್ತದೆ.

See also  ಮಂಗಳೂರಿಗೆ ಆಗಮಿಸಿದ ಅಮಿತ್ ಷಾ: ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಕಾರ್ಯಕರ್ತರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು