News Kannada
Sunday, November 27 2022

ಕರಾವಳಿ

ಸುಳ್ಯದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟ ಪ್ರತಿಭಟನೆ - 1 min read

Photo Credit :

ಸುಳ್ಯದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟ ಪ್ರತಿಭಟನೆ

ಸುಳ್ಯ: ಸುಳ್ಯ ನಗರ ಪಂಚಾಯಿತಿ ಸಮುದಾಯ ಸಂಘಟಕಿ ಜಯಲಕ್ಷ್ಮೀ ಅವರನ್ನು ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಯಶಸ್ವಿನಿ ಪ್ರದೇಶ ಮಟ್ಟದ ನಗರ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ನ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇವರನ್ನು ಮಡಿಕೇರಿ ನಗರ ಸಭೆಯ ಸಮುದಾಯ ಸಂಘಟಕರಾಗಿ ವರ್ಗಾಯಿಸಿ ಆದೇಶ ಬಂದಿತ್ತು. ಅವರ ಸ್ಥಾನಕ್ಕೆ ಯಾರೂ ಬಾರದಿರುವುದರಿಂದ ಆಕ್ರೋಶಗೊಂಡ ಸ್ವಸಹಾಯ ಸಂಘಗಳ ಸದಸ್ಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ನ.ಪಂ.ಅಧ್ಯಕ್ಷೆ ಮತ್ತು ಮುಖ್ಯಾಧಿಕಾರಿ ಪ್ರತಿಭಟನಾಕಾರರ ಅಹವಾಲು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ ಪ್ರತಿಭಟನಾಕಾರರು ಲಿಖಿತ ಉತ್ತರಕ್ಕೆ ಆಗ್ರಹಿಸಿದರು. ಬಳಿಕ ನಡೆದ ನಗರ ಪಂಚಾಯಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನ.ಪಂ.ನ ಸಮುದಾಯ ಸಂಘಟಕಿ ಹುದ್ದೆಗೆ ಬೇರೆಯವರು ಆಗಮಿಸಿದ ಬಳಿಕ ಅವರನ್ನು ಇಲ್ಲಿಂದ ವರ್ಗಾಯಿಸುವುದು ಎಂಬ ನಿರ್ಣಯ ಕೈಗೊಂಡು ಅದನ್ನು ಪ್ರತಿಭಟನಾಕಾರರಿಗೆ ತಿಳಿಸಲಾಯಿತು.

ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ ಮತ್ತು ಮುಖ್ಯಾಧಿಕಾರಿ ಪ್ರತಿಭಟನಾಕಾರರಿಗೆ ಈ ವಿಷಯವನ್ನಯ ಲಿಖಿತವಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ಸುಲೋಚನಾ, ಕಾರ್ಯದರ್ಶಿ ಶರೀಫಾ, ಸದಸ್ಯರಾದ ಭಾರತಿ ಬಂಟ್ವಾಳ, ಶಶಿಕಲಾ, ಸಾವಿತ್ರಿ, ಸರೋಜಿನಿ, ಉಮಾವತಿ, ರಂಜಿನಿ, ಯಶೋಧಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

See also  ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳು ನಾಳೆಯಿಂದ ಸೀಲ್​ಡೌನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು