News Kannada
Sunday, December 04 2022

ಕರಾವಳಿ

ಹಿಂದೂ ಧರ್ಮ ಕೇವಲ ದೇವರ ಪೂಜೆಗೆ ಸೀಮಿತವಲ್ಲ: ಡಾ. ಜಯಪ್ರಕಾಶ್ ಹೆಗ್ಡೆ

Photo Credit :

ಹಿಂದೂ ಧರ್ಮ ಕೇವಲ ದೇವರ ಪೂಜೆಗೆ ಸೀಮಿತವಲ್ಲ: ಡಾ. ಜಯಪ್ರಕಾಶ್ ಹೆಗ್ಡೆ

ಬೆಳ್ತಂಗಡಿ: ಜೀವನ ಸಾರ್ಥಕಗೊಳಿಸಿಕೊಳ್ಳುವುದೇ ಭಾರತೀಯ ಸಂಸ್ಕೃತಿಯ ಮೂಲ. ಜೀವನಕ್ಕೆ ಉತ್ತಮ ವಿಚಾರಗಳನ್ನು ಧಾರಣೆ ಮಾಡಿಕೊಳ್ಳುವುದೇ ಧರ್ಮ. ಹೀಗಾಗಿ ಹಿಂದೂ ಧರ್ಮವನ್ನು ಕೇವಲ ದೇವರ ಪೂಜೆಗೆ ಮಾತ್ರ ಸೀಮಿತಗೊಳಿಸಿಕೊಳ್ಳಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಡಾ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಳದ ಮುಂಭಾಗದ ಮೈದಾನದಲ್ಲಿ ನಡೆದ ರಾ.ಸ್ವ.ಸಂಘದ ವೇಣೂರು ತಾಲೂಕು ಸ್ವಯಂಸೇವಕರ ಸಾಂಘಿಕ್ ನ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಅವರು ಬೌದ್ಧಿಕ್ ನೀಡಿದರು.

ಸಂಘದ ಹುಟ್ಟಿನ ಬಳಿಕ ಹಿಂದೂ ಎನ್ನಲು ನಾಚಿಕೆ ಪಡುವಂತಹ ಸ್ಥಿತಿ ಇಲ್ಲವಾಗಿದೆ. ವ್ಯಕ್ತಿ ನಿರ್ಮಾಣವಾಗದೆ ಸ್ವಾತಂತ್ರ್ಯ ಪಡೆದರೂ ಅದನ್ನು ಉಳಿಸಲು ಸಾಧ್ಯವಿಲ್ಲ ಎಂದರಿತ ಡಾ| ಹೆಡಗೇವಾರ್ ಅವರು ಸಂಘ ಕಾರ್ಯದ ಸಂಕಲ್ಪ ಮಾಡಿದರು. ಒಂದೂರಿನಲ್ಲಿ ಸಂಘ ಇದೆ ಅಂದರೆ ಅದು ಅಲ್ಲಿನ ಸಂಸ್ಕೃತಿಯನ್ನು ಉಳಿಸುವ ತಂಡವೊಂದು ಇದೇ ಎಂಬುದೇ ಅರ್ಥ ಎಂದರು.

ದೇಶದಧರ್ಮ, ಸಂಸ್ಕೃತಿ, ನಡವಳಿಕೆಗಳಿಂದ ಇಡೀ ಜಗತ್ತು ಮತ್ತೆ ಭಾರತದ ಕಡೆ ತಿರುಗಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ವೇದ ಅಂದರೆ ಸಂಶೋಧನೆ, ಜ್ಞಾನ. ಇದರಿಂದ ವ್ಯಕ್ತಿ ಉತ್ಕೃಷ್ಟ ಜ್ಞಾನಿಯಾಗುತ್ತಾನೆ. ವೇದಮಂತ್ರಗಳು ನರಗಳ ಹಾಗು ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದನ್ನೇ ದೇಶದ ನಲ್ವತ್ತು ಲಕ್ಷ ದೇವಸ್ಥಾನಗಳು ಅನೂಚಾನವಾಗಿ ಮಾಡಿಕೊಂಡು ಬಂದಿವೆ ಎಂದರು.

ಹೊರಜಗತ್ತು ಕೇವಲ ಅರ್ಥ ಮತ್ತು ಕಾಮವನ್ನೇ ಜೀವನ ಎಂದು ತಿಳಿದುಕೊಂಡಿದ್ದರೆ ಭಾರತ ಅವೆರಡರ ಜೊತೆಗೆ ಧರ್ಮ ಮತ್ತು ಮೋಕ್ಷವನ್ನೂ ಸೇರಿಸಿಕೊಂಡಿದೆ. ಇದರಲ್ಲಿನ ವಿಸ್ತಾರವಾದ ಮೌಲ್ಯಗಳು ನಮ್ಮ ಬದುಕಿಗೆ ಶ್ರೇಷ್ಠತೆಯನ್ನು ಕಟ್ಟಿಕೊಡುತ್ತವೆ. ಭಾರತವನ್ನು ಭಾರತ ಮಾತೆಯಾದ ಮಕ್ಕಳಾದ ನಮಗೆ ಇನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಭಯೋತ್ಪಾದನೆ, ಮತಾಂತರ, ಜಿಹಾದ್ ಮೊದಲಾದ ಸವಾಲುಗಳನ್ನು ಮೆಟ್ಟಿ ನಿಲ್ಲುವ ಕಾರ್ಯ ಆಗಬೇಕಾಗಿದೆ. ಭಾರತಕ್ಕಾಗಿ ಬದುಕುವ ಸಂಕಲ್ಪ ಮಾಡಿಕೊಳ್ಳೋಣ. ಸಂಸ್ಕೃತಿಗೆ ಬೆಲೆ ಇದ್ದರೂ ನಮ್ಮಲ್ಲಿ ಶಕ್ತಿ ಇಲ್ಲದಿದ್ದರೆಯಾವುದಕ್ಕೂ ಬೆಲೆ ಬರುವುದಿಲ್ಲ. ಸಂಸ್ಕಾರವಿಲ್ಲದ ಯಾವುದೇ ಸಂಘಟನೆಗಳು ಉಳಿಯಲಾರವು. ಹೀಗಾಗಿ ಸಂಘದ ಅಡಿಯಲ್ಲಿ ಸಂಘಟಿತರಾಗೋಣ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಳಂಗಡಿ ಅರಮನೆಡಾ| ಪದ್ಮಪ್ರಸಾದ ಅಜಿಲ ಅವರು, ಸಂಘದ ನಿಸ್ವಾರ್ಥ ಸೇವೆಯನ್ನು ದೇಶದ ಅನೇಕ ಗಣ್ಯರು ಮೆಚ್ಚಿಕೊಂಡಿದ್ದಾರೆ. ಅಹಿಂಸೆಯೊಟ್ಟಿಗೆ ಸಮಕ್ಯ ದರ್ಶನ, ಜ್ಞಾನ, ದರ್ಶನವನ್ನು ಸಂಘದ ಸ್ವಯಂಸೇವಕರು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿರುವುದು ಸಂತಸದ ವಿಚಾರ ಎಂದರು.

ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ, ವೇಣೂರು ತಾಲೂಕು ಸಂಘಚಾಲಕ ಗಣೇಶ್ ಹೆಗ್ಡೆ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸ್ವಯಂಸೇವರಕರಿಂದ ಸೂರ್ಯನಮಸ್ಕಾರ, ಉಪವಿಷ್ಠ ವ್ಯಾಯಾಮ ಪ್ರದರ್ಶನ ನಡೆಯಿತು.

See also  ಪೊಳಲಿ ರಾಜರಾಜೇಶ್ವರಿ ದೇವಿಯ ಮೊರೆ ಹೋದ ರಮಾನಾಥ ರೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು