News Kannada
Friday, December 02 2022

ಕರಾವಳಿ

ಕಾಂಗ್ರೆಸ್ ದುರಾಡಳಿತದಿಂದ ಜಿಲ್ಲೆಯ ಜನರ ನೆಮ್ಮದಿ ಹಾಳಾಗಿದೆ: ಸಂಜೀವ ಮಠಂದೂರು ಆರೋಪ

Photo Credit :

 ಕಾಂಗ್ರೆಸ್ ದುರಾಡಳಿತದಿಂದ ಜಿಲ್ಲೆಯ ಜನರ ನೆಮ್ಮದಿ ಹಾಳಾಗಿದೆ: ಸಂಜೀವ ಮಠಂದೂರು ಆರೋಪ

ಸುಳ್ಯ: ಕಾಂಗ್ರೆಸ್ ನ ದುರಾಡಳಿತದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ನೆಮ್ಮದಿ ಹಾಳಾಗಿದೆ. 28 ದಿನಗಳಲ್ಲಿ ಐದು ಕಗ್ಗೊಲೆ ಉಂಟಾಗಿದೆ. ಭಯದಿಂದ ಜನ ಸಾಮಾನ್ಯರು ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ನೆಮ್ಮದಿಯ ಬದುಕು ಸಾಧ್ಯವಿಲ್ಲ ಎಂಬ ಆತಂಕದ ಪರಿಸ್ಥಿತಿ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು. ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಕರ್ನಾಟಕ ಬಂದ್ ರಾಜ್ಯ ಸರ್ಕಾರದ ದ್ವೇಷ ರಾಜಕಾರಣದ ವಾಸ್ತವತೆಯನ್ನು ತೆರೆದಿಟ್ಟಿದೆ. ಸರ್ಕಾರವೇ ಜನರ ಮೇಲೆ ಬಂದ್ ನ್ನು ಹೇರಿ ಜನರ ನೆಮ್ಮದಿ ಕೆಡಿಸಿದೆ. ಜನವರಿ 27ರಂದು ನಡೆಯಬೇಕಿದ್ದ ಬಂದ್ ನ್ನು ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡ ಕಾರಣ 25ಕ್ಕೆ ನಡೆಸುವಂತೆ ಮುಖ್ಯಮಂತ್ರಿಗಳೇ ಕನ್ನಡ ಸಂಘಟನೆಗಳಿಗೆ ಸಲಹೆ ನೀಡಿರುವುದು ನಾಚಿಕೆಗೇಡು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಮತ್ತು ತಾನು ಸೋಲುತ್ತೇನೆ ಎಂಬ ಭಯದಿಂದ ಬಿಜೆಪಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಲುವಾಗಿಯೇ ಈ ರೀತಿ ಬಂದ್ ಮಾಡಲಾಗಿದೆ ಎಂದು ಆರೋಪಿಸಿದರು.

ಜಿಲ್ಲೆಗೆ ಬರುವ ಅಧಿಕಾರಿಗಳು ಬರುವಾಗಲೇ ಸೂಟ್ಕೇಸ್ ಹಿಡಿದುಕೊಂಡು ಬಂದು ಅದನ್ನು ತೆರೆಯದೆ ಹಾಗೆಯೇ ವಾಪಾಸ್ ಹೋಗುವ ಸ್ಥಿತಿ ಇದೆ. ಎಸ್ಪಿ, ಡಿಸಿಗಳು ತಮ್ಮ ತಾಳಕ್ಕೆ ಕುಣಿಯುತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ವರ್ಗಾಯಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮರಳು ಹಾಗೂ ಮರ ಮಾಫಿಯಾ ಪ್ರಬಲವಾಗಿದ್ದು ಅವರ ತಾಳಕ್ಕೆ ಕುಣಿಯದ ಅಧಿಕಾರಿಗಳನ್ನು ರಾಜಕೀಯ ಪ್ರಭಾವ ಬಳಸಿ ವರ್ಗಾವಣೆ ಮಾಡಲಾಗುತ್ತದೆ. ನಾಲ್ಕೂವರೆ ವರ್ಷದಲ್ಲಿ ಹಲವು ಡಿಸಿ, ಎಸ್ಪಿಗಳು ಬದಲಾಗುತ್ತಿದ್ದು ಎಸ್ಪಿ ಡಿಸಿ ಸ್ಥಾನ ಸಂಗೀತ ಕುರ್ಚಿಯಂತೆ ಆಗಿದೆ. ಜಿಲ್ಲೆಯಲ್ಲಿ 94ಸಿ ಸೇರಿದಂತೆ ಹಲವು ಯೋಜನೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಮಾಜಘಾತುಕ ಶಕ್ತಿಗಳೊಂದಿಗೆ ಕಾಂಗ್ರೆಸ್ ಗುರುತಿಸಿಕೊಂಡಿದೆ. ಇದು ಮತೀಯ ಶಕ್ತಿಗಳಿಗೆ ಮಾನಸಿಕ ಬೆಂಬಲ ನೀಡಿದಂತಾಗಿದೆ. ಇದರಿಂದ ಹಿಂದೂ ಸಮಾಜ ಭಯದಿಂದ ಬದುಕುವಂತ ಸ್ಥಿತಿ ನಿರ್ಮಾಣ ಆಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಖಜಾನೆ ಖಾಲಿಯಾಗಿದ್ದು 1.20 ಲಕ್ಷ ಕೋಟಿ ಸಾಲ ಮಾಡಿರುವುದೇ ಈ ಸರ್ಕಾರದ ಸಾಧನೆ. 1.12 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವನ್ನು ಈಗ 2.32 ಲಕ್ಷ ಕೋಟಿಗೆ ಏರಿಸಿದೆ ಎಂದು ಅವರು ಹೇಳಿದರು.

ಶ್ವೇಥ ಪತ್ರ ಹೊರಡಿಸಲಿ: ಶಾಸಕ ಅಂಗಾರರು ಇಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿದ್ದರೂ ಶಕುಂತಳಾ ಶೆಟ್ಟಿ ಪುತ್ತೂರಿಗಾಗಿ ಏನೂ ಮಾಡಿಲ್ಲ. ಮಲ್ಲಿಕಾ ಪ್ರಸಾದ್ ತಂದ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರಷ್ಟೆ ಎಂದರು. ಐದು ವರ್ಷದಲ್ಲಿ ಪುತ್ತೂರು ಕ್ಷೇತ್ರದಲ್ಲಿ 800 ಕೋಟಿ ರೂ ಅನುದಾನ ತಂದಿರುವುದಾಗಿ ಹೇಳುತ್ತಾರೆ. ಅವರು ತಂದಿರುವ ಅನುದಾನದ ಮತ್ತು ಕಾಮಗಾರಿಗಳ ಕುರಿತು ಶ್ವೇಥ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ಕೇಂದ್ರ ಸರ್ಕಾರದಿಂದ ಸಂಸದ ನಳಿನ್ ಕುಮಾರ್ ಕಟೀಲ್ ತಂದಿರುವ ಅನುದಾನದ ವಿವರಗಳನ್ನು ಬಿಡುಗಡೆ ಮಾಡಲು ಸಿದ್ಧರಿರುವುದಾಗಿ ಅವರು ಹೇಳಿದರು.

See also  ಗುಡ್ ಫ್ರೈಡೆ ಪ್ರಯುಕ್ತ ವೆನ್ಲಾಕ್ ನಲ್ಲಿ ಹಣ್ಣು ಹಂಪಲು ವಿತರಣೆ

ಪಕ್ಷ ಅವಕಾಶ ಕೊಟ್ಟರೆ ಮತ್ತೆ ಸ್ಪರ್ಧೆ: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಗೆಲ್ಲುವ ಪಕ್ಷದಲ್ಲಿ ಹೆಚ್ಚು ಅಭ್ಯರ್ಥಿ ಆಕಾಂಕ್ಷಿಗಳಿರುವುದು ಸಹಜ. ನಾನು ಕಳೆದ ಬಾರಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಪರಾಭವಗೊಂಡಿದ್ದೇನೆ. ಈ ಬಾರಿಯೂ ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಮಠಂದೂರು ಹೇಳಿದರು.
ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು