News Kannada
Tuesday, December 06 2022

ಕರಾವಳಿ

ಪೊಲೀಸ್ ಪೇದೆ ಹಲ್ಲೆ: ಒಬ್ಬನ ಬಂಧನ

Photo Credit :

ಪೊಲೀಸ್ ಪೇದೆ ಹಲ್ಲೆ: ಒಬ್ಬನ ಬಂಧನ

ಬೆಳ್ತಂಗಡಿ: ಸರಗಳ್ಳರನ್ನು ಹಿಡಿಯುತ್ತಿದ್ದ ವೇಳೆ ಪೋಲಿಸ್ ಪೇದೆಯೊಬ್ಬ ಗಾಯಗೊಂಡು ಘಟನೆ ಚಾರ್ಮಾಡಿ ಎಂಬಲ್ಲಿ ಮಂಗಳವಾರ ನಡೆದಿದೆ.

ಧರ್ಮಸ್ಥಳ ಪೋಲಿಸ್ ಠಾಣೆಯ ಜಾವೇದ್ ಎಂಬುವರೇ ಗಾಯಗೊಂಡು ಪೇದೆ. ಇವರು ಹಾಗು ಇಬ್ಬರು ಹೋಮ್ ಗಾರ್ಡ್ ಗಳೊಂದಿಗೆ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಧ್ಯಾಹ್ನ 2.55 ವೇಳೆಗೆ ಬಣಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿರುವಾಗ ಸಂಜೆ 4 ಗಂಟೆ ಸುಮಾರಿಗೆ ಬೈಕ್ ನ್ನು ನಿಲ್ಲಿಸಲು ತಿಳಿಸಿದರು. ಆದರೆ ವಾಹನ ಸವಾರರು ವಾಹನವನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದಾಗ ಒಬ್ಬಾತನನ್ನು ಪೇದೆ ಹಿಡಿದುಕೊಂಡರು.

ಈ ವೇಳೆ ಇನ್ನೊಬ್ಬ ಏಕಾಏಕಿ ಪೋಲಿಸ್ ಪೇದೆಯ ಮೇಲೆ ಎಗರಿ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಜಾವೇದ್ ಗೆ ಹೊಟ್ಟೆ, ಕೈ,ಕಾಲುಗಳಿಗೆ ಕೈಗಳಿಂದ ಗುದ್ದಿ ಗಾಯ ಮಾಡಿದ್ದಾರೆ. ಈ ಸಂದರ್ಭ ಸುಮಂತ್ ಎಂಬ ಆರೋಪಿಯನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಜಾವೇದ್ರವನ್ನುಆಸ್ಪತ್ರೆಗೆ ಸೇರಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಶ್ರೀ ಭಾರತಿ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಕನ ವಿರುದ್ಧ ಪಿತೂರಿ: ಪೋಷಕರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು