News Kannada
Tuesday, November 29 2022

ಕರಾವಳಿ

ಫೆ. 2 ರಿಂದ 4 ರವರೆಗೆ ಉ.ಕ. ಜಿಲ್ಲೆಯಲ್ಲಿ ಹಾರ್ನಬಿಲ್ ಉತ್ಸವ - 1 min read

Photo Credit :

ಫೆ. 2 ರಿಂದ 4 ರವರೆಗೆ ಉ.ಕ. ಜಿಲ್ಲೆಯಲ್ಲಿ ಹಾರ್ನಬಿಲ್ ಉತ್ಸವ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಡೇಲಿಯ ಅರಣ್ಯ ಅತಿಥಿ ಗೃಹ ಆವರಣದಲ್ಲಿ ಫೆ.2 ರಿಂದ ಫೆ. 4ರವರೆಗೆ ಹಾರ್ನಬಿಲ್ ಉತ್ಸವ ಆಯೋಜಿಸಲಾಗಿದೆ.

ರಾಜ್ಯದಲ್ಲಿ ಮೊದಲ ಬಾರಿ ನಡೆಯಲಿರುವ ಹಾರ್ನಬಿಲ್ ಉತ್ಸವದ ಮೂಲ ಉದ್ದೇಶ ಎಲ್ಲ ವರ್ಗದ ಜನರಿಗೂ ಅದರಲ್ಲಿಯೂ ಯುವ ಪೀಳಿಗೆಗೆ ಹಕ್ಕಿಗಳ ಮಹತ್ವದ ಅರಿವು ಮೂಡಿಸುವುದು ಮತ್ತು ಈ ಭಾಗದಲ್ಲಿ ಗುರುತಿಸಿಕೊಂಡಿರುವ ಅಪರೂಪದ ಪಕ್ಷಿಗಳ ಸಂತತಿಯನ್ನು ಉಳಿಸಿ ಬೆಳೆಸುವುದು ಉತ್ಸವದ ಉದ್ದೇಶವಾಗಿದೆ.

ಈ ಹಬ್ಬದ ನಿಮಿತ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾರ್ನಬಿಲ್ ಪಕ್ಷಿಗೆ ಸಂಬಂಧಪಟ್ಟಂತೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಕ್ವಿಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಈ ಹಬ್ಬದಲ್ಲಿ ಛಾಯಾ ಚಿತ್ರ, ಚಿತ್ರಕಲೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಉತ್ತಮ ಛಾಯಾ ಚಿತ್ರ ಫೆ.3 ರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ, ಅರಣ್ಯ ಸಚಿವ ರಮಾನಾಥ ರೈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಫೆ. 3 ಸಂಜೆಯ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಗಾಲ್ಯಾಂಡಿನ ಕಲಾ ತಂಡದವರು ವಿಶಿಷ್ಟ ನೃತ್ಯ ರೂಪಕವನ್ನು ಹಾಗೂ ಪರಿಸರ ಕುರಿತು ವಾಸುದೇವ ವಾದ್ಯ ಗೋಷ್ಠಿಯನ್ನು ಮತ್ತು ವಿನಯ ಹೆಗಡೆ ಬಾನಂಗಳದಲ್ಲಿ ಚಿತ್ತಾರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ದಾಂಡೇಲಿ ಹಾರ್ನಬಿಲ್ ಸಂರಕ್ಷಿತ ಪ್ರದೇಶ : ದಾಂಡೇಲಿಯ ಅರಣ್ಯ ಪ್ರದೇಶದ ಭಾಗವನ್ನು ಹಾರ್ನಬಿಲ್ ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುತ್ತದೆ. ಹಾರ್ನಬಿಲ್ ಪ್ರಭೇದದ ಪಕ್ಷಿಗಳು ಪರಿಸರದ ಅಸ್ತಿತ್ವಕ್ಕೆ ದಕ್ಕೆ ಉಂಟಾಗುವದನ್ನು ತಡೆಗಟ್ಟುತ್ತವೆ. ಹಾರ್ನಬಿಲ್ ಪಕ್ಷಿಯ ಕನ್ನಡದ ಹೆಸರು ಮುಂಗಟ್ಟೆ. ಸ್ಥಳೀಯವಾಗಿ ಇದನ್ನು ಕನಾರಿ ಹಾಗೂ ವಿಮಾನ ಪಕ್ಷಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಹಾರ್ನಬಿಲ್ಗಳ 9 ಪ್ರಭೇದಗಳಿಗೆ ಅವುಗಳಲ್ಲಿ 4 ಬಗೆಯ ಹಾರ್ನಬಿಲ್ಗಳು ದಾಂಡೇಲಿಯ ಸುತ್ತಮುತ್ತಲು ಕಂಡು ಬರುತ್ತವೆ.

ಮಲಬಾರ ಗ್ರೇಹಾರ್ನಬಿಲ್, ಇಂಡಿಯನ್ ಗ್ರೇಹಾರ್ನಬಿಲ್, ಮಲಬಾರ್, ಗ್ರೇಟ್ ಇಂಡಿಯನ್ ಹಾರ್ನಬಿಲ್ ಇವೇ ಆ ನಾಲ್ಕು ಪ್ರಕಾರದ ಹಾರ್ನಬಿಲ್ ಪಕ್ಷಿಗಳು ಮನುಷ್ಯನಿಗೆ ವಿಷಕಾರಿಯಾದ ಕಾಸರಕಾ ಬೀಜವನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ. ಉತ್ಸವದಲ್ಲಿ ಹಾರ್ನಬಿಲ್ ಹಕ್ಕಿಗಳ ಬಗ್ಗೆ ಮಾಹಿತಿ ನೀಡಲಾಗುವುದು. ದಾಂಡೇಲಿಯಲ್ಲಿ ಅತೀ ಹೆಚ್ಚು ಹಾರ್ನಬಿಲ್ ಪಕ್ಷಿ ಸಂತತಿಗಳಿವೆ.

 

See also  94ಸಿ ತಿರಸ್ಕೃತಗೊಂಡ ಅರ್ಜಿಗಳ ಮರು ಪರಿಶೀಲನೆಗೆ ಐವನ್ ಡಿಸೋಜ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು