News Kannada
Sunday, December 04 2022

ಕರಾವಳಿ

ಕ್ರೈಸ್ತ ಸಮಾಜದ ಅಭಿವೃದ್ಧಿಗೆ ಪರಿಣಾಮಕಾರಿ ನಾಯಕರ ಅಗತ್ಯವಿದೆ: ಬಿಷಪ್ ಅಲೋಶಿಯಸ್ ಪೌಲ್ ಡಿಸೋಜಾ

Photo Credit :

ಕ್ರೈಸ್ತ ಸಮಾಜದ ಅಭಿವೃದ್ಧಿಗೆ ಪರಿಣಾಮಕಾರಿ ನಾಯಕರ ಅಗತ್ಯವಿದೆ: ಬಿಷಪ್ ಅಲೋಶಿಯಸ್ ಪೌಲ್ ಡಿಸೋಜಾ

ಮೂಡುಬಿದಿರೆ: ಕ್ರೈಸ್ತ ಸಮಾಜದ ಅಭಿವೃದ್ಧಿಗಾಗಿ, ಸಮಾಜ ಮುನ್ನಡೆಸುವ ಪರಿಣಾಮಕಾರಿ ನಾಯಕರ ಅಗತ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಭಿಷಪ್ ಅತೀ ವಂದನೀಯ ಅಲೋಶಿಯಸ್ ಪೌಲ್ ಡಿಸೋಜಾ ಅವರು ಹೇಳಿದರು.

ಅವರು ರವಿವಾರ ಅಲಂಗಾರು ಚರ್ಚ್ ಮೈದಾನದಲ್ಲಿ ಮೂಡುಬಿದಿರೆ ವಲಯ ಕಥೊಲಿಕ್ ಸಭಾದ ಬೆಳ್ಳಿಹಬ್ಬ ಸಮಾರೋಪ ಸಮಾರಂಭದ ಪ್ರಯುಕ್ತ ಆಯೋಜಿಸಲಾದ ಕಥೊಲಿಕ್ ಸಮಾಜೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಮ್ಮ ಸುತ್ತಮುತ್ತಲಿನ ಜನರಲ್ಲಿ ಭಗವಂತನನ್ನು ಕಂಡುಕೊಂಡು, ಸರಕಾರಿ ಹುದ್ದೆಗಳಲ್ಲಿ, ರಾಜಕೀಯದಲ್ಲಿ ಮುಂದಾಳುತ್ವವನ್ನು ತೆಗೆದುಕೊಂಡು, ಸಮಾಜದ ಅಭಿವೃದ್ಧಿಗಾಗಿ ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಮಾಜದ ಬಗ್ಗೆ ಚಿಂತಿಸಿ, ಶ್ರಮಿಸಬೇಕಿದೆ’ ಎಂದು ಅವರು ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಭಿಷಪ್ ಅತೀ ವಂದನೀಯ ಅಲೋಶಿಯಸ್ ಪೌಲ್ ಡಿಸೋಜಾ ಅವರು ದೀಪ ಬೆಳಗಿಸಿ, ಕೇಂದ್ರೀಯ ಅಧ್ಯಕ್ಷ ಅನಿಲ್ ಲೋಬೊ ಫೆಮರ್ಯ್ ಗುಮಟೆ ಬಾರಿಸಿ, ರೊನಾಲ್ಡ್ ಕೊಲಾಸೊ ಅವರು ಪಿಂಗಾರ ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಧಾನ ಭಾಷಣಗೈದ ಅನಿಲ್ ಲೋಬೊ ಫೆಮರ್ಯ್ ಅವರು ಮಾತನಾಡಿ ‘ಅತ್ಯುತ್ತಮ ಸಂವಿಧಾನವುಳ್ಳ, ಜಾತ್ಯತೀತ ಸ್ವತಂತ್ರ ಭಾರತದಲ್ಲಿ ಜೀವಿಸುವ ನಾವು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು, ಹೆಚ್ಚಿನ ನಾಯಕತ್ವವನ್ನು ತೋರ್ಪಡಿಸಿ ಸಾಮಾಜಿಕ ಪರಿವರ್ತನೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಪಣತೊಡಬೇಕಿದೆ. ನಮ್ಮ ಸಾಂವಿಧಾನಿಕ ಹಕ್ಕುಗಳಿಗೆ ಕುತ್ತು ಬಂದಾಗ ಅವುಗಳ ವಿರುದ್ಧ ಹೋರಾಡುವ ಮನೋಭಾವವನ್ನು ಕಥೋಲಿಕ್ ಸಮುದಾಯ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಸ್ವಉದ್ಯಮದಲ್ಲಿ, ರಾಜಕೀಯದಲ್ಲಿ, ಸಹಕಾರಿ ರಂಗದಲ್ಲಿ, ಸರಕಾರಿ ಸೇವೆಗಳಲ್ಲಿ ಇನ್ನಷ್ಟು ಮುಂದುವರಿಯುವುದರ ಜೊತೆಗೆ ಜನರ ಅಗತ್ಯತೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದು ಇಂದಿನ ಅಗತ್ಯ’ ಎಂದರು.

ಕಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ| ಗುರು ಮ್ಯಾಥ್ಯೂ ವಾಸ್, ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ವಂ| ಗುರು ಪಾವ್ಲ್ ಸಿಕ್ವೇರಾ, ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಜೆ.ಆರ್. ಲೋಬೊ, ಕೆ. ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ಉಡುಪಿ ಧರ್ಮಪ್ರಾಂತ್ಯದ ಕಥೋಲಿಕ್ ಸಭಾ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಥೋಲಿಕ್ ಸಭಾ ವಲಯಾಧ್ಯಕ್ಷ  ಹೆರಾಲ್ಡ್ ರೇಗೊ ಪ್ರಾಸ್ತಾವಿಕವಾಗಿ ಮಾತನಾಡಿ ‘ಅವಿಭಜಿತ ಜಿಲ್ಲೆಗಳಲ್ಲಿ ಶಿಸ್ತು, ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಶೈಕ್ಷಣಿಕ, ವೈದ್ಯಕೀಯ ರಂಗಗಳಲ್ಲಿ ಅದ್ವಿತೀಯ ಸೇವೆಯನ್ನು ನೀಡಿರುವ ಕಥೋಲಿಕ ಸಮುದಾಯ ಸ್ವಾಭಿಮಾನ, ಒಗ್ಗಟ್ಟು, ಅಸ್ಮಿತೆ ತೋರ್ಪಡಿಸುವ ಸಂಭ್ರಮವಾಗಿ ಕಥೊಲಿಕ್ ಸಮಾಜೋತ್ಸವವನ್ನು ಆಚರಿಸುತ್ತಿದೆ’ ಎಂದರು.

ಸಮಾರಂಭದಲ್ಲಿ ಬಿಹಾರದ ಬೆಥೀಯ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕವಾದ ಅತೀ ವಂದನೀಯ ಸೆಬೆಸ್ಟಿಯನ್ ಪೀಟರ್ ಗೋವಿಯಸ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ಮಂಗಳೂರು ಕ್ರೈಮ್ ಬ್ರಾಂಚ್ ಎಸಿಪಿ ವೆಲೆಂಟೈನ್ ಡಿಸೋಜಾ, ಐಆರ್ ಎಸ್ ಅಧಿಕಾರಿ ಕು| ಮಿಶಾಲ್ ಕ್ವೀನಿ ಡಿಕೋಸ್ತಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅಲೋಶಿಯಸ್ ಪೌಲ್ ಡಿಸೋಜಾ, ಕಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು, ಕೇಂದ್ರ, ಪ್ರಾಂತ್ಯ ಹಾಗೂ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.

See also  ಸಿಎಂಗೆ ಕರಿಪತಾಕೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರ ಸೆರೆ

ಈ ಸಂದರ್ಭ ಮಾತನಾಡಿದ ಶಾಸಕ ಅಭಯಚಂದ್ರ ಜೈನ್ ‘ನಾನು ಯಾವ ಕಾರಣಕ್ಕೂ ಕ್ರೈಸ್ತ ಸಮಾಜಕ್ಕೆ ದ್ರೋಹ ಬಗೆದವನಲ್ಲ. ಮಂಗಳೂರಿನಲ್ಲಿ ಕೈಸ್ತ ಅಭ್ಯರ್ಥಿಗೆ ಅವಕಾಶ ಕೊಡದಿದ್ದರೆ ಸ್ಪರ್ಧಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದೆ. ರಾಜಕೀಯದಲ್ಲಿ ಕ್ರೈಸ್ತ ಸಮಾಜಕ್ಕೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

183

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು